Bitter Gourd Side Effects: ಗರ್ಭಿಣಿಯರು ಮರೆತೂ ಕೂಡ ಈ ತರಕಾರಿಯನ್ನು ಸೇವಿಸಬಾರದು!
Bitter Gourd Health Tips: ರುಚಿಯಲ್ಲಿ ಹಾಗಲಕಾಯಿ ಕಹಿಯಾಗಿರುತ್ತದೆ. ಆದರೆ, ನಿತ್ಯ ಹಾಗಲಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ (Health News In Kannada)
Bitter Gourd Side Effects: ಹಾಗಲಕಾಯಿ ರುಚಿಯಲ್ಲಿ ತುಂಬಾ ಕಹಿಯಾಗಿರುತ್ತದೆ ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ, ಹಾಗಲಕಾಯಿ ವಿಶೇಷವಾಗಿ ಆರೋಗ್ಯಕರ ಹೃದಯಕ್ಕೆ ತುಂಬಾ ಒಳ್ಳೆಯದು. ಆದರೆ ಹಾಗಲಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? (pregnant women should maintain distance from this vegitable ) ಹೌದು, ಹಾಗಲಕಾಯಿಯನ್ನು ನಿತ್ಯ ಸೇವಿಸುವುದರಿಂದ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಯಾವ ಜನರು ಹಾಗಲಕಾಯಿಯನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. (Health News In Kannada)
ಈ ಜನರು ಮರೆತು ಕೂಡ ಹಾಗಲಕಾಯಿಯನ್ನು ಸೇವಿಸಬಾರದು
ಗರ್ಭಿಣಿಯರು ಸೇವಿಸಬಾರದು (Bitter Gourd Side Effects In Pregnancy)
ಹಾಗಲಕಾಯಿಯ ರಸವನ್ನು ಸೇವಿಸುವುದರಿಂದ ಋತುಚಕ್ರದ ಹರಿವು ಹೆಚ್ಚಾಗುತ್ತದೆ. ಇದೇ ವೇಳೆ, ಗರ್ಭಾವಸ್ಥೆಯಲ್ಲಿ ಹಾಗಲಕಾಯಿಯ ಅತಿಯಾದ ಸೇವನೆಯು ಗರ್ಭಪಾತಕ್ಕೆ ಕಾರಣವಾಗಬಹುದು, ಆದ್ದರಿಂದ ಗರ್ಭಿಣಿಯರು ಹಾಗಲಕಾಯಿ ರಸವನ್ನು ಕುಡಿಯುವುದನ್ನು ತಪ್ಪಿಸಬೇಕು.
ಇದನ್ನೂ ಓದಿ-Diabetes ಮತ್ತು Weight Loss ಗಾಗಿ ಉಪಹಾರದಲ್ಲಿ ಈ ನಾಲ್ಕು ಲೋ-ಕಾರ್ಬ್ ರೆಸಿಪಿಗಳನ್ನು ಟ್ರೈ ಮಾಡಿ ನೋಡಿ!
ಯಕೃತ್ತು ಹಾನಿಗೊಳಗಾಗಬಹುದು (Bitter Gourd Side Effects On Liver)
ಮಧುಮೇಹಿಗಳು ಹಾಗಲಕಾಯಿಯ ರಸವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು. ಆದರೆ ಇದು ನಿಮ್ಮ ಯಕೃತ್ತಿಗೆ ಅಪಾಯಕಾರಿ ಎಂದು ಸಾಬೀತಾಗಬಹುದು. ಇದು ಯಕೃತ್ತಿಗೆ ಹಾನಿ ಉಂಟುಮಾಡಬಹುದು. ಆದ್ದರಿಂದ, ಮಧುಮೇಹಿಗಳು ಹಾಗಲಕಾಯಿಯನ್ನು ಪ್ರತಿದಿನ ಸೇವಿಸುವುದನ್ನು ತಪ್ಪಿಸಬೇಕು. ಇನ್ನೊಂದೆಡೆ, ನಿಮಗೆ ಯಕೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಹಾಗಲಕಾಯಿಯನ್ನು ಮರೆತೂ ಕೂಡ ಸೇವಿಸಬಾರದು.
ಇದನ್ನೂ ಓದಿ-Fennel Seeds Benefits: ಕೂದಲುದುರುವ ಸಮಸ್ಯೆಗೂ ರಾಮಬಾಣ ಸೊಂಫು, ಬಳಸುವ ವಿಧಾನ ನಿಮಗೂ ತಿಳಿದಿರಲಿ!
ರಕ್ತದಲ್ಲಿ ಕಡಿಮೆ ಸಕ್ಕರೆ ಹೊಂದಿರುವ ರೋಗಿಗಳು ಸೇವಿಸಬಾರದು (Bitter Gourd For Diabetes)
ಹಾಗಲಕಾಯಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಯಾರ ರಕ್ತದಲ್ಲಿನ ಸಕ್ಕರೆ ಕಡಿಮೆ ಇರುತ್ತದೆಯೋ, ಅಂಥವರು ಹಾಗಲಕಾಯಿಯನ್ನು ಸೇವಿಸಬಾರದು. . ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ