Black carrot benefits : ನಾವು ಕೇಸರಿ ಬಣ್ಣದ ಕ್ಯಾರೆಟ್ ನೋಡಿದ್ದೇವೆ ಮತ್ತೆ ತಿಂದಿದ್ದೇವೆ. ಅಲ್ಲದೆ, ಇದನ್ನ ಅಡುಗೆಗೆ, ಫಲಾವ್ ಮಾಡಲು, ಜ್ಯೂಸ್ ಮಾಡಲು ಬಳಸುತ್ತಾರೆ. ಆದ್ರೆ, ನಿಮಗೆ ಬ್ಲಾಕ್ ಕ್ಯಾರೆಟ್ ಬಗ್ಗೆ ಗೊತ್ತಾ? ಹೌದು, ಇದು ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.


COMMERCIAL BREAK
SCROLL TO CONTINUE READING

ಬ್ಲಾಕ್ ಕ್ಯಾರೆಟ್ ನಲ್ಲಿ ವಿಟಮಿನ್ ಎ ಇರುತ್ತದೆ, ಇದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಈ ಕ್ಯಾರೆಟ್ ದೇಹಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್-ಎ, ವಿಟಮಿನ್-ಸಿ, ಮ್ಯಾಂಗನೀಸ್, ವಿಟಮಿನ್-ಬಿ, ಫೈಬರ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಹಲವು ರೀತಿಯ ಪೋಷಕಾಂಶಗಳು ಇದರಲ್ಲಿವೆ. ಅದರಲ್ಲೂ ಚಳಿಗಾಲದಲ್ಲಿ ದೊರೆಯುವ ಕಪ್ಪು ಕ್ಯಾರೆಟ್ ಬೇರೆ ಯಾವುದೇ ಕ್ಯಾರೆಟ್ ಗಿಂತಲೂ ಹೆಚ್ಚಿನ ಲಾಭವನ್ನು ನೀಡುತ್ತದೆ. ಕಪ್ಪು ಕ್ಯಾರೆಟ್ ಮಲಬದ್ಧತೆ ರೋಗಿಗಳಿಗೆ ರಾಮಬಾಣಕ್ಕಿಂತ ಕಡಿಮೆಯಿಲ್ಲ.


ಇದನ್ನೂ ಓದಿ : Benefits of onion: ಉದ್ದನೆಯ ಕಪ್ಪು ಕೂದಲಿಗಾಗಿ ಈರುಳ್ಳಿ ಜೊತೆ ಇದನ್ನು ಸೇರಿಸಿ ಬಳಸಿ


ಕಪ್ಪು ಕ್ಯಾರೆಟ್ ನ ಪ್ರಯೋಜನಗಳು


1. ಆರೋಗ್ಯ ತಜ್ಞರ ಪ್ರಕಾರ ಬ್ಲಾಕ್ ಕ್ಯಾರೆಟ್ ಚಳಿಗಾಲದಲ್ಲಿ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರೊಂದಿಗೆ ಹೊಟ್ಟೆ ನೋವು ಮತ್ತು ಗ್ಯಾಸ್ ಸಮಸ್ಯೆಯನ್ನೂ ದೂರ ಮಾಡುತ್ತದೆ. ಇದು ನಿಮ್ಮ ದೇಹದ ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ.


2. ಆಂಥೋಸಯಾನಿನ್ ಬ್ಲಾಕ್ ಕ್ಯಾರೆಟ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಪ್ಪು ಕ್ಯಾರೆಟ್ ರಕ್ತದಲ್ಲಿರುವ ಕಲ್ಮಶಗಳನ್ನು ಸ್ವಚ್ಛಗೊಳಿಸುವ ಮೂಲಕ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕ್ಯಾರೆಟ್ ಜ್ಯೂಸ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ.


3. ಮಧುಮೇಹದಿಂದ ಬಳಲುತ್ತಿರುವವರಿಗೆ ಬ್ಲಾಕ್ ಕ್ಯಾರೆಟ್ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.


4. ವೈದ್ಯರು ಕೂಡ ಇದನ್ನು ಸೇವಿಸುವಂತೆ ಒತ್ತಾಯಿಸುತ್ತಾರೆ. ಇದರ ಬಳಕೆಯಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ನೀವು ಕನ್ನಡಕವನ್ನು ತೊಡೆದುಹಾಕಲು ಬಯಸಿದರೆ, ಇಂದೇ ಕ್ಯಾರೆಟ್ ತಿನ್ನಲು ಪ್ರಾರಂಭಿಸಿ.


ಇದನ್ನೂ ಓದಿ : ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್‌ ಮಾಡುವುದು ಒಳ್ಳೆಯದೇ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.