Black Tomato Health Benefits : ಟೊಮೆಟೊ ಬೆಲೆ ಗಗನಕ್ಕೇರಿರುವುದು ಎಲ್ಲರಿಗೂ ಗೊತ್ತು. ಬೆಲೆ ಕೊಟ್ಟರೂ ಖರೀದಿಸಿ ತಿನ್ನುವುದು ನಿಶ್ಚಿತ. ಏಕೆಂದರೆ ಟೊಮೆಟೊದೊಂದಿಗೆ ಹಾಕಿ ಮಾಡಿದ ಆಹಾರಗಳು ಬಾಯಿಗೆ ಹೆಚ್ಚು ರುಚಿಯನ್ನು ನೀಡುತ್ತವೆ. ಮಾರುಕಟ್ಟೆಯಲ್ಲಿ ಕೆಂಪು ಟೊಮೆಟೊವನ್ನು ಹೆಚ್ಚಾಗಿ ನೋಡುತ್ತೇವೆ. ಆದರೆ ನೀವು ಹಿಂದೆಂದೂ ನೋಡಿರದ ಬಣ್ಣದ ಟೊಮೆಟೊವನ್ನು ಇಂದು ನಾವು ನಿಮಗೆ ತೋರಿಸಲಿದ್ದೇವೆ. ಇದಲ್ಲದೆ, ನಾವು ಇದರ ಪ್ರಯೋಜನಗಳನ್ನು ಸಹ ವಿವರಿಸಲಿದ್ದೇವೆ.


COMMERCIAL BREAK
SCROLL TO CONTINUE READING

ನೀವು ಆಗಾಗ್ಗೆ ಕೆಂಪು ಟೊಮೆಟೊಗಳನ್ನು ನೋಡುತ್ತೀರಿ. ಕಪ್ಪು ಟೊಮೆಟೊಗಳನ್ನು ಎಂದಾದರೂ ನೋಡಿದ್ದೀರಾ? ಈಗ ಮಾರುಕಟ್ಟೆಗಳಲ್ಲಿ ಕಪ್ಪು ಬಣ್ಣದ ಟೊಮೆಟೊ ಲಭ್ಯವಿದೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.


ಇದನ್ನೂ ಓದಿ: 15 ದಿನದಲ್ಲಿ ತೂಕ ಇಳಿಸುತ್ತೆ ಮೆಕ್ಕೆಜೋಳ, ಆರೋಗ್ಯಕ್ಕಿದೆ ಭರಪೂರ ಲಾಭ!


ಈ ಕಪ್ಪು ಟೊಮೆಟೊಗಳನ್ನು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಎಂದು ವರದಿಯಾಗಿದೆ. ಇದರ ಬೀಜಗಳು ಸಹ ಕಪ್ಪು ಬಣ್ಣದಲ್ಲಿರುತ್ತವೆ. ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಅದರಲ್ಲೂ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಟೊಮೆಟೊದಿಂದ ತಯಾರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಜೊತೆಗೆ, ಇದು ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ.


ಸದ್ಯ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದರಿಂದ ಈ ಕಪ್ಪು ಟೊಮೆಟೊ ಬೆಲೆಯೂ ಯಾರೂ ನಿರೀಕ್ಷಿಸದ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವುಗಳನ್ನು ಬೆಳೆದ ರೈತರು ತುಂಬಾ ಖುಷಿಯಾಗಿದ್ದಾರೆ. ಆದರೆ, ಕೆಲವೆಡೆ ಟೊಮೆಟೊ ಬೆಲೆ ದುಬಾರಿಯಾಗಿದ್ದರಿಂದ ಜನ ಕೊಂಡುಕೊಳ್ಳುತ್ತಿಲ್ಲ. 


ಇದನ್ನೂ ಓದಿ: ಚಂಪಾಕಲಿ 100% ಬೇಕರಿ ರೀತಿಯಲ್ಲೇ ಮಾಡುವ ವಿಧಾನ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.