Blood Cancer Signs: ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್ ನಂತೆಯೇ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಗಳಲ್ಲಿ ಕ್ಯಾನ್ಸರ್ ಕೂಡ ಒಂದಾಗಿದೆ. ಕ್ಯಾನ್ಸರ್ ಒಂದು ವಿಶಾಲ ಪದ. ವೈದ್ಯಕೀಯ ಭಾಷೆಯಲ್ಲಿ ಸೆಲ್ಯುಲಾರ್ ಬದಲಾವಣೆಗಳು ಕೋಶಗಳ ಅನಿಯಂತ್ರಿತ ಬೆಳವಣಿಗೆ ಮತ್ತು ವಿಭಜನೆಗೆ ಕಾರಣವಾದಾಗ ಉಂಟಾಗುವ ರೋಗವನ್ನು ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಹಲವು ಬಾರಿ ಅಂತಿಮ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುವುದರಿಂದ ಇದು ಮಾರಣಾಂತಿಕ ಎಂದು ಸಾಬೀತುಪಡಿಸಬಹುದು.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಈ ಕಾಯಿಲೆಯ ಬಗ್ಗೆ ಹಲವರಲ್ಲಿ ತಪ್ಪಾದ ಕಲ್ಪನೆ ಇದೆ. ಒಮ್ಮೆ ಈ ಕಾಯಿಲೆ ಬಂತೆಂದರೆ ಅದನ್ನು ಗುಣಪಡಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ನಂಬಿದ್ದಾರೆ. ಇನ್ನೂ ಕೆಲವರು ಕ್ಯಾನ್ಸರ್ (Cancer) ಸಿರಿವಂತರ ಕಾಯಿಲೆ, ಬಡವರು ಇಂತಹ ಕಾಯಿಲೆಗೆ ಚಿಕಿತ್ಸೆ ಪಡೆಯಲು ಸಾಧ್ಯವೇ ಎಂದು ಯೋಚಿಸುವುದೂ ಉಂಟು. ಆದರೆ ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಿದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ.


ಇದನ್ನೂ ಓದಿ - Johnson & Johnson ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು, ಕಂಪನಿಗೆ ಭಾರಿ ಆಘಾತ


ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಬ್ಲಡ್ ಕ್ಯಾನ್ಸರ್ (Blood Cancer) ಅಂದರೆ ರಕ್ತದ ಕ್ಯಾನ್ಸರ್ ಕೂಡ ಒಂದಾಗಿದೆ. ನಾವಿಂದು ನಿಮಗೆ ರಕ್ತ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಸಲಿದ್ದು ನಿಮಗೂ ಇಂತಹ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ. 


ರಕ್ತ ಕ್ಯಾನ್ಸರ್ ಲಕ್ಷಣಗಳು (Blood Cancer Symptoms) :
- ಇದರಲ್ಲಿ ರೋಗಿಯ ಬಾಯಿ, ಗಂಟಲು, ಚರ್ಮ ಮತ್ತು ಶ್ವಾಸಕೋಶದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದರ ಜೊತೆಗೆ ತೂಕವೂ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. 


- ಈ ಸಮಯದಲ್ಲಿ ರೋಗಿಗೆ ಸುಸ್ತು ಹೆಚ್ಚಾಗುತ್ತದೆ. ಕೆಂಪು ರಕ್ತ ಕಣಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ದೇಹದಲ್ಲಿ ರಕ್ತದ ಕೊರತೆ ಉಂಟಾಗುತ್ತದೆ.


ಇದನ್ನೂ ಓದಿ - Sanitary Napkins ಬಳಸುವುದರಿಂದ Cancer ಬರುತ್ತದೆಯೇ?


- ಈ ಸಮಯದಲ್ಲಿ ಮೂಳೆಗಳು ಮತ್ತು ಸ್ನಾಯುಗಳಲ್ಲಿ ನೋವು, ಹೊಟ್ಟೆ ಉಬ್ಬರ, ಮೂತ್ರ- ಮಲ  ವಿಸರ್ಜನೆಯ ಸಮಯದಲ್ಲಿ ನೋವು ಮತ್ತು ಹಸಿವು ಕಡಿಮೆಯಾಗುವುದು ಅಥವಾ ಹಸಿವೇ ಆಗುವುದಿಲ್ಲ. ಪದೇ ಪದೇ ಜ್ವರ ಕಾಣಿಸಿಕೊಳ್ಳಬಹುದು.


-  ವಾಂತಿ ಅಥವಾ ಅತಿಸಾರ, ಚರ್ಮದಲ್ಲಿ ತುರಿಕೆ, ನೀಲಿ ಕಲೆಗಳ ಗುರುತುಗಳು ಮತ್ತು ದವಡೆಗಳಲ್ಲಿ ಊತ ಮತ್ತು ರಕ್ತಸ್ರಾವದಂತಹ ಲಕ್ಷಣಗಳು ಆಗಾಗ್ಗೆ ಕಂಡು ಬರುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.


- ಅಷ್ಟೇ ಅಲ್ಲದೆ ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಮೂಳೆಗಳು ದುರ್ಬಲವಾಗಲು ಪ್ರಾರಂಭಿಸುತ್ತವೆ, ವ್ಯಕ್ತಿಯ ದೇಹದಲ್ಲಿ ನಿರಂತರವಾಗಿ ಕ್ಯಾಲ್ಸಿಯಂ ಕೊರತೆ ಕಂಡು ಬರುತ್ತದೆ. ಇಂತಹ ಲಕ್ಷಣಗಳು ಯಾರಿಗಾದರೂ ಇದ್ದಲ್ಲಿ ಮೊದಲು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಿರಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.