ಮಣ್ಣು ತಿನ್ನುವುದು ಕೆಟ್ಟ ಅಭ್ಯಾಸ ಎಂದು ಹಿರಿಯರು ಮನೆಯಲ್ಲಿ ಹೇಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಮಣ್ಣು ತಿನ್ನುವುದರಿಂದ ಹೊಟ್ಟೆಯಲ್ಲಿ ಹುಳ ಆಗುತ್ತದೆ, ಶರೀರಕ್ಕೆ ತೊಂದರೆಯಾಗುತ್ತದೆ ಎಂದು ನಾವು ಕೇಳಿದ್ದೇವೆ. ಆದರೆ ಇಂದು ನಾವು ಮಣ್ಣಿನ ಪ್ರಯೋಜನವನ್ನು ಹೇಳುತ್ತೇವೆ. ಇದನ್ನು ಕೇಳಿದರೆ ನೀವು ಶಾಕ್ ಆಗ್ತೀರ. ಅಷ್ಟೇ ಅಲ್ಲ ತಕ್ಷಣದಿಂದಲೇ ಈ ಸೂತ್ರವನ್ನು ಅನುಸರಿಸುತ್ತೀರ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ದೇಹದ ಫ್ಯಾಟ್ ಕಡಿಮೆ ಮಾಡಲು ಜನರು ಇನ್ನಿಲ್ಲದ ಪ್ರಯತ್ನ ಮದುತ್ತಾರೆ. ಆದರೆ ಮಣ್ಣು ಸೇವನೆ ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಇದು ವಿಚಿತ್ರ ಎನಿಸಿದರೂ ಸಂಶೋಧನೆ ಇದನ್ನು ಬಹಿರಂಗಪಡಿಸಿದೆ.


ಅಧ್ಯಯನದ ಪ್ರಕಾರ, ಭೋಜನದೊಂದಿಗೆ ವಿಶೇಷ ರೀತಿಯ ಮಣ್ಣನ್ನು ತಿನ್ನುವುದರ ಮೂಲಕ ಸ್ಥೂಲಕಾಯವನ್ನು ನಿಯಂತ್ರಿಸಬಹುದು. ಮಣ್ಣು ತಿನ್ನುವುದರಿಂದ,  ದೇಹದಲ್ಲಿ ಹೆಪ್ಪುಗಟ್ಟಿದ ಕೊಬ್ಬು ಬಿಡುಗಡೆಯಾಗುತ್ತದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.


ಅನೇಕ ದೇಶಗಳ ಜನರು ಮಣ್ಣನ್ನು ತಿನ್ನುತ್ತಾರೆ:
ಆಸ್ಟ್ರೇಲಿಯಾದಲ್ಲಿ ಈ ನಿರ್ದಿಷ್ಟ ರೀತಿಯ ಮಣ್ಣಿನಿಂದಾಗಿ ದಪ್ಪ ಇಲಿಗಳು  ಸ್ವಯಂಚಾಲಿತವಾಗಿ ತೂಕ ಕಳೆದುಕೊಂಡಿವೆ ಎಂದು ಸಂಶೋಧನೆ ಹೇಳಿದೆ. ಇತಿಹಾಸವನ್ನು ಗಮನಿಸಿದರೆ, ಹಲವರು ಮಣ್ಣನ್ನು ತಿನ್ನಲು ಭಾವಿಸಿಕೊಳ್ಳುತ್ತಿದ್ದರು. ಗರ್ಭಿಣಿ ಮಹಿಳೆಯರಿಗೆ ಮಣ್ಣು ತಿನ್ನುವ ಬಯಕೆ ಇರುವುದು ಸಾಮಾನ್ಯ. ಈ ವರದಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಅನೇಕ ಸಂಸ್ಕೃತಿಗಳ ಜನರು ಮಣ್ಣನ್ನು ತಿನ್ನುತ್ತಾರೆ ಎಂದು ವರದಿಯಾಗಿದೆ.