Medicine Prices Slashed : 2024 ರ ಅಂತ್ಯಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ಕ್ಯಾನ್ಸರ್ ನಂತಹ ರೋಗಗಳ ವಿರುದ್ಧದ ಹೋರಾಟಕ್ಕೆ ಈ ವರ್ಷವನ್ನು ಯಾವಾಗಲೂ ಪ್ರಮುಖವೆಂದು ಪರಿಗಣಿಸಲಾಗುತ್ತದೆ.ಡಿಸೆಂಬರ್ ತಿಂಗಳಿನಲ್ಲಿಯೇ ರಷ್ಯಾ ಕ್ಯಾನ್ಸರ್ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿತ್ತು. ಈ ಹೇಳಿಕೆ ನಿಜವಾಗಿದ್ದರೆ, ರಷ್ಯಾದ ಈ mRNA ಆಧಾರಿತ ಲಸಿಕೆ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರುತ್ತದೆ. ಮತ್ತೊಂದೆಡೆ, ಈ ವರ್ಷದ ಜೂನ್‌ನಲ್ಲಿ ಭಾರತ ಸರ್ಕಾರವು 54 ಔಷಧಿಗಳು ಮತ್ತು 8 ವಿಶೇಷ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿದೆ. 


COMMERCIAL BREAK
SCROLL TO CONTINUE READING

ಬಜೆಟ್ ನಲ್ಲಿ ಸಿಕ್ಕ ಉಡುಗೊರೆ :
ಇದಾದ ಬಳಿಕ ಲೋಕಸಭೆ ಚುನಾವಣೆ ಬಳಿಕ ಮಂಡಿಸಿದ ಪೂರ್ಣ ಪ್ರಮಾಣದ ಹಣಕಾಸು ಬಜೆಟ್ ನಲ್ಲಿ ಜನ ಸಾಮಾನ್ಯರಿಗೆ ದೊಡ್ಡ ಪರಿಹಾರ ನೀಡಿದ್ದು, ನೋವು ನಿವಾರಕ, ಆ್ಯಂಟಿಬಯೋಟಿಕ್ ಸೇರಿದಂತೆ 70 ಅಗತ್ಯ ಔಷಧಿಗಳ ಬೆಲೆ ಇಳಿಕೆಯಾಗಿದೆ. ಜೂನ್‌ನಲ್ಲಿ ಸರ್ಕಾರ ಹಲವು ಅಗತ್ಯ ಔಷಧಿಗಳ ಬೆಲೆಯನ್ನು ಇಳಿಸಿತ್ತು. ಎನ್‌ಪಿಪಿಎಯ 124ನೇ ಸಭೆಯಲ್ಲಿ 54 ಜನರಿಕ್ ಔಷಧಿಗಳು ಮತ್ತು 8 ವಿಶೇಷ ಔಷಧಿಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ಈ ಬಾರಿಯೂ ಆ್ಯಂಟಿಬಯೋಟಿಕ್ಸ್, ಮಲ್ಟಿ ವಿಟಮಿನ್, ಮಧುಮೇಹ, ಹೃದಯ ಸಂಬಂಧಿ ಔಷಧಿಗಳ ಬೆಲೆ ಇಳಿಕೆಯಾಗಿದ್ದು, ಇದರೊಂದಿಗೆ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳನ್ನೂ ಅಗ್ಗವಾಗಿಸಲಾಯಿತು.


ಇದನ್ನೂ ಓದಿ : ಈ ಹಣ್ಣು ಯೂರಿಕ್ ಆಸಿಡ್ ಹರಳುಗಳನ್ನು ಫಿಲ್ಟರ್ ಮಾಡುತ್ತೆ; ಇದನ್ನ ಹೇಗೆ ಸೇವಿಸಬೇಕೆಂದು ತಿಳಿದುಕೊಳ್ಳಿರಿ!!


ಇದರ ನಂತರ, ಆಗಸ್ಟ್ ತಿಂಗಳ ಪೂರ್ಣ ಬಜೆಟ್ ನಂತರ ನಡೆದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ (NPPA) ಸಭೆಯಲ್ಲಿ ಇನ್ನೂ ಅನೇಕ ಅಗತ್ಯ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲು NPPA ನಿರ್ಧರಿಸಿತು . NPPA ದೇಶದಲ್ಲಿ ಮಾರಾಟವಾಗುವ ಅಗತ್ಯ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತದೆ. ಇದನ್ನು ಸಾಮಾನ್ಯವಾಗಿ ವಿವಿಧ ರೋಗಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಈ ಸಭೆಯಲ್ಲಿ 70 ಸಾಮಾನ್ಯ ಔಷಧಿಗಳು ಹಾಗೂ 4 ವಿಶೇಷ ಔಷಧಿಗಳ ಬೆಲೆ ಇಳಿಕೆಗೆ ನಿರ್ಣಯ ಕೈಗೊಳ್ಳಲಾಯಿತು.


ಈ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಪರಿಹಾರ : 
ನೋವು ನಿವಾರಕಗಳು, ಆಂಟಿ ಬಯೋಟಿಕ್, ಜ್ವರ, ಸೋಂಕು, ಅತಿಸಾರ, ಸ್ನಾಯು ನೋವು, ಮಧುಮೇಹ, ರಕ್ತದೊತ್ತಡ, ಹೃದಯ ಮತ್ತು ಇತರ ಜೀವನಶೈಲಿ ಸಂಬಂಧಿತ ಔಷಧಗಳನ್ನು ಒಳಗೊಂಡಿರುವ 70 ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲು NPPA ನಿರ್ಧರಿಸಿದೆ. ಇದಲ್ಲದೆ, 4 ವಿಶೇಷ ಫಾರ್ಮುಲೆಶನ್ ಔಷಧಿಗಳ ಬೆಲೆಯನ್ನು ಸಹ ಕಡಿಮೆ ಮಾಡಲಾಗಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.