Brain Myths : ಇದು ನಮ್ಮ ಸೂಪರ್ ಹೀರೋ ಮೆದುಳಿನ ಬಗ್ಗೆ ಹೇಳಲಾದ ಮಹಾಸುಳ್ಳು..!
ಮಸ್ತಿಷ್ಕ, ಬ್ರೈನ್ ಎಂದೆಲ್ಲಾ ಕರೆಯಲಾಗುವ ಮೆದುಳು ನಮ್ಮ ಶರೀರದ ಅತಿ ಮುಖ್ಯ ಅಂಗ. ನಿಮಗೆ ಗೊತ್ತಿರಬಹುದು. ನಾವು ನಮ್ಮ ಮೆದುಳಿನ ಶೇ. 10 ರಷ್ಟು ಶಕ್ತಿಯನ್ನು ಮಾತ್ರ ಬಳಕೆ ಮಾಡುತ್ತೇವೆ ಅಂತ ಕೆಲವರು ಹೇಳುತ್ತಾರೆ.
ಬೆಂಗಳೂರು : ಮಸ್ತಿಷ್ಕ, ಬ್ರೈನ್ (Brain) ಎಂದೆಲ್ಲಾ ಕರೆಯಲಾಗುವ ಮೆದುಳು ನಮ್ಮ ಶರೀರದ ಅತಿ ಮುಖ್ಯ ಅಂಗ. ನಿಮಗೆ ಗೊತ್ತಿರಬಹುದು. ನಾವು ನಮ್ಮ ಮೆದುಳಿನ ಶೇ. 10 ರಷ್ಟು ಶಕ್ತಿಯನ್ನು ಮಾತ್ರ ಬಳಕೆ ಮಾಡುತ್ತೇವೆ ಅಂತ ಕೆಲವರು ಹೇಳುತ್ತಾರೆ. ಒಂದು ವೇಳೆ ನಾವು ಮೆದುಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಶಕ್ತರಾದರೆ, ಏನೆಲ್ಲಾ ಮಾಡಬಹುದು..? ಎಂಬ ಪ್ರಶ್ನೆಯನ್ನೂ ಅವರು ಕೇಳುತ್ತಾರೆ.
ಇದು ಸತ್ಯವೇ..?
ನಾವು ಕೇವಲ ಮೆದುಳಿನ ಶೇ. 10 ರಷ್ಟು ಶಕ್ತಿಯನ್ನು ಮಾತ್ರ ಬಳಸುತ್ತೇವೆ ಅನ್ನೋದು ಸತ್ಯವೇ..? ಅಥವಾ ಯಾರೋ ಏನೋ ಹೇಳಿದ್ರು, ಅಂತ ನಾವು ಕಣ್ಮುಚ್ಚಿ ಹೌದು ಅಂತಾ ಒಪ್ಪಿಕೊಂಡೆವಾ..? ನಮ್ಮ ಮೆದುಳಿನ ಶೇ. 90 ರಷ್ಟು ಭಾಗ ಏನೂ ಕೆಲಸ ಮಾಡದೇ ಸೋಮಾರಿಯಾಗಿ (Lazy) ಕುಳಿತಿದೆಯಾ..? ಅದೂ ಕೆಲಸಕ್ಕೆ ಇಳಿದರೆ ಅಬ್ಬಬ್ಬ..! ನಾವು ಏನೆಲ್ಲಾ ಮಾಡಬಹುದು ಎಂಬ ಯೋಚನೆ ನಿಮಗೆ ಬರುತ್ತಿದೆಯಾ..? ಮೆದುಳಿನ ಬಗ್ಗೆ ಮೆದುಳಿಗಿಷ್ಟು ಕೆಲಸ ಕೊಡೋಣ.
ಇದನ್ನೂ ಓದಿ : Dio, Perfume ಬಳಸುವ ಮೊದಲು ಅದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ತಿಳಿಯಿರಿ
ಮೆದುಳು ಅನ್ನೋದು ಏನು..? ಇದು ಏನೇನು ಮಾಡಬಲ್ಲದು..?
ಮೆದುಳು (Brain) ಸೋಮಾರಿಯಾ (Laziness) , ಅಲ್ಲವಾ ಎನ್ನುವುದು ಮುಂದೆ ನೋಡೋಣ. ಮೊದಲು ಮೆದುಳು ಏನೇನು ಮಾಡಬಲ್ಲದು ತಿಳಿಯೋಣ.
ಗೊತ್ತಿರಲಿ, ನಾವು ತಿನ್ನುವ ಆಹಾರದ (food) ಬಹುದೊಡ್ಡ ಭಾಗ ಮೆದುಳಿನ ನಿರ್ವಹಣೆಗೆ ವ್ಯಯವಾಗುತ್ತದೆ. ನಮ್ಮ ಆಹಾರದಲ್ಲಿನ ಪೋಷಕಾಂಶದ ಬಹುದೊಡ್ಡ ಪಾಲು ಮೆದುಳಿಗೆ ಸೇರುತ್ತದೆ. ನಮ್ಮ ದೇಹದ ಶೇ. 50 ರಷ್ಟು ಗ್ಲುಕೋಸ್ (Glucose), ನಾವು ಸ್ವೀಕರಿಸುವ 20 ರಷ್ಟು ಆಮ್ಲಜನಕ (Oxygen) ಮೆದುಳಿಗೆ ಬೇಕೇ ಬೇಕು. ಶೇ. 10 ರಷ್ಟು ಕೆಲಸ ಮಾಡಲು ಇಷ್ಟೊಂದು ಎನರ್ಜಿ (Energy) ಮೆದುಳಿಗೆ ಬೇಕಾ ಎಂದು ನೀವೇನಾದರೂ ಯೋಚನೆ ಮಾಡುತ್ತಿದ್ದರೆ, ನಿಮ್ಮ ಯೋಚನೆ ತಪ್ಪು.
ನಮ್ಮ ಮೆದುಳಿನ ಬಹುಪಾಲು ಸದಾ ಕೆಲಸದಲ್ಲಿರುತ್ತದೆ. ಮೆದುಳಿನ ಕೆಲವೊಂದು ಕೆಲಸಗಳ ಬಗ್ಗೆ ನಮಗೆ ಸರಿಯಾಗಿ ಗೊತ್ತೇ ಇಲ್ಲ. ಕೆಲವೊಂದು ಕೆಲಸಗಳು ನಮಗೆ ಗೊತ್ತಾಗೋದೂ ಇಲ್ಲ. ನೀವು ನಿಲ್ಲೋದು, ಓದೋದು, ಯೋಚನೆ ಮಾಡೋದು ಈ ಎಲ್ಲಾ ಕೆಲಸ ಆಗೋದು ಮೆದುಳಿನ ಸಿಗ್ನಲ್ ಆಧಾರದ ಮೇಲೆ. ಬೆಳಗ್ಗಿನಿಂದ ಹಿಡಿದು ರಾತ್ರಿ ಮಲಗೋ (night sleep) ತನಕ ನಿಮ್ಮ ಮೆದುಳು ಕೆಲಸದಲ್ಲಿರುತ್ತದೆ. ನೀವು ಮಲಗಿದ ಮೇಲೂ ನಿಮ್ಮ ಮೆದುಳು ಎಚ್ಚರವಾಗಿ ತನ್ನ ಕೆಲಸ ಮಾಡುತ್ತಿರುತ್ತದೆ. ಗೊತ್ತಿರಲಿ, ನಿಮ್ಮ ಮೆದುಳು ಅಗತ್ಯಕ್ಕಿಂತ ಹೆಚ್ಚು ಸ್ಟ್ರಾಂಗ್ ಆಗಿ ಕೆಲಸ ಮಾಡುತ್ತಿರುತ್ತದೆ.
ಇದನ್ನೂ ಓದಿ : Lemon Water : ಈ ಆರು ಕಾರಣಕ್ಕೆ ನಿಂಬೂಪಾನಿ ಜೊತೆ ದಿನ ಶುರುಮಾಡಬೇಡಿ
ಇದು ಶತಮಾನಗಳ ಹಿಂದಿನ ಮಹಾಸುಳ್ಳು..!
ಮೆದುಳು ಶೇ. 10 ರಷ್ಟು ಮಾತ್ರ ಕೆಲಸ ಮಾಡುತ್ತದೆ ಅನ್ನೋದು ಶತಮಾನಗಳ ಹಿಂದೇ ಹರಡಿಸಲಾದ ಒಂದು ದೊಡ್ಡ ಸುಳ್ಳು. ಆ ಸುಳ್ಳನ್ನೇ ನಂಬಿಕೊಂಡು ನಾವು ಮೆದುಳಿನ ಬಗ್ಗೆ ಏನೇನೋ ಕಥೆ ಕಟ್ಟಿದ್ವಿ. ನೆನಪಿಡಿ (ಇದು ಕೂಡಾ ಮೆದುಳಿನ ಕೆಲಸ). ಮೆದುಳು ನಿಮಗಿಂತ ಹೆಚ್ಚು ಕೆಲಸ ಮಾಡುತ್ತದೆ. ನಿಮ್ಮೆಲ್ಲಾ ಕೆಲಸಗಳಿಗೆ ಕಾರಣಬಿಂದು ಮೆದುಳು. ನಮ್ಮ ಮೆದುಳು ಶೇ 90ರಷ್ಟು ಕೆಲಸ ಮಾಡುತ್ತದೆ. ಇಷ್ಟು ಹೇಳಿದ ಬಳಿಕವೂ ಮೆದುಳಿನ ಮೇಲಿನ ನಿಮ್ಮ ನಿಲುವು ಬದಲಾಗದಿದ್ದರೆ, ನಿಮ್ಮನ್ನು ಖಂಡಿತಾ `ನಂಬಿಕೆ ದ್ರೋಹಿ' ಎನ್ನಬಹುದು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.