Treatment For Blood Cancer: ಬ್ಲಡ್ ಕ್ಯಾನ್ಸರ್ ಒಂದು ಅತ್ಯಂತ ಮಾರಣಾಂತಿಕ ಕಾಯಿಲೆಯಾಗಿದ್ದು, ಅದಕ್ಕೆ ಇರುವರೆಗೆ ಯಾವುದೇ ಸೂಕ್ತವಾದ ಚಿಕತ್ಸೆ ಇರಲ್ಲಿಲ್ಲ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಜೀವ ಉಳಿಸಬಹುದು. ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು ಒಂದು ಕೋಟಿ ಜನರು ಕ್ಯಾನ್ಸರ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಈ ಸುದ್ದಿ ವರದಾನಕ್ಕೆ ಸಮ ಎಂದರೆ ತಪ್ಪಾಗಲಾರದು. ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ಪೀಡಿತ ಹೆಣ್ಣು ಮಗುವಿಗೆ ಬ್ರಿಟನ್‌ನ ಕೆಲವು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಬಾಲಕಿಯ ಚಿಕಿತ್ಸೆ ಯಶಸ್ವಿಯಾಗಿದ್ದು, ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದು ಇಡೀ ವೈದ್ಯಕೀಯ ಲೋಕಕ್ಕೆ ಒಂದು ಸಂತಸದ ಸುದ್ದಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ  ಓದಿ-Rosie Moore: ಅಪಾಯಕಾರಿ ಜಂತುಗಳನ್ನು ಮೈಮೇಲೆ ಎಳೆದುಕೊಳ್ಳುವ ವಿಶ್ವದ ಹಾಟ್ ಸೈಂಟಿಸ್ಟ್ ಇವಳೇ ನೋಡಿ


ಬಿಬಿಸಿ ವರದಿಯ ಪ್ರಕಾರ, 13 ವರ್ಷದ ಬಾಲಕಿ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ಬಾಲಕಿಗೆ ಚಿಕಿತ್ಸೆ ನೀಡಲು ವೈದ್ಯರು ಹೊಸ ರೀತಿಯ ಸೆಲ್ ಥೆರಪಿಯನ್ನು ಬಳಸಿದ್ದಾರೆ. ಈ ಪ್ರಯೋಗವನ್ನು ಮೊದಲ ಬಾರಿಗೆ ನಡೆಸಲಾಗಿದೆ. ಈ ಪ್ರಯೋಗಗಳು ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿವೆ, ಏಕೆಂದರೆ ಹುಡುಗಿ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ.


ಇದನ್ನೂ ಓದಿ-World's Most Venomous Snake: ಒಂದೇ ಏಟಿಗೆ 100 ಜನರನ್ನು ಮಸಣಕ್ಕಟ್ಟುತ್ತಂತೆ ಈ ಹಾವು


ಕ್ಯಾನ್ಸರ್ ಎಂದರೇನು ಮತ್ತು ಅದು ಏಕೆ ಅಪಾಯಕಾರಿ?
ಮನುಷ್ಯನ ದೇಹದಲ್ಲಿ ಕೋಟ್ಯಾಂತರ ಜೀವಕೋಶಗಳಿವೆ. ಇವುಗಳ ಅಥವಾ ಒಂದಕ್ಕಿಂತ ಹೆಚ್ಚು ಜೀವಕೋಶಗಳ ವಂಶವಾಹಿಗಳಲ್ಲಿ ಬದಲಾವಣೆಯಾದಾಗ ಕ್ಯಾನ್ಸರ್ ಅಪಾಯ ಎದುರಾಗುತ್ತದೆ. ಈ ಜೀನ್‌ಗಳು ಮಾನವ ಡಿಎನ್‌ಎಯ ತುಣುಕುಗಳಾಗಿವೆ, ಅವು ಪ್ರತಿ ಜೀವಕೋಶದೊಳಗೆ ಇರುತ್ತವೆ. ಈ ಜೀನ್‌ಗಳು ಹಾನಿಗೊಳಗಾದಾಗ, ಕ್ಯಾನ್ಸರ್ ಕೋಶಗಳು ಹುಟ್ಟಿಕೊಳ್ಳುತ್ತವೆ. ಕ್ಯಾನ್ಸರ್ ಕೋಶಗಳ ರಚನೆಯಿಂದ ಜೀವಕೋಶಗಳು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರ್ಥ. ಪ್ರಾರಂಭದಲ್ಲಿ ಇದನ್ನು ಪತ್ತೆ ಮಾಡದಿದ್ದರೆ, ಈ ಜೀವಕೋಶಗಳು ಅತ್ಯಂತ ವೇಗವಾಗಿ ಹರಡುತ್ತವೆ ಮತ್ತು ಮೂಲ ಜೀವಕೋಶದ ಸ್ಥಾನವನ್ನು ಪಡೆದುಕೊಳ್ಳುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.