Brown Rice: ರಕ್ತದೊತ್ತದದಿಂದ ಹಿಡಿದು ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಬ್ರೌನ್ ರೈಸ್ ರಾಮಬಾಣ
Brown Rice: ಬ್ರೌನ್ ರೈಸ್ ಸೇವನೆ ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಇಂದು ನಾವು ನಿಮಗೆ ಬ್ರೌನ್ ರೈಸ್ ಸೇವನೆಯಿಂದಾಗುವ ಲಾಭಗಳ ಕುರಿತು ಮಾಹಿತಿಯನ್ನು ನೀಡಲಿದ್ದೇವೆ.
Benefits Of Eating Brown Rice - ಬ್ರೌನ್ ರೈಸ್ ಒಂದು ಪೌಷ್ಟಿಕ ಆಹಾರವಾಗಿದ್ದು, ಇದರ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಭತ್ತದ ಹೊರಭಾಗವನ್ನು ತೆಗೆದಾಗ ಉಳಿಯುವ ಅಕ್ಕಿಯನ್ನು ಬ್ರೌನ್ ರೈಸ್ ಎಂದು ಕರೆಯಲಾಗುತ್ತದೆ, ಹೆಸರಿಗೆ ತಕ್ಕಂತೆ ಅದರ ಬಣ್ಣವು ಕೂಡ ಕಂದು ಬಣ್ಣದ್ದಾಗಿರುತ್ತದೆ. ಏಕೆಂದರೆ ಅದು ಕಂದು ಬಣ್ಣದ ಹೊಟ್ಟಿನ ಪ್ರಮಾಣವನ್ನು ಹೊಂದಿರುತ್ತದೆ. ನಂತರ ಸ್ವಚ್ಛಗೊಳಿಸುವ ಪ್ರಕ್ರಿಯೆ ಮೂಅಲಕ ಅದನ್ನು ತೆಗೆದುಹಾಕಲಾಗುತ್ತದೆ, ಈ ಪ್ರೊಸೆಸಿಂಗ್ ನಂತರ ಉಳಿಯುವ ಸಂಪೂರ್ಣ ಬಿಳಿ ಅಕ್ಕಿಯನ್ನು ನಾವು ಪಡೆಯುತ್ತೇವೆ. ಆದರೆ ಬ್ರೌನ್ ರೈಸ್ ಸೇವಿಸುವುದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ, ಹಾಗೆಯೇ ಇದು ಬಿಳಿ ಅಕ್ಕಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ಬಿಳಿ ಅಕ್ಕಿಗಿಂತ ಇದು ಕಡಿಮೆ ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಲ್ಪಟ್ಟಿರುತ್ತದೆ, ಇದರಿಂದಾಗಿ ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಕಂಡುಬರುತ್ತವೆ. ಇಂದು ನಾವು ನಿಮಗೆ ಕಂಡು ಬಣ್ಣದ ಅಕ್ಕಿ ಸೇವನೆಯಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡಲಿದ್ದೇವೆ.
ಕಂದು ಅಕ್ಕಿ ಸೇವನೆಯ ಪ್ರಯೋಜನಗಳು
ಹೃದಯದ ಆರೋಗ್ಯಕ್ಕೆ ಉತ್ತಮ- ಕಂದು ಅಕ್ಕಿಯಲ್ಲಿರುವ ಪೌಷ್ಟಿಕಾಂಶದ ಅಂಶವು ಹೃದಯಕ್ಕೆ ತುಂಬಾ ಲಾಭಕಾರಿಯಾಗಿದೆ, ಇದರಲ್ಲಿ ಕಂಡುಬರುವ ಫೈಬರ್ ಹೃದಯಕ್ಕೆ ಸಂಬಂಧಿಸಿದ ಯಾವುದೇ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದ ಲಿಗ್ನಾನ್ ಅನ್ನು ಹೊಂದಿರುತ್ತದೆ, ಇದು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ-Benefits Of Mango Peel: ಹಲವು ರೀತಿಯ ಕ್ಯಾನ್ಸರ್ ನಿವಾರಣೆಗೆ ತುಂಬಾ ಲಾಭಕಾರಿಯಾಗಿದೆ ಮಾವಿನ ಹಣ್ಣಿನ ಸಿಪ್ಪೆ
ತೂಕ ಇಳಿಕೆಗೆ ರಾಮಬಾಣ-ಕಂದು ಅಕ್ಕಿಯನ್ನು ಸೇವಿಸುವ ಮೂಲಕ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು, ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಇದು ಸಂಸ್ಕರಣೆಗೆ ಒಳಗಾಗದೆ ಇರುವುದು ಇದರ ಹಿಂದಿನ ಕಾರಣವಾಗಿದೆ, ಬಿಳಿ ಅಕ್ಕಿಯಲ್ಲಿ ಪೋಷಕಾಂಶಗಳು ಮತ್ತು ಫೈಬರ್ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ, ಇದರಿಂದಾಗಿ ದೇಹಕ್ಕೆ ಪೌಷ್ಟಿಕಾಂಶದ ಸಾಕಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ. ಇನ್ನೊಂದೆಡೆ, ನೀವು ಬ್ರೌನ್ ರೈಸ್ ಅನ್ನು ಸೇವಿಸಿದರೆ, ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಮತ್ತು ಪೋಷಕಾಂಶಗಳು ಇರುತ್ತವೆ, ಇದರಿಂದ ಅದು ತೂಕ ನಿಯಂತ್ರಣದ ಕೆಲಸ ಕೂಡ ಮಾಡುತ್ತದೆ.
ಇದನ್ನೂ ಓದಿ-High Blood Pressure: ರಕ್ತದೊತ್ತದ ಅಧಿಕ ಇರುವವರು ಈ ರೀತಿ ಇಂಗನ್ನು ಬಳಸಿದರೆ ಲಾಭ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.