Breast Cancer Symptoms : ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಈ ಪೈಕಿ ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಹೆಚ್ಚು ಮಾರಕವಾಗಿದೆ. ಈ ರೋಗ ಉಂಟಾಗಲು ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಬ್ರಾ ಧರಿಸುವುದರಿಂದ ಒಂದು. ಹಾಗಿದ್ರೆ ಒಳ ಉಡುಪು ಧರಿಸುವುದರಿಂದ ಕ್ಯಾನ್ಸರ್‌ ಬರುತ್ತಾ..? ಇದು ಎಷ್ಟು ಸತ್ಯ ಅಂತ ತಿಳಿಯೋಣ ಬನ್ನಿ..


COMMERCIAL BREAK
SCROLL TO CONTINUE READING

ಕೆಲವು ಉಡುಪುಗಳು ಮಹಿಳೆಯರ ಜೀವನದ ಅವಿಭಾಜ್ಯ ಅಂಗವಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು ಬ್ರಾ. ಕೆಲವರು ದಿನದ 24 ಗಂಟೆಯೂ ಧರಿಸುತ್ತಾರೆ. ಕೆಲವರು ಮನೆಗೆ ಬಂದ ಕೂಡಲೇ ತೆಗೆಯುತ್ತಾರೆ. ಇನ್ನೂ ಕೆಲವರು ರಾತ್ರಿ ಮಲಗುವಾಗಲೂ ಬ್ರಾ ಧರಿಸಿರುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಇದೆಲ್ಲದರ ಹೊರತಾಗಿ, ರಾತ್ರಿಯಲ್ಲಿ ಬ್ರಾ ಧರಿಸುವುದು, ಅಂದರೆ ಮಲಗುವ ಸಮಯದಲ್ಲಿ ಒಳ ಉಡುಪು ಧರಿಸುವುದು, ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಮಾತಿದೆ. 


ಇದನ್ನೂ ಓದಿ:ತೂಕ ಇಳಿಸಿಕೊಳ್ಳಲು ಪ್ರತಿದಿನ ಗುಲಾಬಿ ಚಹಾ ಕುಡಿಯಿರಿ..! ಮಾಡುವ ವಿಧಾನ ಇಲ್ಲಿದೆ


ಹೌದು.. ರಾತ್ರಿ ಮಲಗುವಾಗ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಬಹುದು ಎನ್ನುತ್ತಾರೆ. ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅದರ ಮುಖ್ಯ ಲಕ್ಷಣವಾಗಿದೆ. ಈ ರೋಗಲಕ್ಷಣ ಕಂಡುಬಂದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಪರೀಕ್ಷೆಗೆ ಒಳಗಾಗಬೇಕು. 


ಸರಿಯಾಗಿ ಬ್ರಾ ಫಿಟ್ಟಿಂಗ್ ಮಾಡದ ಕಾರಣ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ ಎಂದು ಇತರರು ಹೇಳುತ್ತಾರೆ. ಆದರೆ ಇದು ಸತ್ಯವಲ್ಲ. ಸರಿಯಾಗಿ ಹೊಂದಿಕೊಳ್ಳದ ಬ್ರಾ ಸ್ತನಗಳಿಗೆ ನೋವನ್ನು ಮಾತ್ರ ಉಂಟುಮಾಡುತ್ತದೆ. ಬಿಗಿಯಾದ ಒಳ ಉಡುಪು ಅಥವಾ ಬ್ರಾಗಳನ್ನು ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ ಎಂಬ ಮಾತು ನಿಜವಲ್ಲ.


ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 4000 ರನ್ ಪೂರೈಸಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ


ಆದರೆ, ಮಲಗುವ ವೇಳೆ ಬ್ರಾ ಧರಿಸುವುದರಿಂದ ನಿದ್ರೆ ಬರುವುದಿಲ್ಲ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಬ್ರಾ ಹಾಕಿಕೊಂಡು ಮಲಗುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಎದೆಯಲ್ಲಿ ರಕ್ತ ಪರಿಚಲನೆಗೆ ಅಡ್ಡಿಯಾಗಬಹುದು. ಆದರೆ ಸ್ತನ ಕ್ಯಾನ್ಸರ್ ಬ್ರಾ ಧರಿಸುವುದರಿಂದ ಅಥವಾ ಬ್ರಾದಲ್ಲಿ ಮಲಗುವುದರಿಂದ ಬರುವುದಿಲ್ಲ. ಇತರ ಅನಾನುಕೂಲತೆಗಳು ಉಂಟಾಗಬಹುದು ಅಷ್ಟೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ