Cooking Oil That Can Cause Cancer: ಭಾರತದಲ್ಲಿ ಪ್ರತಿವರ್ಷ ಹಲವಾರು ಜನರು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಬಲಿಯಾಗುತ್ತಾರೆ, ಬಹುತೇಕ ಜನರಲ್ಲಿ ಆರಂಭಿಕ ಹಂತದಲ್ಲಿ ಈ ರೋಗದ ಲಕ್ಷಣಗಳು ಪತ್ತೆಯಾಗದ ಕಾರಣ ಅದು ಮಾರಣಾಂತಿಕ ಸಾಬೀತಾಗುತ್ತದೆ. ಕ್ಯಾನ್ಸರ್ ಬರಲು ಹಲವು ಕಾರಣಗಳಿರಬಹುದು, ಈ ಕಾರಣಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯೂ ಕೂಡ ಒಂದು ಎಂಬ ಸಂಗತಿ ನಿಮಗೆ ತಿಳಿದಿದೆಯಾ?. ಹೀಗಾಗಿ ಇದಕ್ಕಾಗಿ ಮೊದಲನೆಯದಾಗಿ, ನೀವು ಅಡುಗೆ ಮಾಡಲು ಬಳಸುವ ಅಡುಗೆ ಎಣ್ಣೆ ಎಷ್ಟು ಆರೋಗ್ಯಕರವಾಗಿದೆ ಎಂಬುದನ್ನು ಒಮ್ಮೆ ನೋಡುವುದು ತುಂಬಾ ಮುಖ್ಯ.


COMMERCIAL BREAK
SCROLL TO CONTINUE READING

ಅಡುಗೆ ಎಣ್ಣೆ ಕ್ಯಾನ್ಸರ್ ಗೆ ಕಾರಣವಾಗಬಹುದು
ಎಣ್ಣೆಯನ್ನು ಬಳಸದೆ ಭಾರತೀಯ ರುಚಿಕರವಾದ ಭಕ್ಷ್ಯಗಳನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ, ಆದರೆ ನೀವು ಅಡುಗೆ ಎಣ್ಣೆಯನ್ನು ಅತಿಯಾಗಿ ಬಳಸಿದರೆ ಅದು ದೇಹಕ್ಕೆ ಮಾರಕವಾಗಬಹುದು. ಹೆಚ್ಚಿನ ತಾಪಮಾನದಲ್ಲಿ ಬಿಸಿಯಾದ ಆಹಾರವು ದೇಹದ ಪಿಹೆಚ್ ಮಟ್ಟವನ್ನು ಅನಿಯಂತ್ರಿತಗೊಳಿಸುತ್ತದೆ, ಇದರಿಂದಾಗಿ ಹೊಟ್ಟೆಯ ಕೊಬ್ಬು, ಅಜೀರ್ಣ, ಗ್ಯಾಸ್, ಮಲಬದ್ಧತೆ ಮುಂತಾದ ಕಾಯಿಲೆಗಳು ಉಂಟಾಗಬಹುದು.


ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚು ಇದ್ದರೆ ಅಥವಾ ನೀವು ಅಧಿಕ ಸಸ್ಯಜನ್ಯ ಎಣ್ಣೆಯನ್ನು ಬಳಸುತ್ತಿದ್ದರೆ ಅದು ತುಂಬಾ ಅಪಾಯಕಾರಿ ಎಂಬುದು ಹಲವು ಸಂಶೋಧನೆಗಳಲ್ಲಿ ಕಂಡುಬಂದಿದೆ. ಹೀಗಾಗಿ ತಕ್ಷಣವೆ ನಿಮ್ಮ ಅಡುಗೆಮನೆಯಿಂದ ಇಂತಹ ಖಾದ್ಯ ತೈಲವನ್ನು ತೆಗೆದುಹಾಕಿ, ಇಲ್ಲದಿದ್ದರೆ ಅದು ಕ್ಯಾನ್ಸರ್ಗೆ ಕಾರಣವಾಗಬಹುದು.


ಈ ಎಣ್ಣೆಗಳಿಂದ ಅಂತರ ಕಾಯ್ದುಕೊಳ್ಳಿ
ಸೂರ್ಯಕಾಂತಿ, ಸೋಯಾಬೀನ್ ಮತ್ತು ತಾಳೆ ಎಣ್ಣೆಗಳು ಅವಶ್ಯಕತೆಗಿಂತ ಹೆಚ್ಚು ಬಿಸಿಯಾದರೆ, ಅವು ಆಲ್ಡಿಹೈಡ್ ರಾಸಾಯನಿಕವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ, ಈ ಅಂಶ ಕ್ಯಾನ್ಸರ್-ಉಂಟುಮಾಡುವ ಅಂಶವಾಗಿದೆ. ಈ ಕಾರಣದಿಂದಾಗಿ, ದೇಹದಲ್ಲಿ ಕ್ಯಾನ್ಸರ್ ಕೋಶಗಳು ಉತ್ಪತ್ತಿಯಾಗಲು ಪ್ರಾರಂಭಿಸುತ್ತವೆ, ಹೀಗಾಗಿ ಈ ತೈಲಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸುವುದು ಉತ್ತಮ.


ಕೆಲವು ಅಡುಗೆ ಎಣ್ಣೆಗಳಲ್ಲಿ ಪಾಳಿ ಅನ್ ಸ್ಯಾಚ್ಯುರೆಟೆಡ್ ಫ್ಯಾಟ್ ಅತಿ ಹೆಚ್ಚು ಕಂಡುಬರುತ್ತದೆ. ಅದನ್ನು ಹೆಚ್ಚಿನ ತಾಪಮಾನದಲ್ಲಿ ಅದನ್ನು ಬಿಸಿಮಾಡಿದರೆ, ಅದು ಆಲ್ಡಿಹೈಡ್ ಆಗಿ ಒಡೆಯಲು ಪ್ರಾರಂಭಿಸುತ್ತದೆ. Dimonfort ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಲ್ಲಿ, ಕೆಲವು ತೈಲಗಳು ದೈನಂದಿನ ಬಳಕೆಯ ಮಿತಿಗಿಂತ 200 ಪಟ್ಟು ಹೆಚ್ಚು ಆಲ್ಡಿಹೈಡ್ ಅನ್ನು ಹೊಂದಿರುತ್ತವೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ-ನಿಮ್ಮ ಮಗುವಿಗೆ ಎಷ್ಟು ತಿಂಗಳು ಹಾಲುಣಿಸಬೇಕು? ಇದಕ್ಕೆ ಇಂತಿಷ್ಟೇ ಸಮಯ ಇದೆಯೇ! ತಜ್ಞರು ಏನಂತಾರೆ


ಯಾವ ತೈಲಗಳನ್ನು ಬಳಸಬೇಕು?
ತುಪ್ಪ, ಬಿಳಿ ಬೆಣ್ಣೆ, ಆಲಿವ್ ಎಣ್ಣೆಯನ್ನು ಒಳಗೊಂಡಂತೆ ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಕೆಲವು ತೈಲಗಳಿವೆ. ಈ ತೈಲಗಳನ್ನು ಬಿಸಿ ಮಾಡಿದಾಗ ತುಂಬಾ ಕಡಿಮೆ ಅಡಿಲೈಡ್ ಗಳನ್ನು ಅವು ಹೊರಹಾಕುತ್ತವೆ. ಆದಷ್ಟು ಎಣ್ಣೆಯುಕ್ತ ಆಹಾರದ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಇದು ಕ್ಯಾನ್ಸರ್ ಮಾತ್ರವಲ್ಲದೆ ಮಧುಮೇಹ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.