Capsicum Benefits: ಭಕ್ಷ್ಯಗಳ ನೋಟವನ್ನು ಆಕರ್ಷಕವಾಗಿಸಬಲ್ಲ ದೊಡ್ಡ ಮೆಣಸಿನಕಾಯಿ/ಕ್ಯಾಪ್ಸಿಕಂ ಆರೋಗ್ಯದ ಗಣಿಯೂ ಹೌದು. ಕೆಂಪು, ಹಳದಿ, ಹಸಿರು ಹೀಗೆ ಮೂರು ಬಣ್ಣಗಳಲ್ಲಿ ಲಭ್ಯವಿರುವ ಕ್ಯಾಪ್ಸಿಕಂ ಸಾಕಷ್ಟು ಔಷಧೀಯ ಪ್ರಯೋಜನಗಳನ್ನು ಹೊಂದಿದ್ದು, ಇದರಲ್ಲಿ ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿದೆ. ಹಾಗಾಗಿಯೇ, ತೂಕ ಇಳಿಕೆಯಿಂದ ಹಿಡಿದು ಸುಂದರ ತ್ವಚೆ ಪಡೆಯುವವರೆಗೂ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಕ್ಯಾಪ್ಸಿಕಂ- ಈ ಕೆಂಪು, ಹಳದಿ, ಹಸಿರು ತರಕಾರಿಯ ಪ್ರಯೋಜನಗಳು:
* ತೂಕ ಇಳಿಕೆ:

ಕ್ಯಾಪ್ಸಿಕಂ ಕಡಿಮೆ ಕೊಬ್ಬಿನಂಶವನ್ನು ಹೊಂದಿರುತ್ತದೆ ಮತ್ತು ಕೆಲವು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಪ್ರಯತ್ನಿಸುವವರು ತಮ್ಮ ಆಹಾರದಲ್ಲಿ ಕ್ಯಾಪ್ಸಿಕಂ ಸೇರಿಸುವುದರಿಂದ ಅದು ಚಯಾಪಚಯವನ್ನು ಹೆಚ್ಚಿಸಿ ಹೆಚ್ಚಿನ ಕೊಬ್ಬನ್ನು ಸುಡಲು ಸಹಕರಿಸುತ್ತದೆ. ಹಾಗಾಗಿಯೇ, ಇದನ್ನು ತೂಕ ಇಳಿಕೆಯಲ್ಲಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 


* ಮಧುಮೇಹ:
ಕ್ಯಾಪ್ಸಿಕಂನಲ್ಲಿ ಮಧುಮೇಹ ವಿರೋಧಿ ಗುಣಗಳಿದ್ದು ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಅನ್ನು ರಕ್ತಪ್ರವಾಹದಿಂದ ಜೀವಕೋಶಗಳ ಒಳಗೆ ಪಡೆಯಲು ಸುಲಭಗೊಳಿಸುತ್ತದೆ. ಹಾಗಾಗಿ ಇದನ್ನು ಮಧುಮೆಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಬೇಸಿಗೆಯಲ್ಲಿ ಈ ಆಹಾರಗಳನ್ನು ತಪ್ಪದೇ ಸೇವಿಸಿ


* ಹೈ ಬಿಪಿ:
ದೊಡ್ಡಮೆಣಸಿನಕಾಯಿ ದೇಹದಲ್ಲಿ ರಕ್ತನಾಳಗಳನ್ನು ವಿಸ್ತರಿಸುವುದು ಮಾತ್ರವಲ್ಲದೆ, ರಕ್ತನಾಳಗಳನ್ನು ಕಿರಿದಾಗಿಸುವ ಕಿಣ್ವಗಳನ್ನು ನಿಗ್ರಹಿಸುತ್ತದೆ. ಇದಲ್ಲದೆ, ಹೆಚ್ಚಿನ ಮೂತ್ರ ವಿಸರ್ಜನೆಯನ್ನು ಉತ್ತೇಜಿಸುತ್ತದೆ. ಇದರಿಂದ ದೇಹದಿಂದ ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಸಹಾಯ ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. 


* ಸುಂದರ ತ್ವಚೆ:
ಚರ್ಮದ ಆರೋಗ್ಯಕ್ಕೆ ಕ್ಯಾಪ್ಸಿಕಂ ತುಂಬಾ ಸಹಾಯಕವಾಗಿದೆ. ಕ್ಯಾಪ್ಸಿಕಂನಲ್ಲಿರುವ ಕ್ಯಾಪ್ಸೈಸಿನ್ ಎಂಬ ಅಂಶವು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. 


*  ಆರೋಗ್ಯಕರ ಕಣ್ಣು:
ಆರೋಗ್ಯಕರ ದೃಷ್ಟಿ ಪಡೆಯಲು ಸಹ ಕ್ಯಾಪ್ಸಿಕಂ ತುಂಬಾ ಪ್ರಯೋಜನಕಾರಿ. ಕ್ಯಾಪ್ಸಿಕಂನಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. 


ಇದನ್ನೂ ಓದಿ- ಇದೇ ನೋಡಿ ಮಧುಮೇಹಿಗಳೂ ಸಹ ಮನಃಪೂರ್ತಿ ಸೇವಿಸಬಹುದಾದ ಸಿಹಿ ಹಣ್ಣು


* ರೋಗನಿರೋಧಕ ಶಕ್ತಿ: 
ಕ್ಯಾಪ್ಸಿಕಂನಲ್ಲಿ ವಿಟಮಿನ್-ಸಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿ, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿಯೂ ತುಂಬಾ ಪ್ರಯೋಜನಕಾರಿ ತರಕಾರಿ ಆಗಿದೆ. 


* ಹೃದಯದ ಆರೋಗ್ಯ: 
ಕೆಂಪು ಕ್ಯಾಪ್ಸಿಕಂ ಅನ್ನು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಕ್ಯಾಪ್ಸಿಕಂನಲ್ಲಿ ಫೋಲೇಟ್ ಮತ್ತು ವಿಟಮಿನ್ ಬಿ 6 ಕಂಡು ಬರುವುದರಿಂದ ಇವು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.