Carrot Benefits: ಚಳಿಗಾಲದಲ್ಲಿ (Winter Season) ಗಜ್ಜರಿ (Carrot) ಸೇವನೆ ನಿಮಗೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಕ್ಯಾರೆಟ್‌ನಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಅನೇಕ ಖನಿಜಾಂಶಗಳಿವೆ. ಇವು ನಮ್ಮ ಆರೋಗ್ಯಕ್ಕೆ (Health Tips) ತುಂಬಾ ಪ್ರಯೋಜನಕಾರಿಯಾಗಿವೆ. ನೀವು ಸಲಾಡ್(Carrot Salad), ತರಕಾರಿ, ಸೂಪ್, ರಸ (Carrot Juice) ಅಥವಾ ಪುಡಿಂಗ್ ರೂಪದಲ್ಲಿ ಗಜ್ಜರಿಯನ್ನು ಸೇವಿಸಬಹುದು.


COMMERCIAL BREAK
SCROLL TO CONTINUE READING

ಕಣ್ಣಿನ ಆರೋಗ್ಯಕ್ಕೆ ಉತ್ತಮ
ಕ್ಯಾರೆಟ್ ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ನಿಂದ ನೀವು ಪ್ರಯೋಜನ ಪಡೆಯುತ್ತೀರಿ. ಇದು ಹೊಟ್ಟೆಯಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ.


ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ 
ಕ್ಯಾರೆಟ್‌ನಲ್ಲಿ ಫಾಲ್ಕರಿನೋಲ್ ಎಂಬ ನೈಸರ್ಗಿಕ ಕೀಟನಾಶಕವಿದೆ.  ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವು ಅಧ್ಯಯನಗಳು ಹೇಳಿವೆ.


ಮುಪ್ಪಿನ ಪ್ರಭಾವ ಕಡಿಮೆಗೊಳಿಸುತ್ತದೆ
ಕ್ಯಾರೆಟ್ ತಿನ್ನುವುದರಿಂದ ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆಂಟಿ-ಏಜಿಂಗ್  ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.


ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ
ಕ್ಯಾರೆಟ್ ರಸವನ್ನು ಕಪ್ಪು ಉಪ್ಪು, ಕೊತ್ತಂಬರಿ ಸೊಪ್ಪು, ಹುರಿದ ಜೀರಿಗೆ, ಕರಿಮೆಣಸು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. 


ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೀವು ಕ್ಯಾರೆಟ್ ಅನ್ನು ಸಹ ಸೇವಿಸಬಹುದು. ಇದರಲ್ಲಿ  ವಿಟಮಿನ್ ಎ ಮತ್ತು ಸಿ ಹೇರಳ ಪ್ರಮಾಣದಲ್ಲಿವೆ ಮತ್ತು ಇವೆರಡೂ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ.


ಬಾಯಿಯ ಆರೋಗ್ಯಕ್ಕೆ ಉತ್ತಮ 
ಬಾಯಿಯ ಆರೋಗ್ಯಕ್ಕೆ ಕ್ಯಾರೆಟ್ ತಿನ್ನುವುದು ಲಾಭಕಾರಿಯಾಗಿದೆ.  ಇದು ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಉಸಿರಾಟವನ್ನು ಸ್ವಚ್ಛವಾಗಿಡುತ್ತದೆ ಮತ್ತು ಒಸಡುಗಳನ್ನು ಬಲಪಡಿಸುತ್ತದೆ.


ಇದನ್ನೂ ಓದಿ-Ghee Benefits: ಬೆಳಿಗ್ಗೆ ಎದ್ದು ಕೇವಲ ಒಂದು ಚಮಚ ತುಪ್ಪವನ್ನು ತಿನ್ನಿರಿ, ಅದ್ಭುತ ಚಮತ್ಕಾರ ನೋಡಿರಿ


ತೂಕ ಇಳಿಕೆಯಲ್ಲಿ ಲಾಭಕಾರಿ
ಸ್ಥೂಲಕಾಯ ಕಡಿಮೆ ಮಾಡಲು ಕ್ಯಾರೆಟ್ ಸಹ ಪ್ರಯೋಜನಕಾರಿಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು, ಸಲಾಡ್, ಸೂಪ್ ಮತ್ತು ಜ್ಯೂಸ್ ರೂಪದಲ್ಲಿ ಕ್ಯಾರೆಟ್ ಸೇವಿಸಬಹುದು. 


ಇದನ್ನೂ ಓದಿ-Winter Superfood: ಭೂಮಿಯ ಮೇಲಿನ ಅತ್ಯಂತ ಆರೋಗ್ಯಕರ ಆಹಾರ ಯಾವುದು ಗೊತ್ತಾ? ಉತ್ತರ ಕೇಳಿ ನಿಮ್ಮ ತಲೆಯೂ ಕೂಡ ಗಿರಕಿ ಹೊಡೆಯಲಿದೆ


(Disclaimer: ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Immunity: ಬ್ರೇಕ್ ಫಾಸ್ಟ್ ಸಮಯದಲ್ಲಿನ ಈ ಅಭ್ಯಾಸವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ