Carrot Face Pack : ಪ್ರತಿಯೊಬ್ಬರೂ ಫೇರ್ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಖರೀದಿಸಿ ಬಳಸುತ್ತಾರೆ. ಎಷ್ಟು ದುಡ್ಡಾದ್ರೂ ಪರವಾಗಿಲ್ಲ ಮುಖ ಕಾಂತಿಯುತವಾಗಿ ಕಾಣಲು ಚಿಕಿತ್ಸೆ ಮೊರೆ ಕೂಡಾ ಹೋಗ್ತಾರೆ. ನೆನಪಿಟ್ಟುಕೊಳ್ಳಿ ಇವುಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಾವು ನಿಮಗಾಗಿ ಕ್ಯಾರೆಟ್ ಫೇಸ್ ಪ್ಯಾಕ್ ಬಗ್ಗೆ ಹೇಳಲೇಬೇಕು. ಕ್ಯಾರೆಟ್ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ಅಲ್ಲದೆ, ಬೀಟಾ ಕ್ಯಾರೋಟಿನ್ ಸಹ ಕ್ಯಾರೆಟ್‌ನಲ್ಲಿದೆ, ಇದು ನಿಮ್ಮ ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ನಿಮ್ಮ ಮುಖದ ಮೇಲೆ ಮೊಡವೆಗಳು ಅಥವಾ ಕಪ್ಪು ಕಲೆಗಳ ಸಮಸ್ಯೆ ಇದ್ದರೆ, ಕ್ಯಾರೆಟ್ ಅದಕ್ಕೆ ರಾಮಬಾಣ. ಸುಲಭವಾಗಿ ಸಿಗುವ ಕ್ಯಾರೆಟ್‌ನಿಂದ ಫೇಸ್ ಪ್ಯಾಕ್ ಮಾಡುವ ವಿಧಾನವನ್ನು (ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವುದು ಹೇಗೆ) ಹೇಗೆ ಅಂತ ನಾವು ನಿಮಗೆ ಹೇಳಿಕೊಡುತ್ತೇವೆ.


ಇದನ್ನೂ ಓದಿ: Weight Loss Tips : ಜಿಮ್‌ಗೆ ಹೋಗದೆ ಹೀಗೆ ಮನೆಯಲ್ಲಿಯೇ ಕಡಿಮೆ ಮಾಡಿಕೊಳ್ಳಿ ದೇಹ ತೂಕ..!


ಕ್ಯಾರೆಟ್ ಫೇಸ್ ಪ್ಯಾಕ್ ಮಾಡಲು ಬೇಕಾಗುವ ಸಾಮಾಗ್ರಿಗಳು


  1. ಒಂದು ಕ್ಯಾರೆಟ್

  2. 2-3 ಟೀಸ್ಪೂನ್ ಜೇನುತುಪ್ಪ


ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವ ವಿಧಾನ : ಕ್ಯಾರೆಟ್ ಫೇಸ್ ಪ್ಯಾಕ್ ಮಾಡಲು, ಕ್ಯಾರೆಟನ್ನು ಮೊದಲು ತುಂಡುಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕಬೇಕು. ನಂತರ ಕ್ಯಾರೆಟ್‌ ಪೆಸ್ಟ್‌ನಲ್ಲಿ 2-3 ಸ್ಪೂನ್ ಜೇನುತುಪ್ಪವನ್ನು ಸೇರಿಸಿ. ನಂತರ ಎರಡನ್ನೂ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ನಿಷ್ಕಳಂಕ ಚರ್ಮಕ್ಕಾಗಿ ಈಗ ನಿಮ್ಮ ಕ್ಯಾರೆಟ್ ಫೇಸ್ ಪ್ಯಾಕ್ ಸಿದ್ಧವಾಗಿದೆ.


ಕ್ಯಾರೆಟ್ ಫೇಸ್ ಪ್ಯಾಕ್ ಅನ್ನು ಹೇಗೆ ಬಳಸುವ ವಿಧಾನ : ಕ್ಯಾರೆಟ್ ಫೇಸ್ ಪ್ಯಾಕ್ ಅನ್ನು ಹಚ್ಚುವ ಮೊದಲು ಮುಖವನ್ನು ತೊಳೆದು ಒರೆಸಿಕೊಳ್ಳಿ, ನಂತರ ಬ್ರಷ್‌ನ ಸಹಾಯದಿಂದ ತಯಾರಿಸಿದ ಪ್ಯಾಕ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಸುಮಾರು 10-15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಎಚ್ಚರಿಗೆ ಇದಾದ ಮೇಲೆ ಮುಖದ ಮೇಲೆ ಯಾವುದೇ ಲೋಷನ್ ಅಥವಾ ಕ್ರೀಮ್ ಹಚ್ಚಿಕೊಳ್ಳಬೇಡಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.