ನವದೆಹಲಿ: ಕ್ಯಾರೆಟ್ ಚಳಿಗಾಲಕ್ಕೆ ಅದ್ಭುತ ತರಕಾರಿ. ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ಯಾರೆಟ್ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಬಹುತೇಕರು ಕ್ಯಾರೆಟ್ ತಿನ್ನಲು ಇಷ್ಟಪಡುತ್ತಾರೆ. ಕ್ಯಾರೆಟ್ ಅನ್ನು ನೇರವಾಗಿ ಸೇವಿಸಬಹುದು, ಆದರೆ ಸಲಾಡ್ ರೂಪದಲ್ಲಿ ತಿನ್ನುವುದು ಉತ್ತಮ ರುಚಿ ನೀಡುತ್ತದೆ.


COMMERCIAL BREAK
SCROLL TO CONTINUE READING

ಕ್ಯಾರೆಟ್‌ನಲ್ಲಿ ಪೋಷಕಾಂಶಗಳ ಕೊರತೆಯಿಲ್ಲ, ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್‌ಗಳು ಸಹ ಸಾಕಷ್ಟಿವೆ. ಇದು ನಮ್ಮ ದೇಹಕ್ಕೆ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಚಳಿಗಾಲದಲ್ಲಿ ಕ್ಯಾರೆಟ್ ಅನ್ನು ಏಕೆ ತಿನ್ನಬೇಕು ಎಂದು ತಿಳಿಯಿರಿ.


ಇದನ್ನೂ ಓದಿ: Coffee Scrub : ಚಳಿಗಾಲದಲ್ಲಿ ಕೂದಲು ಉದುರುವುದಕ್ಕೆ ಬಳಸಿ ಕಾಫಿ ಪುಡಿ : ಹೇಗೆ ಇಲ್ಲಿದೆ ನೋಡಿ


ಕ್ಯಾರೆಟ್ ತಿನ್ನುವ ಪ್ರಯೋಜನಗಳು


1. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ


ವಿಟಮಿನ್ A ಕ್ಯಾರೆಟ್‌ನಲ್ಲಿ ಸಾಕಷ್ಟು ಕಂಡುಬರುತ್ತದೆ, ಇದು ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಾತ್ರಿ ಕುರುಡುತನದ ಅಪಾಯವನ್ನು ತಪ್ಪಿಸಬಹುದು.


2. ರಕ್ತದಲ್ಲಿನ ಸಕ್ಕರೆಮಟ್ಟ ನಿಯಂತ್ರಿಸುತ್ತದೆ


ಮಧುಮೇಹಿಗಳಿಗೆ ಕ್ಯಾರೆಟ್ ವರದಾನವಿದ್ದಂತೆ. ಕರಗುವ ಫೈಬರ್ಗಳು ಮತ್ತು ಕ್ಯಾರೊಟಿನಾಯ್ಡ್ಗಳು ಇದರಲ್ಲಿ ಕಂಡುಬರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸುತ್ತದೆ.


3. ಹೃದ್ರೋಗ ತಡೆಗಟ್ಟುವಿಕೆ


ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕ್ಯಾರೆಟ್ ಅನ್ನು ತಿನ್ನಬೇಕು. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ, ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತದಂತಹ ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತದೆ.


4. ತೂಕ ನಷ್ಟಕ್ಕೆ ಪ್ರಯೋಜನಕಾರಿ


ಕ್ಯಾರೆಟ್ ಒಂದು ಪರಿಪೂರ್ಣ ತೂಕ ನಷ್ಟ ಆಹಾರವಾಗಿದೆ. ಇದು ಕರಗುವ ಮತ್ತು ಕರಗದ ಫೈಬರ್ ಎರಡನ್ನೂ ಹೊಂದಿರುತ್ತದೆ, ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದನ್ನು ಸೇವಿಸಿದ್ರೆ ನೀವು ಬೇಗನೆ ಆಹಾರವನ್ನು ಸೇವಿಸುವುದಿಲ್ಲ. ಈ ಕಾರಣದಿಂದ ತೂಕ ನಷ್ಟವಾಗಲು ಪ್ರಾರಂಭವಾಗುತ್ತದೆ.


ಇದನ್ನೂ ಓದಿ: Almond Benefits : ಚಳಿಗಾಲದಲ್ಲಿ ಆರೋಗ್ಯಕ್ಕೆ ಹೀಗೆ ಸೇವಿಸಿ ಬಾದಾಮಿ!


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.