Castor Oil Benefits: ಚರ್ಮ, ಕೂದಲಿಗೆ ನೈಸರ್ಗಿಕ ಚಿಕಿತ್ಸೆ ನೀಡಲು ತುಂಬಾ ಪ್ರಯೋಜನಕಾರಿ ಹರಳೆಣ್ಣೆ
Castor Oil Benefits: ನೈಸರ್ಗಿಕ ಸೌಂದರ್ಯವರ್ಧಕ ಎಂದೇ ನಂಬಲಾಗಿರುವ ಹರಳೆಣ್ಣೆ ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.
Castor Oil Benefits: ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಬಹು ಉಪಯೋಗಿ ಸಸ್ಯಜನ್ಯ ಎಣ್ಣೆಯಾಗಿದ್ದು ನೂರಾರು ವರ್ಷಗಳಿಂದ ಜನರು ಇದನ್ನು ಬಳಸುತ್ತಿದ್ದಾರೆ. ಕ್ಯಾಸ್ಟರ್ ಆಯಿಲ್ ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು ಚರ್ಮದ ಆರೈಕೆ, ಕೂದಲಿನ ಆರೈಕೆಯಲ್ಲಿ ಇದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಹರಳೆಣ್ಣೆ ಬಳಕೆಯಿಂದ ಸಿಗುವ ಪ್ರಮುಖ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ....
ವಿರೇಚಕ ಪರಿಣಾಮಗಳು:
ಕ್ಯಾಸ್ಟರ್ ಆಯಿಲ್/ಹರಳೆಣ್ಣೆಯನ್ನು ಎಫ್‌ಡಿಎ ಸುರಕ್ಷಿತ ಮತ್ತು ಪರಿಣಾಮಕಾರಿ ಉತ್ತೇಜಕ ವಿರೇಚಕ ಎಂದು ಗುರುತಿಸಿದೆ. ಇದು ಸಣ್ಣ ಕರುಳಿನ ಸ್ನಾಯುಗಳನ್ನು ಉತ್ತೇಜಿಸುವ ಮೂಲಕ ಕರುಳಿನ ಸುಗಮ ಕಾರ್ಯಾಚರಣೆಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಉರಿಯೂತದ ಗುಣಲಕ್ಷಣಗಳು:
ಹರಳೆಣ್ಣೆಯಲ್ಲಿರುವ (Castor Oil) ಉರಿಯೂತದ ಗುಣಲಕ್ಷಣಗಳು ಉರಿಯೂತವನ್ನು ಕಡಿಮೆ ಮಾಡಿ ಸಂಧಿವಾತ ಮತ್ತು ಕೀಲು ನೋವಿನಂತಹ ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿ ಸ್ವಲ್ಪ ಹರಳೆಣ್ಣೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದನ್ನು ಬಿಸಿ ಮಾಡಿ, ಪೀಡಿತ ಪ್ರದೇಶದಲ್ಲಿ ಲೇಪಿಸಿ ಲಘುವಾಗಿ ಮಸಾಜ್ ಮಾಡಿ.
ಇದನ್ನೂ ಓದಿ- Salt Water Benefits: ಚಿಟಿಕೆ ಉಪ್ಪು ಹಾಕಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ?
ಗಾಯ ನಿವಾರಣೆ:
ಮಕ್ಕಳು ಆಗಾಗ್ಗೆ ಬೀಳುವುದು, ಗಾಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಕ್ಯಾಸ್ಟರ್ ಆಯಿಲ್ ಇದಕ್ಕೆ ದಿವ್ಯೌಷಧ. ಗಾಯವಾದ ಜಾಗದಲ್ಲಿ ಹರಳೆಣ್ಣೆ ಹಚ್ಚುವುದರಿಂದ ಇದು ಗಾಯವನ್ನು ಗುಣಪಡಿಸಲು ಅನುಕೂಲಕರವಾದ ತೇವಾಂಶದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಶುಷ್ಕತೆಯನ್ನು ಕಡಿಮೆ ಮಾಡುವುದರ ಜೊತೆಗೆ ಹೊಸ ಅಂಗಾಂಶದ ಬೆಳವಣಿಗೆಗೂ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಆಂಟಿಬ್ಯಾಕ್ಟೀರಿಯಲ್ ಏಜೆಂಟ್:
ಹರಳೆಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣ ಹೇರಳವಾಗಿದ್ದು, ಇದು ಕೆಲವು ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿ ಹೋರಾಡಬಲ್ಲ ಆಂಟಿಬ್ಯಾಕ್ಟೀರಿಯಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
ಇದನ್ನೂ ಇದೆ- Tulsi Water Benefits: ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿದರೆ ಸಿಗುತ್ತೆ ಈ 5 ಅದ್ಭುತ ಪ್ರಯೋಜನ
ಚರ್ಮದ ಆರೋಗ್ಯ:
ಹರಳೆಣ್ಣೆ ಬಳಕೆಯಿಂದ ಚರ್ಮದ ಶುಷ್ಕತೆ ನಿವಾರಿಸಬಹುದು. ಜೊತೆಗೆ ಇದು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೂ ಅತ್ಯುತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
ಕೂದಲಿನ ಆರೈಕೆ:
ಹರಳೆಣ್ಣೆ ಬಳಕೆಯಿಂದ ಕೂದಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ಪಡೆಯಬಹುದು. ಅಷ್ಟೇ ಅಲ್ಲ, ಇದು ದಟ್ಟವಾದ, ಕಪ್ಪಾದ, ಉದ್ದನೆಯ ಕೂದಲನ್ನು ಪಡೆಯಲು ಕೂಡ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.