ಬಾಯಲ್ಲಿ ಹುಣ್ಣು ಉಂಟಾಗಲೂ ಇವೇ ಪ್ರಮುಖ ಕಾರಣಗಳು
ಸಾಮಾನ್ಯವಾಗಿ ಕೆಲವರಿಗೆ ಬಾಯಲ್ಲಿ ಆಗಾಗ್ಗೆ ಹುಣ್ಣು ಉಂಟಾಗುತ್ತದೆ. ಕೆಲವರು ದೇಹದ ಉಷ್ಣತೆ ಹೆಚ್ಚಾಗಿರಬಹುದು ಹಾಗಾಗಿ ಈ ರೀತಿ ಆಗುತ್ತದೆ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಕೆಲವು ಜೀವಸತ್ವಗಳ ಕೊರತೆಯಿಂದ ಈ ಸಮಸ್ಯೆ ಉಂಟಾಗಿರಬಹುದು ಎಂದುಕೊಳ್ಳುತ್ತಾರೆ. ಆದರೆ, ಬಾಯಲ್ಲಿ ಹುಣ್ಣಾಗಲು ನಿಮ್ಮ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ದತಿಯೂ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
ಬೆಂಗಳೂರು: ಮೌತ್ ಅಲ್ಸರ್ ಎಂದರೆ ಬಾಯಿಯೊಳಗೆ ಬೆಳೆಯುವ ಸಣ್ಣ ಹುಣ್ಣುಗಳಾಗಿವೆ. ಬಾಯಲ್ಲಿ, ಒಸಡುಗಳ ತಳದಲ್ಲಿ ಬೆಳೆಯುವ ಸಣ್ಣ ಹುಣ್ಣುಗಳು ನೋವಿನಿಂದ ಕೂಡಿರುತ್ತವೆ. ಬಾಯಲ್ಲಿ ಹುಣ್ಣಾದಾಗ ಏನನ್ನಾದರೂ ತಿನ್ನುವುದಿರಲಿ ನೀರು ಕುಡಿಯುವುದು ಕೂಡ ನರಕಯಾತನೆ ಎಂದೆನಿಸಿಬಿಡುತ್ತದೆ.
ಸಾಮಾನ್ಯವಾಗಿ ಕೆಲವರಿಗೆ ಬಾಯಲ್ಲಿ ಆಗಾಗ್ಗೆ ಹುಣ್ಣು ಉಂಟಾಗುತ್ತದೆ. ಕೆಲವರು ದೇಹದ ಉಷ್ಣತೆ ಹೆಚ್ಚಾಗಿರಬಹುದು ಹಾಗಾಗಿ ಈ ರೀತಿ ಆಗುತ್ತದೆ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಕೆಲವು ಜೀವಸತ್ವಗಳ ಕೊರತೆಯಿಂದ ಈ ಸಮಸ್ಯೆ ಉಂಟಾಗಿರಬಹುದು ಎಂದುಕೊಳ್ಳುತ್ತಾರೆ. ಆದರೆ, ಬಾಯಲ್ಲಿ ಹುಣ್ಣಾಗಲು ನಿಮ್ಮ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ದತಿಯೂ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? ಹಾಗಿದ್ದರೆ ಬಾಯಲ್ಲಿ ಹುಣ್ಣು ಉಂಟಾಗಲು ಕಾರಣಗಳೇನು ಎಂದು ತಿಳಿಯೋಣ...
ಇದನ್ನೂ ಓದಿ- ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದಾದ 'ಒತ್ತಡ' ನಿರ್ವಹಣೆಗೆ ಇಲ್ಲಿವೆ ಮನೆಮದ್ದು
ಬಾಯಲ್ಲಿ ಹುಣ್ಣಿನ ಸಮಸ್ಯೆಗೆ ಇವೂ ಕಾರಣವಾಗಿರಬಹುದು:-
* ಆಮ್ಲೀಯ ಆಹಾರ:
ಹೆಚ್ಚು ಎಣ್ಣೆ, ಮಸಾಲೆಯುಕ್ತ ಆಹಾರಗಳು ಬಾಯಲ್ಲಿ ಹುಣ್ಣಿನ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಅತಿಯಾದ ಫಾಸ್ಟ್ ಫುಡ್ ಸೇವನೆ, ಕೋಲ್ಡ್ ಡ್ರಿಂಕ್ಸ್ ಕುಡಿಯುವುದರಿಂದ ಆಮ್ಲೀಯತೆ ಹೆಚ್ಚಾಗಿ ಬಾಯಲ್ಲಿ ಗುಳ್ಳೆ ಉಂಟಾಗಬಹುದು.
* ವಿಟಮಿನ್ಸ್ ಕೊರತೆ:
ದೇಹದಲ್ಲಿ ವಿಟಮಿನ್ ಬಿ ಅದರಲ್ಲೂ ವಿಟಮಿನ್ ಬಿ 12 ಕೊರತೆಯಿಂದಲೂ ಬಾಯಲ್ಲಿ ಹುಣ್ಣಿಗೆ ಕಾರಣವಾಗಬಹುದು.
* ಒತ್ತಡ:
ಒತ್ತಡ ಹೆಚ್ಚಾದಾಗ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ಅದರಲ್ಲೂ ಭಾವನಾತ್ಮಕ ಒತ್ತಡದಂತಹ ಸಂದರ್ಭದಲ್ಲಿ ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದೂ ಕೂಡ ಬಾಯಲ್ಲಿ ಹುಣ್ಣಿನ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಈ ಆರೋಗ್ಯ ಸಮಸ್ಯೆಗಳಿಗೆ ಅರಿಶಿನದ ಹಾಲೇ ಅತ್ಯುತ್ತಮ ಮನೆಮದ್ದು
* ಹಾರ್ಮೋನ್ ಬದಲಾವಣೆ:
ಹೆಂಗಸರಿಗೆ ಮುಟ್ಟಿನ ಸಮಯದಲ್ಲಿ, ಗರ್ಭಾವಸ್ಥೆಯ ಸಮಯದಲ್ಲಿ ಸಂಭವಿಸುವ ಹಾರ್ಮೋನುಗಳ ಬದಲಾವಣೆಯಿಂದಲೂ ಈ ಸಮಸ್ಯೆ ಉಂಟಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.