Tips to control bad cholesterol level : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ,ರಕ್ತದೊತ್ತಡದ ಸಮಸ್ಯೆಯು ಗಂಭೀರವಾಗಲು ಪ್ರಾರಂಭಿಸುತ್ತದೆ.  ನಾವು ದಿನ ನಿತ್ಯ ಸೇವಿಸುವ ಆಹಾರದ ಮೂಲಕ ಕೊಬ್ಬು ಅಥವಾ ಕೊಲೆಸ್ಟ್ರಾಲ್ ದೇಹವನ್ನು ತಲುಪುತ್ತದೆ. ಈ ಕೊಲೆಸ್ಟ್ರಾಲ್ ಒಂದು ಪೊರೆಯಂತಿದ್ದು ಅದು ರಕ್ತನಾಳಗಳ ಒಳಗೋಡೆಗಳಿಗೆ ಅಂಟಿಕೊಳ್ಳಲು ಪ್ರಾರಂಭಿಸುತ್ತದೆ.ಕೊಲೆಸ್ಟ್ರಾಲ್ ಕಾರಣ,ರಕ್ತನಾಳಗಳಲ್ಲಿ ರಕ್ತದ ಹರಿವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.ಇದು ಹೃದಯಾಘಾತದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.


COMMERCIAL BREAK
SCROLL TO CONTINUE READING

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಒಳಗಿನಿಂದ ರಕ್ತನಾಳಗಳು ಮತ್ತು ಅಪಧಮನಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ.ಇದಕ್ಕಾಗಿ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಶುದ್ಧೀಕರಿಸುವ ವಸ್ತುಗಳನ್ನು ಸೇವಿಸುವುದು ಮುಖ್ಯ.   


ಇದನ್ನೂ ಓದಿ :ತೂಕ ಇಳಿಸಲು ಪ್ರತಿದಿನ ಚಿಯಾ ಬೀಜಗಳನ್ನು ಸೇವಿಸುತ್ತೀರಾ?; ಹಾಗಾದ್ರೆ ಮೊದಲು ಈ ಸುದ್ದಿ ಓದಿ


ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕರಗಿಸಲು ಚಿಯಾ ಬೀಜಗಳನ್ನು ಬಳಸಬಹುದು.ಇದರ ನಿಯಮಿತ ಸೇವನೆಯಿಂದ ಯಾವುದೇ ತೊಂದರೆ ಇಲ್ಲದೆ ಕೊಲೆಸ್ಟ್ರಾಲ್ ಸುಲಭವಾಗಿ ಕರಗಲು ಆರಂಭಿಸುತ್ತದೆ.ಚಿಯಾ ಬೀಜಗಳನ್ನು ನೆನೆಸಿಟ್ಟರೆ ಜೆಲ್ಲಿ ತರಹದ ವಸ್ತುವನ್ನು ಉತ್ಪಾದಿಸುತ್ತದೆ.ಈ ಜೆಲ್ಲಿ ರಕ್ತನಾಳಗಳಲ್ಲಿ ಕುಳಿತಿರುವ ಕೊಲೆಸ್ಟ್ರಾಲ್ ಅನ್ನು ಸ್ವಚ್ಛಗೊಳಿಸುತ್ತದೆ.ಚಿಯಾ ಬೀಜಗಳನ್ನು ಸೇವಿಸುವುದರಿಂದ,ಅಪಧಮನಿಗಳಲ್ಲಿ ಇರುವ ಕೊಲೆಸ್ಟ್ರಾಲ್ ಅನ್ನು ಸರಿಯಾಗಿ ತೆರವುಗೊಳಿಸಲಾಗುತ್ತದೆ. 


ಅಪಧಮನಿಗಳಲ್ಲಿ ಅಂಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗಿದರೆ ದೇಹದಲ್ಲಿ ರಕ್ತ ಪರಿಚಲನೆ  ಸರಿಯಾಗಿ ಆಗುತ್ತದೆ.ರಕ್ತದ ಲಿಪಿಡ್ ಮಟ್ಟವು ಕಡಿಮೆ ಇರುತ್ತದೆ.ಇದು ಹೃದ್ರೋಗದ ಅಪಾಯವನ್ನು ತಪ್ಪಿಸುತ್ತದೆ. 


ಇದನ್ನೂ ಓದಿ :ಹೃದಯದಲ್ಲಿ 95% ದಷ್ಟು ಬ್ಲೋಕೆಜ್ ಆದಾಗ ನಿಮ್ಮ ದೇಹದಲ್ಲಿ ಹೀಗೆಲ್ಲಾ ಆಗುತ್ತದೆ ! ಹೃದಯಾಘಾತಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ


ಚಿಯಾ ಬೀಜಗಳು ತಮ್ಮದೇ ಆದ ರುಚಿಯನ್ನು ಹೊಂದಿರುವುದಿಲ್ಲ.ಅದಕ್ಕಾಗಿಯೇ ಇದನ್ನು ಇತರ ಪದಾರ್ಥಗಳೊಂದಿಗೆ ಬೆರೆಸಿ ತಿನ್ನಲಾಗುತ್ತದೆ.ಚಿಯಾ ಬೀಜಗಳನ್ನು ನಿಂಬೆ ನೀರಿನಿಂದ ಹಿಡಿದು ಹಣ್ಣಿನ ಸಲಾಡ್‌ಗಳವರೆಗೆ ಯಾವ ರೀತಿ ಬೇಕಾದರೂ ಸೇವಿಸಬಹುದು.   


ಚಿಯಾ ಬೀಜಗಳನ್ನು ಸೇವಿಸುವ ಮುನ್ನ ಒಂದು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಬೀಜಗಳನ್ನು ಸೇರಿಸಿ.ನಂತರ ಇದನ್ನು ಸುಮಾರು  ಒಂದರಿಂದ ಎರಡು ಗಂಟೆಗಳ ಕಾಲ ಹಾಗೆಯೇ ಬಿಡಿ.ಆಗ ಅದು ಜೆಲ್ಲಿ ರೂಪವನ್ನು ತಾಳುತ್ತದೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.