ನವದೆಹಲಿ:  Health Benefits Of Chickpeas Water - ಕಾಬೂಲಿ ಕಡಲೆ  (Chickpeas Water)  ನೆನೆಸಿದ ನಂತರ, ನೀವು ಅದರ ನೀರನ್ನು ಎಸೆಯುತ್ತೀರಾ? ಒಂದು ವೇಳೆ ಎಸೆಯುತ್ತಿದ್ದರೆ, ಈ ತಪ್ಪನ್ನು ನೀವು ಮಾಡಬೇಡಿ. ಕಾಬೂಲಿ ಕಡಲೆ  (Chickpeas) ನೀರು ಆರೋಗ್ಯಕ್ಕೆ (Health Tips) ತುಂಬಾ ಪ್ರಯೋಜನಕಾರಿ. ಇದನ್ನು Aquafaba ಎಂದೂ ಕೂಡ ಕರೆಯುತ್ತಾರೆ. ಸಸ್ಯಾಹಾರಿಗಳಿಗೆ ಇದು ಮೊಟ್ಟೆಯ ಒಂದು ಪರ್ಯಾಯ ಆಹಾರವಾಗಿದೆ.


COMMERCIAL BREAK
SCROLL TO CONTINUE READING

ತಜ್ಞರ ಪ್ರಕಾರ, ನೀವು ಕಡಲೆಯನ್ನು ನೆನೆಸಿದರೆ ಅಥವಾ ನೀರಿನಲ್ಲಿ ಅವುಗಳನ್ನು ಕುದಿಸಿದರೆ, ಕಡಲೆಕಾಯಿಯ ಪೋಷಕಾಂಶಗಳು ನೀರಿಗೆ ವರ್ಗಾವಣೆಯಾಗುತ್ತವೆ. ಕಡಲೆ ನೀರಿನಲ್ಲಿ ವಿಟಮಿನ್ ಬಿ, ಫೋಲೇಟ್, ಕಬ್ಬಿಣ, ರಂಜಕ, ಲಿನೋಲಿಕ್ ಮತ್ತು ಒಲೀಕ್ ಆಮ್ಲಗಳಂತಹ ಆರೋಗ್ಯಕರ ಕೊಬ್ಬುಗಳಿವೆ.


ಈ ರೀತಿ ನೀರನ್ನು ತಯಾರಿಸಿ
Aquafaba ಅಥವಾ  Chickpeas Water ತಯಾರಿಸಲು ಕಾಬೂಲಿ ಕಡಲೆಯನ್ನು ನೀವು ನೀರಿನಲ್ಲಿ 4 ರಿಂದ 7 ಗಂಟೆ ನೆನೆಹಾಕಬೇಕು. ಇದನ್ನು ಫ್ರಿಡ್ಜ್ ನಲ್ಲಿಯೂ ಸಂಗ್ರಹಿಸಿ ಇಡಬಹುದು ಹಾಗೂ ಅದನ್ನು ಬಳಸಬಹುದು.


ಮೊಟ್ಟೆಗೆ ಪರ್ಯಾಯ ಆಯ್ಕೆ
ನೀವು ಮೊಟ್ಟೆಗಳನ್ನು ತಿನ್ನುವುದಿಲ್ಲ ಎಂದರೆ ಕಡಲೆ ನೀರು ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ಇದು ಸಮತೋಲಿತ ಪ್ರಮಾಣದ ಪ್ರೋಟೀನ್ ಮತ್ತು ಪಿಷ್ಟವನ್ನು ಹೊಂದಿರುತ್ತದೆ. ಮೊಟ್ಟೆಯ ಬಿಳಿಭಾಗಕ್ಕೆ ಇದು ಉತ್ತಮ ಪರ್ಯಾಯವಾಗಿದೆ. ಇದು ಮೊಟ್ಟೆಯ ಬಿಳಿಭಾಗದಂತೆಯೇ ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿದೆ. ಮೊಟ್ಟೆಗಳಿಗೆ ಅಲರ್ಜಿ ಇರುವವರು ಕಡಲೆ ನೀರನ್ನು ಸಹ ಸೇವಿಸಬಹುದು. ಇದನ್ನು Mayonnaise ತಯಾರಿಸಲು ಕೂಡ ಬಳಸಲಾಗುತ್ತದೆ.


ನೀವು ಇದನ್ನು ಮೊಟ್ಟೆಗಳಿಗೆ ಪರ್ಯಾಯವಾಗಿ  ಬಳಸುತ್ತಿದ್ದರೆ, ನೀರನ್ನು ಸ್ವಲ್ಪ ಮಿಶ್ರಣ ಮಾಡಿ. ಇದು ಹಾಲಿನ ನೊರೆ, ಹಾಲಿನ ಕೆನೆ ಅಥವಾ ಮೊಟ್ಟೆಯ ಬಿಳಿ ಬಣ್ಣದಂತೆ ಕಾಣುತ್ತದೆ.


ಇದನ್ನೂ ಓದಿ-Sleeping : ಕುಳಿತಲ್ಲೆ ನಿದ್ದೆ ಮಾಡುವುದರಿಂದ ಬರಬಹುದು ಸಾವು! ಇದರಿಂದಾಗುವ ಸಮಸ್ಯೆ ಮತ್ತು ಪ್ರಯೋಜನಗಳೇನು? ಇಲ್ಲಿದೆ


ಡೈರಿ ಉತ್ಪನ್ನಗಳಿಗೆ ಪರ್ಯಾಯ
ಅನೇಕ ಜನರಿಗೆ ಡೈರಿ ಉತ್ಪನ್ನಗಳಿಗೆ ಅಲರ್ಜಿ ಇರುತ್ತದೆ ಮತ್ತು ಲ್ಯಾಕ್ಟೋಸ್‌ಗೆ ಸೂಕ್ಷ್ಮವಾಗಿರುತ್ತಾರೆ. ಈ ಸಂದರ್ಭದಲ್ಲಿ, ನೀವು ಕಡಲೆ ನೀರನ್ನು ಬಳಸಬಹುದು. ತಜ್ಞರ ಪ್ರಕಾರ, ಇದು ಉತ್ತಮ ಸಸ್ಯಾಹಾರಿ ಡೈರಿ ಪರ್ಯಾಯ ಆಗಿರಬಹುದು. ಅಡುಗೆ ಮಾಡುವಾಗ ನೀವು ಅದನ್ನು ಬೆಣ್ಣೆ ಅಥವಾ ಹಾಲಿನಂತೆ ಬೇಯಿಸಲು ಬಳಸಬಹುದು.


ಇದನ್ನೂ ಓದಿ-Onion Benefits : ಮುಖದ ಮೇಲಿನ ಕಲೆ, ಹೊಳಪಿಗಾಗಿ ಬಳಸಿ 1 ಈರುಳ್ಳಿ : ಇದನ್ನ ಬಳಸುವ ಸರಿಯಾದ ಮಾರ್ಗ ಇಲ್ಲಿದೆ


(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಮನೆ ಮದ್ದು ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅನುಸರಿಸುವ ಮೊದಲು ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)


ಇದನ್ನೂ ಓದಿ-Bath Salts Benefits : ಬಿಸಿ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡಿ : ಇದರಿಂದ ಆರೋಗ್ಯಕ್ಕೆ ಸಿಗಲಿದೆ ಅದ್ಭುತ ಪ್ರಯೋಜನಗಳು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ