First Patient Of AIDS: ನವದೆಹಲಿ - ಏಡ್ಸ್ ರೋಗಕ್ಕೆ ಇದುವರೆಗೂ ಕೂಡ ಯಾವುದೇ ಉಪಚಾರ ಇಲ್ಲ.ಆದರೆ ಈ ರೋಗದ ಮೊದಲ ರೋಗಿ ಯಾವುದೇ ಒಂದು ಮಹಿಳೆ ಅಥವಾ ಪುರುಷ ಆಗಿರಲಿಲ್ಲ ಎಬ ಸಂಗತಿ ನಿಮಗೆ ತಿಳಿದಿದೆಯೇ.  ಈ ರೋಗ ಅಸುರಕ್ಷಿತ ಶಾರೀರಿಕ ಸಂಬಂಧದಿಂದ ಹರಡುತ್ತದೆ ಎಂಬ ಸಂಗತಿ ಇದೀಗ ಎಲ್ಲರಿಗೂ ಗೊತ್ತಿದೆ. ಈ ರೋಗದ ಮೊಟ್ಟ ಮೊದಲ ರೋಗಿ (Patient Zero) ಯಾರಾಗಿದ್ದರು ನಿಮಗೆ ತಿಳಿದಿದೆಯೇ? ಈ ರೋಗದ ಕುರಿತಾದ ಮತ್ತು ನಿಮಗೆ ಗೊತ್ತಿಲ್ಲದ ಕೆಲ ರೋಚಕ ಸಂಗತಿಗಳು ಇಲ್ಲಿವೆ.


COMMERCIAL BREAK
SCROLL TO CONTINUE READING

ಏಡ್ಸ್ ಗೆ ಸಂಬಂಧಿಸಿದ ನೀವು ಕೇಳಿರದ ಸಂಗತಿ
ಹಲವು ಬಡ ಹಾಗೂ ಹಿಂದುಳಿದ ದೇಶಗಳಲ್ಲಿ ಇಂದಿಗೂ ಕೂಡ ಏಡ್ಸ್ ಕುರಿತು ಜಾಗರೂಕತೆಯ ಕೊರತೆ ಇದೆ.  ಇದೆ ಕಾರಣದಿಂದ ಈ ರೋಗ ವೇಗವಾಗಿ ಹರಡುತ್ತಿದೆ. ಆದರೆ, ಮೊದಲಿಗೆ ಹೋಲಿಸಿದರೆ ಜನರಲ್ಲಿ ಈ ರೋಗದ ಕುರಿತು ಜಾಗರೂಕತೆಯಲ್ಲಿ ಹೆಚ್ಚಾಗಿದೆ.


ಇದನ್ನು ಓದಿ- ಕರೋನಾದಿಂದ 5 ಲಕ್ಷ ಏಡ್ಸ್ ರೋಗಿಗಳಿಗೆ ಆಪತ್ತು: ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ WHO ಅಧ್ಯಯನ!


ಈ ರೋಗಕ್ಕೆ ಚಿಕಿತ್ಸೆ ಇಲ್ಲ
ಏಡ್ಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದುವರೆಗೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದರಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು. ಇದಕ್ಕಾಗಿ ಜನರು ಹಲವು ರೀತಿಯ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಇದುವರೆಗೆ ನಡೆದ ಸಂಶೋಧನೆಗಳ ಪ್ರಕಾರ ಈ ಸೋಂಕು ಹರಡುವುದರ ಹಿಂದೆ ಅಸುರಕ್ಷಿತ ಲೈಂಗಿಕ ಸಂಬಂಧವೇ ಬಹುದೊಡ್ಡ ಕಾರಣ ಎನ್ನಲಾಗುತ್ತದೆ.  


ಇದನ್ನು ಓದಿ- ಭಾರತದ ಮಣ್ಣಿನಲ್ಲಿದೆ ಸರ್ವ ರೋಗಕ್ಕೂ ಔಷಧ; ಕರೋನಾ ಪೀಡಿತರಿಗೆ ಯಶಸ್ವಿ ಚಿಕಿತ್ಸೆ


ಮನುಷ್ಯರಿಂದ ಹರಡಿರಲಿಲ್ಲ ಏಡ್ಸ್
ಏಡ್ಸ್ ರೋಗ ಹೇಗೆ ಹರಡಿತು ಎಂಬ ಸಂಗತಿಯನ್ನು ತಿಳಿದು ನೀವೂ ಬೆಚ್ಚಿಬೀಳುವಿರಿ. ಎಲ್ಲಕ್ಕಿಂತ ಮೊದಲು ಈ ಸೋಂಕಿಗೆ ಗುರಿಯಾದ ವ್ಯಕ್ತಿಗೆ ಈ ಸೋಂಕು ಎಲ್ಲಿಂದ ತಗುಲಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. HIV ಸೋಂಕು ತಗುಲಿದ್ದ ಮೊದಲ ರೋಗಿ ಒಂದು ಚಿಂಪಾಂಜಿಯಾಗಿತ್ತು ಎಂಬ ವಿಷಯ ತಿಳಿದು ನೀವೂ ನಿಬ್ಬೆರಗಾಗಬಹುದು. ಈ ಮಾರಣಾಂತಿಕ ವೈರಸ್ ಚಿಂಪಾಂಜಿಯ ಶರೀರದಲ್ಲಿ ಮೊದಲೇ ಇತ್ತು ಎನ್ನಲಾಗಿದೆ. ಆದರೆ ಈ ರೋಗ ಮನುಷ್ಯರಲ್ಲಿ ಹೇಗೆ ಹರಡಿತು? ಎಂಬ ಪ್ರಶ್ನೆ ಇದೀಗ ನಿಮ್ಮನ್ನು ಕಾಡುತ್ತಿರಬಹುದು. 


ಇದನ್ನು ಓದಿ- 9 ವರ್ಷದಲ್ಲಿ ಎಚ್‌ಐವಿ ಪ್ರಕರಣಗಳಲ್ಲಿ 16% ಕುಸಿತ: ವಿಶ್ವಸಂಸ್ಥೆ


ಮನುಷ್ಯರಲ್ಲಿ ಹೇಗೆ ಬಂತು?
ಈ HIV ಸೋಂಕಿತ ಚಿಂಪಾಂಜಿ 1920ರಲ್ಲಿ ಕಾಂಗೋ ದೇಶದ ಕೇಮರೂನ್ ಅರಣ್ಯದಲ್ಲಿ ಬೇಟೆಗಾರನೋರ್ವನ ಮೇಲೆ ದಾಳಿ ನಡೆಸಿತ್ತು. ಬೇಟೆಗಾರ ನಡೆಸಿದ್ದ ಮರುದಾಳಿಯಲ್ಲಿ ಚಿಂಪಾಂಜಿ ಗಾಯಗೊಂಡಿತ್ತು. ಅದರ ಶರೀರದಿಂದ ರಕ್ತ ಸೋರುತ್ತಿತ್ತು. ಬಳಿಕ ಗಾಯಗೊಂಡ ಚಿಂಪಾಂಜಿ ಬೇಟೆಗಾರನ ಮೇಲೆ ಮರುದಾಳಿ ನಡೆಸಿದೆ. ಈ ದಾಳಿಯಲ್ಲಿ ಬೇಟೆಗಾರ ಕೂಡ ಗಾಯಗೊಂಡ. 


ಈ ವೇಳೆ ಚಿಂಪಾಂಜಿಯ ರಕ್ತ ಬೇಟೆಗಾರನ ಶರೀರ ಸೇರಿದೆ ಹಾಗೂ ಈ ಮಾರಣಾಂತಿಕ ವೈರಸ್ ಮಾನವರಲ್ಲಿಯೂ ಕೂಡ ಹರಡಿತು. 


ಇದನ್ನು ಓದಿ- ಏಡ್ಸ್​ ವೈರಸ್​ಗಳಿಂದ ಜೀವ ಉಳಿಸಬಹುದೆಂದು ಸಾಧಿಸಿ ತೋರಿಸಿದ ಲಂಡನ್ ವೈದ್ಯರು


ಅಮೆರಿಕಾದ ಸಂಶೋಧನಾ ವರದಿ
ಆದರೆ, US Center for Disease Control and Prevention ವರದಿ ಈ ಸಂಗತಿಯನ್ನು ಅಲ್ಲಗಳೆಯುತ್ತದೆ. ಈ ಸಂಸ್ಥೆಯ ವರದಿಯಲ್ಲಿ ವಿಶ್ವದಲ್ಲಿ ಏಡ್ಸ್ ಹರಡಿದ್ದು ಗೇ ಕಪಲ್ ಗಳ ಮೂಲಕ ಎನ್ನಲಾಗಿದೆ. ಮೊದಲ ಬಾರಿಗೆ ಲಾಸ್ ಎಂಜಲಿಸ್ ನ ಐವರು ಯುವಕರು ಈ ಸೋಂಕಿಗೆ ಗುರಿಯಾಗಿದ್ದರು ಎಂದು ವರದಿ ಹೇಳುತ್ತದೆ.


ಪೇಶಂಟ್ ಝೀರೋ ಇವನಾಗಿದ್ದ
ಆದರೆ, ಏಡ್ಸ್ ರೋಗದ ಮೊದಲ ನೊಂದಾಯಿತ ಪ್ರಕರಣ ಗೈಟನ್ ದುಗಾಸ್ (Gatton Dugas) ಎಂದು ವರದಿಯಾಗಿತ್ತು. ವೃತ್ತಿಯಲ್ಲಿ ಫ್ಲೈಟ್ ಅಟೆಂಡರ್ ಆಗಿದ್ದ ಈ ಯುವಕನಲ್ಲಿ HIV ಸೋಂಕು ಪತ್ತೆಯಾಗಿತ್ತು. ಆತನಿಗೆ ಈ ರೋಗದ ಮಾಹಿತಿ ಕೂಡ ಇತ್ತು. ಆದರೆ, ರೋಗದ ಮಾಹಿತಿ ಇದ್ದರೂ ಕೂಡ ಇತರರಿಗೆ ಈ ಸೋಂಕು ಹರಡಲು ಆತ ಹಲವರ ಜೊತೆಗೆ ಲೈಂಗಿಕ ಸಂಬಂಧ ಬೆಳೆಸಿದ. ಹೀಗಾಗಿ ಗೈಟನ್ ನನ್ನು ಏಡ್ಸ್ ದಾಖಲೆಗಳಲ್ಲಿ 'ಪೇಶಂಟ್ ಝೀರೋ' ಹೆಸರಿನಿಂದ ಗುರುತಿಸಲಾಗುತ್ತದೆ.


ಶೇ.92 ರಷ್ಟು ಪುರುಷರಲ್ಲಿ ಈ ಸೋಂಕು ಇತ್ತು
ಏಡ್ಸ್ ಕುರಿತು ಮಾಹಿತಿ ಹೊಂದಿದ ಬಳಿಕವೂ ಕೂಡ ಎಂಟು ವರ್ಷಗಳ ಕಾಲ ಈ ಸೋಂಕಿಗೆ ಗುರಿಯಾದವರಲ್ಲಿ ಶೇ.92 ರಷ್ಟು ಜನರು ಪುರುಷರಾಗಿದ್ದರು. ಬಳಿಕ ನಿಧಾನವಾಗಿ ಈ ಮಾರಕ ಕಾಯಿಲೆ ಮಹಿಳೆಯರಲ್ಲಿಯೂ ಕೂಡ ಹರಡಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.