ನವದೆಹಲಿ: ಚೀನಾದ ಸುದ್ದಿಸಂಸ್ಥೆಯೊಂದು ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಕಾರ್ಯನಿರ್ವಹಿಸುವ 3D ನ್ಯೂಸ್ ಆಂಕರ್ ಅನ್ನು ಲಾಂಚ್ ಮಾಡಿದೆ. ಈ 3D ಆಂಕರ್ ಸಾಮಾನ್ಯ ಆಂಕರ್ ಗಳಂತೆ ಓಡಾಡುತ್ತದೆ ಮತ್ತು ಸುದ್ದಿಗೆ ಅನುಗುಣವಾಗಿ ತನ್ನ ಹಾವಭಾವಗಳನ್ನೂ ಸಹ ಬದಲಾಯಿಸುವ ಕ್ಷಮತೆ ಹೊಂದಿದೆ. ಓರ್ವ ನಿಜವಾದ ಪತ್ರಕರ್ತನ ರೂಪ ಹಾಗೂ ಹಾವ-ಭಾವಗಳನ್ನು ಕ್ಲೋನಿಂಗ್ ಮಾಡಿ, ತಂತ್ರಜ್ಞಾನದ ಸಹಾಯ ಬಳಸಿ ಈ 3D ಸುದ್ದಿ ನಿರೂಪಕಿಯನ್ನು ಸೃಷ್ಟಿಸಲಾಗಿದೆ.


COMMERCIAL BREAK
SCROLL TO CONTINUE READING

ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ಮತ್ತು ಚೀನಾದ ಟೆಕ್ ಕಂಪನಿ ಸೊಗೌ ಜಂಟಿಯಾಗಿ 3 ಡಿ ಆಂಕರ್ ಅನ್ನು ರಚಿಸಿ ಅದಕ್ಕೆ ಕ್ಸಿನ್ ಕ್ಸಿಯಾವೋಯಿ ಎಂದು ಹೆಸರಿಸಿದ್ದಾರೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಇದಕ್ಕೂ ಮೊದಲು 2018 ರಲ್ಲಿ, ಕ್ಸಿನ್ಹುವಾ ಕೃತಕ ಬುದ್ಧಿಮತ್ತೆಯ ಆಂಕರ್ ಅನ್ನು ಸುದ್ದಿ ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಚಯಿಸಿತ್ತು. ಆ ವೇಳೆ ನಾಲ್ಕು 2 ಡಿ ಸುದ್ದಿ ನಿರೂಪಕರನ್ನು ಸೃಷ್ಟಿಸಲಾಗಿತ್ತು.


ಈ 3D ಆಂಕರ್ ಅನ್ನು ಜಗತ್ತಿಗೆ ಪರಿಚಯಿಸುವ ವೀಡಿಯೊವನ್ನು ಅದೇ ಏಜೆನ್ಸಿಯ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಲಾಗಿದೆ.



ಈ 3D ಸುದ್ದಿ ನಿರೂಕಿಯ ವೈಶಿಷ್ಟ್ಯವೇನು?
ಈ 3D ಆಂಕರ್ ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದು ವರ್ಚುವಲ್ ಆಗಿದ್ದರೂ ಕೂಡ ತುಂಬಾ ನಿಜವಾಗಿ ಕಾಣುತ್ತದೆ. ಈ ಆಂಕರ್ ಅನ್ನು ನೋಡಿದಾಗ, ನೀವು ನಕಲಿ ಎಂದು ಹೇಳಲು ಸಾಧ್ಯವೇ ಇಲ್ಲ. ಈ ಆಂಕರ್ ಮಾತನಾಡುತ್ತ ತನ್ನ ಕಣ್ಣುರೆಪ್ಪೆಗಳನ್ನು ಮಿಟುಕಿಸುತ್ತಾಳೆ, ಕುಳಿತುಕೊಳ್ಳುತ್ತಾಳೆ, ಎದ್ದು ನಿಲ್ಲುತ್ತಾಳೆ ಮತ್ತು ನಡೆದಾದುತ್ತಾಳೆ. ವರದಿಗಳ ಪ್ರಕಾರ ಈಕೆ ತನ್ನ ಹಾವ-ಭಾವಗಳ ಜೊತೆಗೆ ಈಕೆ ತನ್ನ ಧ್ವನಿ ಕೂಡ ಹಾವಭಾವಕ್ಕೆ ತಕ್ಕಂತೆ ಬದಲಾಯಿಸುತ್ತಾಳೆ. ಈಕೆ ತನ್ನ ಕೇಶವಿನ್ಯಾಸ ಮತ್ತು ಬಟ್ಟೆಗಳನ್ನು ಸಹ ಬದಲಾಯಿಸಬಹುದು.


ಮುಂಬರುವ ದಿನಗಳಲ್ಲಿ, ಇಂತಹ ಆಂಕರ್ ಗಳು ಸ್ಟುಡಿಯೊ ಹೊರಗೆ ಕೂಡ  ಸುದ್ದಿಗಳನ್ನು ಓದುತ್ತಿರುವುದನ್ನು ನೀವು ಕಾಣಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.


ಇತ್ತೀಚಿನ ವರ್ಷಗಳಲ್ಲಿ, ಚೀನಾ ಜಾಗತಿಕವಾಗಿ ಕೃತಕ ಬುದ್ಧಿಮತ್ತೆ ಅಭಿವೃದ್ಧಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ. ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳಿಗೆ ಸಹಾಯ ಮಾಡಲು, ಅದರಲ್ಲಿಯೂ ವಿಶೇಷವಾಗಿ ಕರೋನಾ ವೈರಸ್ ಹರಡುವ ಸಮಯದಲ್ಲಿ ಈ ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗಿದೆ. ಹಣಕಾಸು, ಆರೋಗ್ಯ ಮತ್ತು ಉತ್ಪಾದನೆಯಂತಹ ಅನೇಕ ಕ್ಷೇತ್ರಗಳು ವಾಣಿಜ್ಯ ಬಳಕೆಗಾಗಿ ಯಂತ್ರ ಕಲಿಕೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.


ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ನ ವರದಿಯ ಪ್ರಕಾರ, ಎಐ ತಂತ್ರಜ್ಞಾನದ ಅಭಿವೃದ್ಧಿಗೆ ಚೀನಾ ತನ್ನ  ವಾರ್ಷಿಕ ಜಿಡಿಪಿಯನ್ನು 0.8 ರಿಂದ 1.4 ಪ್ರತಿಶತದಷ್ಟು ಹೆಚ್ಚಿಸಬಹುದು ಎನ್ನಲಾಗಿದೆ.