ಚಕ್ಕೆ ಮತ್ತು ಜೇನುತುಪ್ಪ ಬೆರೆಸಿದ ನೀರು ಸಂಜೀವಿನಿ ಇದ್ದಂತೆ ! ಈ ಕಾಯಿಲೆಗಳಿಂದ ಶಾಶ್ವತವಾಗಿ ನೀಡುತ್ತದೆ ಮುಕ್ತಿ !
Benefits of Cinnamon and Honey: ಆಯುರ್ವೇದದ ಪ್ರಕಾರ ಚಕ್ಕೆ ಅಥವಾ ದಾಲ್ಚಿನ್ನಿ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದು ನಮ್ಮ ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ.
ಬೆಂಗಳೂರು : Cinnamon and Honey : ಆಯುರ್ವೇದದಲ್ಲಿ ಕೆಲವೊಂದು ಪದಾರ್ಥಗಳನ್ನು ಸಂಜೀವಿನಿ ಎಂದು ಕರೆಯಲಾಗುತ್ತದೆ. ಯಾಕೆಂದರೆ ಈ ಪದಾರ್ಥಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ಕಿತ್ತೆಸೆಯುತ್ತದೆ. ಇವುಗಳಲ್ಲಿ ಜೇನುತುಪ್ಪ ಮತ್ತು ಚಕ್ಕೆ ಕೂಡಾ ಸೇರಿವೆ. ಇವೆರಡರ ಮಿಶ್ರಣವು ಅಮೃತದಂತೆ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿದ ಮ್ಯಾಜಿಕ್ ನೀರು ಪವಾಡವನ್ನೇ ಮಾಡಿ ಬಿಡಬಲ್ಲದು.
ಚಕ್ಕೆ ನೀರನ್ನು ಹೀಗೆ ಕುಡಿಯಬೇಕು:
ಆಯುರ್ವೇದದ ಪ್ರಕಾರ ಚಕ್ಕೆ ಅಥವಾ ದಾಲ್ಚಿನ್ನಿ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮೊದಲಿಗೆ ಎರಡು ಕಪ್ ನೀರಿಗೆ ಒಂದು ಚಮಚ ಚಕ್ಕೆ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ.ಈ ನೀರು ಅರ್ಧದಷ್ಟಾದಾಗ ಗ್ಯಾಸ್ ಆಫ್ ಮಾಡಿ. ಈಗ ಈ ನೀರಿಗೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ.
ಇದನ್ನೂ ಓದಿ : Avocado: ಬ್ಲಡ್ ಶುಗರ್‌ನ್ನು ಕ್ಷಣಾರ್ಧದಲ್ಲಿ ನಿಯಂತ್ರಿಸುತ್ತೆ ಈ ಹಣ್ಣು.!
ಚಕ್ಕೆ ಮತ್ತು ಜೇನುತುಪ್ಪದ ನೀರಿನ ಪ್ರಯೋಜನಗಳು :
ಬೆಳಿಗ್ಗೆ ನಿಯಮಿತವಾಗಿ ದಾಲ್ಚಿನ್ನಿ ಮತ್ತು ಜೇನುತುಪ್ಪದ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
1.ತ್ವರಿತ ತೂಕ ನಷ್ಟಕ್ಕೆ :
ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಚಕ್ಕೆ ಮತ್ತು ಜೇನುತುಪ್ಪದ ನೀರನ್ನು ಕುಡಿಯಬಹುದು. ಇದು ದೇಹದಲ್ಲಿ ಸೇರಿಕೊಂಡಿರುವ ಹೆಚ್ಚುವರಿ ಕೊಬ್ಬನ್ನು ಬಹಳ ಬೇಗ ಕರಗಿಸುತ್ತದೆ. ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
2. ಚಯಾಪಚಯ ಸುಧಾರಿಸುತ್ತದೆ :
ಚಯಾಪಚಯವನ್ನು ಕಾಪಾಡಿಕೊಳ್ಳುವುದು ತೂಕ ನಷ್ಟಕ್ಕೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಕ್ಕೆ ಮತ್ತು ಜೇನುತುಪ್ಪದ ನೀರನ್ನು ಕುಡಿಯುವುದರಿಂದ ಚಯಾಪಚಯ ಚುರುಕಾಗುತ್ತದೆ.
ಇದನ್ನೂ ಓದಿ : Cancer In Women: ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತೆ ಈ ಅಭ್ಯಾಸಗಳು
3. ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ :
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಕ್ಕೆ ಮತ್ತು ಜೇನುತುಪ್ಪದ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.ಜೇನುತುಪ್ಪವು ಕರುಳಿನ ಆರೋಗ್ಯಕ್ಕೆ ಅಗತ್ಯವಾಗಿರುವ ಅನೇಕ ಕಿಣ್ವಗಳನ್ನು ಹೊಂದಿರುತ್ತದೆ. ಈ ಕಿಣ್ವಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತವೆ.ಚಕ್ಕೆ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
4. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ :
ಮಧುಮೇಹದಿಂದ ಬಳಲುತ್ತಿರುವವರಿಗೆ ಚಕ್ಕೆ ಮತ್ತು ಜೇನುತುಪ್ಪದ ನೀರು ಅಮೃತವಿದ್ದಂತೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚುತ್ತದೆ. ಈ ನೀರು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ದಿನವಿಡೀ ನಿಯಂತ್ರಣದಲ್ಲಿಡುತ್ತದೆ.
5. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ :
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಕ್ಕೆ ಮತ್ತು ಜೇನುತುಪ್ಪದ ನೀರನ್ನು ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಉತ್ಕರ್ಷಣ ನಿರೋಧಕ-ಸಮೃದ್ಧ ಜೇನುತುಪ್ಪ ಮತ್ತು ಚಕ್ಕೆ ಎರಡೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಒತ್ತಡವನ್ನು ಕಡಿಮೆ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.