ನವದೆಹಲಿ : ಇಂದು ನಾವು ನಿಮಗಾಗಿ ಲವಂಗದ ಪ್ರಯೋಜನಗಳನ್ನು ತಂದಿದ್ದೇವೆ. ಲವಂಗವನ್ನು ಮಸಾಲೆಯಾಗಿ ಬಳಸುತ್ತಿದ್ದರೂ, ಅದರ ನೇರ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ ಲವಂಗವು ಮುಖ್ಯವಾಗಿ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಲವಂಗವು ದೇಹದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಮತ್ತು ದೇಹದಲ್ಲಿನ ಗಾಯಗಳನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಹೊಂದಿರುವವರು ಲವಂಗವನ್ನು ಸೇವಿಸಿ ಪರಿಹಾರ ಪಡೆಯಿರಿ.


COMMERCIAL BREAK
SCROLL TO CONTINUE READING

ಲವಂಗದಲ್ಲಿ ಕಂಡುಬರುತ್ತೆ ಪೋಷಕಾಂಶಗಳು 


ಲವಂಗ(Cloves)ವು ವಿಟಮಿನ್-ಬಿ 1, ಬಿ 2, ಬಿ 4, ಬಿ 6, ಬಿ 9 ಮತ್ತು ವಿಟಮಿನ್-ಸಿ ಮತ್ತು ಬೀಟಾ ಕ್ಯಾರೋಟಿನ್ ನಂತಹ ಅಂಶಗಳನ್ನು ಒಳಗೊಂಡಿದೆ. ಇದರ ಹೊರತಾಗಿ, ನಾವು ಲವಂಗದಿಂದ ವಿಟಮಿನ್-ಕೆ, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳಂತಹ ಅನೇಕ ಅಂಶಗಳನ್ನು ಸಹ ಪಡೆಯಬಹದು.


ಇದನ್ನೂ ಓದಿ : Healthy Breakfast Tips : ಬೆಳಗಿನ ಉಪಾಹಾರದಲ್ಲಿ ಈ 2 ಆಹಾರಗಳನ್ನ ತಪ್ಪದೆ ಸೇವಿಸಿ, ರೋಗಗಳಿಂದ ದೂರವಿರಿ! 


ಲವಂಗದ ಸೇವನೆಯು ಆರೋಗ್ಯಕ್ಕೆ ಏಕೆ ಪ್ರಯೋಜನ?


ಖ್ಯಾತ ಆಯುರ್ವೇದ ವೈದ್ಯ ಅಬ್ರಾರ್ ಮಾಲ್ತಾನಿಯವರ ಪ್ರಕಾರ, ಲವಂಗದಲ್ಲಿ ಫೈಬರ್(Fiber in Cloves) ತುಂಬಿದ್ದು, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನ ಕಾಪಾಡಿಕೊಳ್ಳುತ್ತದೆ. ಇದಲ್ಲದೇ, ಲವಂಗವನ್ನು ಮಧುಮೇಹಿ ರೋಗಿಗಳು ಸಹ ಸೇವಿಸಬೇಕು. ಲವಂಗದ ಸೇವನೆಯು ಪುರುಷರಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಲವಂಗವು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳನ್ನು ತಡೆಯುತ್ತದೆ.


ಪುರುಷರು ರಾತ್ರಿ ಮಲಗುವ ಮುನ್ನ ಸೇವಿಸಿ ಲವಂಗ


ನೀವು ಪ್ರತಿ ರಾತ್ರಿ(Night) ಮಲಗುವ ಮುನ್ನ 3 ಲವಂಗ ಸೇವಿಸಿ ಮತ್ತು ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿದರೆ, ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳು ಅದರಿಂದ ದೂರವಾಗುತ್ತವೆ.


ಲವಂಗವು ಪುರುಷರಿಗೆ ಏಕೆ ಪ್ರಯೋಜನಕಾರಿ


ಲವಂಗ ಸೇವನೆಯು ಪುರುಷರಿಗೆ(Men) ಪ್ರಯೋಜನಕಾರಿ. ಇದರ ಸೇವನೆಯು ಲೈಂಗಿಕ ಸಮಸ್ಯೆಗಳನ್ನು ತಡೆಯುತ್ತದೆ. ಯಾವುದೇ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ. ಪುರುಷರು ತಪ್ಪದೆ ಲವಂಗವನ್ನು ಸೇವಿಸಬೇಕು, ಏಕೆಂದರೆ ಲವಂಗದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಸತುವಿನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವೆಲ್ಲವೂ ಲೈಂಗಿಕ ಆರೋಗ್ಯಕ್ಕೆ ಅಗತ್ಯವಾದ ಅಂಶಗಳೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ : Diabetes: ನಿಮ್ಮ ಅಡುಗೆಮನೆಯಲ್ಲಿರುವ ಈ ಮಸಾಲೆಗಳು ಮಧುಮೇಹಕ್ಕೆ ರಾಮಬಾಣ


ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಲವಂಗ ಸೇವಿಸಿ 


ಲವಂಗವನ್ನು(Cloves) ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.   ಹಾಗಂತ ಅತಿಯಾಗಿ ಸೇವಿಸಿವುದು ಸರಿಯಲ್ಲ, ಏಕೆಂದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ತೊಂದರೆಗೊಳಿಸಬಹುದು, ಆದ್ದರಿಂದ ಲವಂಗ ಮತ್ತು ಅದರ ಸಂಬಂಧಿತ ಉತ್ಪನ್ನಗಳನ್ನು ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಮಾತ್ರ ಬಳಸಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.