Cold Drinks Side Effects: ನಿಮಗೂ ತಂಪು ಪಾನೀಯಗಳನ್ನು ಎಂದರೆ ಕೋಲ್ಡ್ ಡ್ರಿಂಕ್ಸ್ ಕುಡಿಯುವ ಅಭ್ಯಾಸವಿದೆಯೇ? ಹೌದು ಎಂದಾದರೆ, ಕೋಲ್ಡ್ ಡ್ರಿಂಕ್ಸ್ ನಿಂದಾಗಿ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿಯುವುದು ಅಷ್ಟೇ ಮುಖ್ಯ. 


COMMERCIAL BREAK
SCROLL TO CONTINUE READING

ಕೋಲ್ಡ್ ಡ್ರಿಂಕ್ಸ್ ಗೆ ಸಂಬಂಧಿಸಿದಂತೆ ಕೆಲವು ಅಧ್ಯಯನಗಳನ್ನು ನಡೆಸಲಾಗಿದ್ದು ಇದರಲ್ಲಿ ಇದರಿಂದ ಉಂಟಾಗಬಹುದಾದ ಸಂಭಾವ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ನಾವು ಕೋಲ್ಡ್ ಡ್ರಿಂಕ್ಸ್ ಕುಡಿದಾದ ದೇಹದೊಳಗೆ ಒಂದು ರೀತಿಯ ಬಿರುಗಾಳಿಯ ಅನುಭವವಾಗಬಹುದು. ಆದರಿಡು ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 


ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಇಡೀ ದಿನ ದೇಹಕ್ಕೆ ಕೇವಲ 6 ಟೀ ಚಮಚ ಸಕ್ಕರೆ ಬೇಕಾಗುತ್ತದೆ. ಆದರೆ, ಈ ತಂಪು ಪಾನೀಯಗಳು/ಸಕ್ಕರೆಯ ಪಾನೀಯಗಳು ಅತ್ಯಂತ ಕೆಟ್ಟ ಸಕ್ಕರೆ ಮೂಲಗಳಾಗಿವೆ. ಕೋಲ್ಡ್ ಡ್ರಿಂಕ್ಸ್ ಗಳಲ್ಲಿ ಬೆರೆಸಲಾಗಿರುವ ಸಕ್ಕರೆಯ ಸೋಡಾವನ್ನು ಹೆಕ್ಕಿನ ಪ್ರಮಾಣದಲ್ಲಿ ಸವಿದಾಗ ಇದು ಆಮ್ಲವನ್ನು ಉತ್ಪಾದಿಸಲು ನಿಮ್ಮ ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳೊಂದಿಗೆ ಪ್ರತಿಕ್ರಿಯಿಸುತ್ತವೆ. 


ಇದನ್ನೂ ಓದಿ- ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ವಿಶೇಷ ಗಮನ: ತಾಯಂದಿರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್


ತಂಪು ಪಾನೀಯಗಳ ಬಳಕೆಯಿಂದ ಆರೋಗ್ಯದ ಮೇಲೆ ಕಂಡು ಬರುವ ಐದು ಅಡ್ಡಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ... 


ತಂಪು ಪಾನೀಯ ಸೇವನೆಯಿಂದ ದೇಹಕ್ಕೆ ಆಗುವ ಪ್ರಮುಖ ಹಾನಿಗಳೆಂದರೆ:- 
* ತೂಕ ಹೆಚ್ಚಳ: 

ಕೆಲವರು ಕೋಲ್ಡ್ ಡ್ರಿಂಕ್ಸ್ ಸೇವನೆಯಿಂದ ಅಸಿಡಿಟಿ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಇದು ನಿಮ್ಮ ನಿಮ್ಮ ತೂಕವನ್ನು ತ್ವರಿತವಾಗಿ ಹೆಚ್ಚಿಸಲು ಕಾರಣವಾಗುತ್ತದೆ. ಕೋಕಾ-ಕೋಲಾ ಒಂದು ಕ್ಯಾನ್‌ನಲ್ಲಿ 8 ಟೀ ಚಮಚ ಸಕ್ಕರೆಯನ್ನು ಹೊಂದಿರುತ್ತದೆ. ತಂಪು ಪಾನೀಯಗಳು ನಿಮ್ಮ ಬಾಯಾರಿಕೆಯನ್ನು ನೀಗಿಸಬಹುದು. ಅವು ಹಸಿವಿನ ಲಕ್ಷಣಗಳನ್ನು ತಾತ್ಕಾಲಿಕವಾಗಿ ನಿವಾರಿಸಬಹುದು, ಆದರೆ ಅವು ದೀರ್ಘಾವಧಿಯಲ್ಲಿ ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು. ಹಾಗಾಗಿ ಇದು ನಿಮ್ಮ ತೂಕವನ್ನು ತ್ವರಿತವಾಗಿ ಹೆಚ್ಚಿಸಬಲ್ಲದು. 


* ಡಯಾಬಿಟಿಸ್: 
ಇನ್ಸುಲಿನ್ ಹಾರ್ಮೋನ್‌ನ ಮುಖ್ಯ ಕೆಲಸವೆಂದರೆ ನಿಮ್ಮ ರಕ್ತಪ್ರವಾಹದಿಂದ ನಿಮ್ಮ ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಸಾಗಿಸುವುದು. ಆದರೆ, ನೀವು ನಿಯಮಿತವಾಗಿ ಕೋಲ್ಡ್ ಡ್ರಿಂಕ್ಸ್ ಕುಡಿಯುವುದರಿಂದ ನಿಮ್ಮ ಜೀವಕೋಶಗಳು ಇನ್ಸುಲಿನ್ ಪರಿಣಾಮಗಳಿಗೆ ನಿರೋಧಕವಾಗಿ ಬೆಳೆಯಬಹುದು. ಇದು ನಿಮ್ಮ ರಕ್ತದಲ್ಲಿ ಇನ್ಸುಲಿನ್ ಸ್ಪೈಕ್ ಅನ್ನು ಉಂಟುಮಾಡುತ್ತದೆ. ಇದರಿಂದಾಗಿ ಡಯಾಬಿಟಿಸ್ ಅಪಾಯ ಹೆಚ್ಚಾಗಬಹುದು. 


* ಫ್ಯಾಟಿ ಲಿವರ್: 
ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಂಸ್ಕರಿಸಿದ ಸಕ್ಕರೆಯ ಎರಡು ಪ್ರಮುಖ ಅಂಶಗಳಾಗಿವೆ. ಗ್ಲೂಕೋಸ್ ನಿಮ್ಮ ದೇಹದ ಜೀವಕೋಶಗಳಿಂದ ಸುಲಭವಾಗಿ ಹೀರಲ್ಪಡುತ್ತದೆ, ಆದರೆ ಫ್ರಕ್ಟೋಸ್ ಅನ್ನು ಯಕೃತ್ತಿನಿಂದ ಪ್ರತ್ಯೇಕವಾಗಿ ಸಂಸ್ಕರಿಸಲಾಗುತ್ತದೆ.  ಹಾಗಾಗಿ ತಂಪು ಪಾನೀಯಗಳ ಅತಿಯಾದ ಬಳಕೆ ನಿಮಗೆ ಫ್ಯಾಟಿ ಲಿವರ್ ಸಮಸ್ಯೆಗೂ ಕಾರಣವಾಗಬಹುದು. 


ಇದನ್ನೂ ಓದಿ- ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸುವಾಗ ಈ 5 ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ


* ಹಲ್ಲುಗಳಿಗೆ ಹಾನಿಕಾರಕ: 
ತಂಪು ಪಾನೀಯಗಳಲ್ಲಿ ಫಾಸ್ಪರಿಕ್ ಮತ್ತು ಕಾರ್ಬೊನಿಕ್ ಆಮ್ಲಗಳು ಕಂಡು ಬರುತ್ತವೆ. ಇದು ನಮ್ಮ ಹಲ್ಲುಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. 


* ಹೊಟ್ಟೆಗೆ ಹಾನಿಕಾರಕ:
ಹೆಚ್ಚಿನ ಕೋಲ್ಡ್ ಡ್ರಿಂಕ್ಸ್ ಗಳು ಇಂಗಾಲದ ಡೈಆಕ್ಸೈಡ್ ಅನಿಲವನ್ನು ಹೊಂದಿರುತ್ತವೆ, ಇದು ಶಾಖದಿಂದಾಗಿ ಹೊಟ್ಟೆಯನ್ನು ಪ್ರವೇಶಿಸಿದ ತಕ್ಷಣ ಅನಿಲವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ, ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಜೀರ್ಣಕಾರಿ ಕಿಣ್ವಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುವುದರಿಂದ ಎದೆಯುರಿಯಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.