Cold Water Side Effects: ಬಿಸಿಲಿನ ತಾಪ ಹೆಚ್ಚಾದಾಗ ತಕ್ಷಣಕ್ಕೆ ತಣ್ಣೀರು ಸೇವಿಸುವ ನಿಮ್ಮ ಹಂಬಲ ನಿಮ್ಮನ್ನು ಹಲವು ರೋಗಗಳತ್ತ ತಳ್ಳಬಹುದು. ನಿಮ್ಮ ಈ ಪ್ರಚೋದನೆ ನಿಮಗೂ ಕೂಡ ತಣ್ಣೀರು ಕುಡಿಯಲು ನಿಮ್ಮನ್ನು ಒತ್ತಾಯಿಸಿದರೆ, ಕೂಡಲೇ ಎಚ್ಚೆತ್ತುಕೊಳ್ಳಿ, ಏಕೆಂದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಕೆಲವರಿಗೆ ತಣ್ಣೀರಿಲ್ಲದೇ ಬದುಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೀಗೆ ಮಾಡುವುದರಿಂದ ನೀವು ನಿಮ್ಮ ಆರೋಗ್ಯದೊಂದಿಗೆ ಚಲ್ಲಾಟವಾಡುತ್ತಿರುವಿರಿ ಎಂಬುದನ್ನು ನಾವು ಹೇಳಬಹುದು. ಈ ರೀತಿ ಮಾಡುವುದರಿಂದ ಯಾವ ಯಾವ ಹಾನಿಗಲಾಗುತ್ತವೆ ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

1. ಹೃದಯ ಬಡಿತ ಕಡಿಮೆಯಾಗಿರಬಹುದು
ಬೇಸಿಗೆಯಲ್ಲಿ, ತಣ್ಣೀರು ಕುಡಿಯುವುದು ನಿಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಸಾಮಾನ್ಯ ನೀರನ್ನು ಕುಡಿಯಲು ಪ್ರಯತ್ನಿಸಿ, ಏಕೆಂದರೆ ಇದು ನಿಮ್ಮ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ, ಹೃದಯ ಸ್ಥಂಭನದ ಅಪಾಯವೂ ಹೆಚ್ಚಾಗುತ್ತದೆ. ಇದಲ್ಲದೆ ತಣ್ಣೀರು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


2. ಜೀರ್ಣಾಂಗ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ
ತಣ್ಣೀರಿನಿಂದ ದೇಹ ತಂಪಾಗುತ್ತದೆ ಎಂದು ನೀವು ಭಾವಿಸುತ್ತೀರಿ, ಆದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಏನನ್ನೂ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ತುಂಬಾ ತಣ್ಣನೆಯ ನೀರನ್ನು ಕುಡಿಯಬಾರದು.


ಇದನ್ನೂ ಓದಿ-Weight loss Diet Plan: ಈ ಆಹಾರಕ್ರಮವನ್ನು ಅನುಸರಿಸಿ ಕೆಲವೇ ದಿನಗಳಲ್ಲಿ ತೂಕ ಇಳಿಸಿ


3. ರೋಗನಿರೋಧಕ ಶಕ್ತಿ ಕೂಡ ದುರ್ಬಲವಾಗಿರಬಹುದು
ಕರೋನಾ ಅವಧಿಯಲ್ಲಿ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ತುಂಬಾ ಮುಖ್ಯವಾಗಿದೆ. ಹೀಗಿರುವಾಗ, ತಣ್ಣೀರು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ನೀರನ್ನು ಕುಡಿಯಲು ಪ್ರಯತ್ನಿಸಿ, ಇದರಿಂದ ನೀವು ಯಾವುದೇ ರೀತಿಯ ಕಾಯಿಲೆಗಳಿಗೆ ಬೇಗನೆ ಗುರಿಯಾಗುವುದಿಲ್ಲ.


ಇದನ್ನೂ ಓದಿ-Honey For Mens: ಪುರುಷರ ಈ 5 ಸಮಸ್ಯೆಗಳಿಗೆ ರಾಮಬಾಣ ಉಪಾಯ ಜೇನುತುಪ್ಪ


4. ತಲೆನೋವಿಗೆ ಕಾರಣವಾಗಬಹುದು
ನೀವು ತಣ್ಣೀರು ಕುಡಿದ ತಕ್ಷಣ, ನಿಮಗೆ ಒಳ್ಳೆಯ ಅನುಭವ ಉಂಟಾಗುತ್ತದೆ, ಆದರೆ ಅದು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ವಲ್ಪ ಸಮಯದವರೆಗೆ ತಲೆನೋವಿನ ಅನುಭವ ಉಂಟಾಗಲು ಶುರುವಾಗುತ್ತದೆ. ಇದಲ್ಲದೆ, ನಿಮ್ಮ ಗಂಟಲು ತಣ್ಣೀರಿನಿಂದ ನೋಯಬಹುದು.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.