ಬೆಂಗಳೂರು : ಮಲಬದ್ಧತೆಗೆ ಕಾರಣ ಏನು ? ಮಲಬದ್ಧತೆ ಹೇಗೆ ಉಂಟಾಗುತ್ತದೆ ? ಇದಕ್ಕೆ ಕಾರಣ ದೊಡ್ಡ ಕರುಳು ತ್ಯಾಜ್ಯ ಉತ್ಪನ್ನಗಳಿಂದ ತುಂಬಿರುತ್ತದೆ ಮತ್ತು ನೀರಿನ ಕೊರತೆ ಇರುತ್ತದೆ. ಇದು ಮಲವನ್ನು ಒಣಗಿಸುತ್ತದೆ. ಈ ಕಾರಣದಿಂದಾಗಿ ಮಲ ದೇಹದಿಂದ ಹೊರಬರಲು ಕಷ್ಟವಾಗುತ್ತದೆ. ಈ ಸ್ಥಿತಿಯನ್ನು ಮಲಬದ್ಧತೆ ಎಂದು ಕರೆಯಲಾಗುತ್ತದೆ. ಆದರೆ ಕೆಲವು ಕಾಯಿಲೆಗಳಲ್ಲಿ ಜನರು ಪದೇ ಪದೇ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಮಲಬದ್ಧತೆ ಕೆಲವು ರೋಗಗಳ ಲಕ್ಷಣವಾಗಿರಲೂ ಬಹುದು. ಹಾಗಾಗಿ ಅದನ್ನು ನಿರ್ಲಕ್ಷಿಸಬಾರದು. 


COMMERCIAL BREAK
SCROLL TO CONTINUE READING

1. ಮಧುಮೇಹ :
ಮಧುಮೇಹ ಇರುವವರು ಹೆಚ್ಚಾಗಿ ಮಲಬದ್ಧತೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಮಧುಮೇಹವು ನಿಮ್ಮ ಹೊಟ್ಟೆ ಮತ್ತು ಕರುಳಿಗೆ ಹೋಗುವ ನರಗಳನ್ನು ಹಾನಿಗೊಳಿಸಿದಾಗ, ಸಾಮಾನ್ಯವಾಗಿ ಆಹಾರವನ್ನು ಜೀರ್ಣಿಸಲು ಸಾಧ್ಯವಾಗುವುದಿಲ್ಲ. ಇದು ಮಲಬದ್ಧತೆಗೆ ಕಾರಣವಾಗುತ್ತದೆ.  ಹೀಗಾದಾಗ ಅತಿಸಾರದ ಸಮಸ್ಯೆಗಳನ್ನು ಕೂಡಾ ಹೊಂದಿರಬಹುದು. ಆದ್ದರಿಂದ, ಮಧುಮೇಹ ರೋಗಿಗಳಿಗೆ ಹಣ್ಣು ತರಕಾರಿಗಳನ್ನು ತಿನ್ನುವಂತೆ ಸೂಚಿಸಲಾಗುತ್ತದೆ. 


ಇದನ್ನೂ ಓದಿ : Fruits For Diabetes: ಈ 5 ಬಗೆಯ ಹಣ್ಣುಗಳನ್ನು ಮಧುಮೇಹ ರೋಗಿಗಳು ತಿನ್ನಲೇಬೇಕು


2. ಕೊಲೊರೆಕ್ಟಲ್ ಕ್ಯಾನ್ಸರ್ : 
ಕೊಲೊರೆಕ್ಟಲ್ ಕ್ಯಾನ್ಸರ್ ಬೆನ್ನುಹುರಿಯಲ್ಲಿನ ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಅದು ಕರುಳಿನ ಚಲನೆಯನ್ನು ನಿಧಾನಗೊಳಿಸುತ್ತದೆ ಅಥವಾ ನಿಲ್ಲಿಸಲೂ ಬಹುದು. ಇದು ಮಲಬದ್ಧತೆಗೆ ಕಾರಣವಾಗುತ್ತದೆ. ಅಲ್ಲದೆ, ಇದು ಹೊಟ್ಟೆ ಅಥವಾ ಗುದನಾಳಕ್ಕೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.  ಇದು ಕರುಳಿನ ಚಲನೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ಕಾಲಾನಂತರದಲ್ಲಿ, ಈ ಸಮಸ್ಯೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. 


3. ಡೈವರ್ಟಿಕ್ಯುಲೈಟಿಸ್ ನ ಲಕ್ಷಣ: 
ಮಲಬದ್ಧತೆ ಕೂಡ ಡೈವರ್ಟಿಕ್ಯುಲೈಟಿಸ್ ಕಾಯಿಲೆಯ ಲಕ್ಷಣವಾಗಿರುತ್ತದೆ. ವಾಸ್ತವವಾಗಿ, ಸಂಪೂರ್ಣವಾಗಿ ಗುಣವಾಗದ ಈ ಕಾಯಿಲೆಯಲ್ಲಿ ಕಡಿಮೆ ಉರಿಯೂತ ಮತ್ತು ಸೋಂಕು ಇರಬಹುದು. ಇದು ಮಲಬದ್ಧತೆ, ತೆಳುವಾದ ಮಲ, ಅತಿಸಾರ, ಕಿಬ್ಬೊಟ್ಟೆಯ ನೋವಿಗೆ ಕಾರಣವಾಗಬಹುದು. ಗಮನಿಸಬೇಕಾದ ವಿಷಯವೆಂದರೆ ಇದಕ್ಕಾಗಿ  ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. 


ಇದನ್ನೂ ಓದಿ : ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ 4 ಸೂಪರ್‌ಫುಡ್‌ಗಳು


4. ಇರಿಟೇಬಲ್ ಬೌಲ್ ಮೂವ್ಮೆಂಟ್ :   
 ಇದು ದೊಡ್ಡ ಕರುಳಿನ ಮೇಲೆ ಪರಿಣಾಮ ಬೀರುವ ಸಾಮಾನ್ಯ  ಸಮಸ್ಯೆಯಾಗಿದೆ. ರೋಗಲಕ್ಷಣಗಳು ಸೆಳೆತ, ಹೊಟ್ಟೆ ನೋವು,  ಗ್ಯಾಸ್,   ಅತಿಸಾರ ಮತ್ತು ಮಲಬದ್ಧತೆ. ಈ  ಕಾಯಿಲೆಯಲ್ಲಿ ಜನರು ಕಾಲಕಾಲಕ್ಕೆ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸಲು ಪ್ರಾರಂಭಿಸುತ್ತಾರೆ. ಆಹಾರದಲ್ಲಿ ಹೆಚ್ಚು ಫೈಬರ್-ಭರಿತ ಆಹಾರವನ್ನು ಸೇವಿಸಬೇಕು. ಅಲ್ಲದೆ, ಆರಂಭಿಕ ಹಂತದಲ್ಲಿಯೇ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆದರೆ ಈ ಸಮಸ್ಯೆಯಿಂದ ಪಾರಾಗಬಹುದು . 



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.