ಡಯಾಬಿಟೀಸ್ ಇದ್ದಾಗ ಚಪಾತಿಯನ್ನು ಹೀಗೆ ತಿನ್ನಿ! ಹೈ ಬ್ಲಡ್ ಶುಗರ್ ಥಟ್ ಅಂತ ಇಳಿದುಬಿಡುತ್ತದೆ!ಒಮ್ಮೆ ಟ್ರೈ ಮಾಡಿ
Chapati for blood sugar : ಮಧುಮೇಹ ರೋಗಿಗಳು ಅನ್ನ ಸೇವಿಸುವುದಿಲ್ಲ.ಬದಲಾಗಿ ಚಪಾತಿ ಸೇವಿಸಲು ಆರಂಭಿಸುತ್ತಾರೆ.ಆದರೆ ಚಪಾತಿಯನ್ನು ಈ ರೀತಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಯುತ್ತದೆ ಎಂದು ಹೇಳಲಾಗುತ್ತದೆ.
Chapati for blood sugar : ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹಲವರು ಬ್ಲಡ್ ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಮಧುಮೇಹದ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಅನಿಯಮಿತ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯನ್ನು ಅನುಸರಿಸುವುದು.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕಾದರೆ ಆಹಾರಕ್ರಮಕ್ಕೆ ಗಮನ ಕೊಡಬೇಕು.ಆಹಾರವು ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಲು ಸಹಾಯ ಮಾಡುತ್ತದೆ.ಮಧುಮೇಹ ರೋಗಿಗಳು ಅನ್ನ ಸೇವಿಸುವುದಿಲ್ಲ.ಬದಲಾಗಿ ಚಪಾತಿ ಸೇವಿಸಲು ಆರಂಭಿಸುತ್ತಾರೆ.ಆದರೆ ಚಪಾತಿಯನ್ನು ಈ ರೀತಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಯುತ್ತದೆ ಎಂದು ಹೇಳಲಾಗುತ್ತದೆ.
ಹಿಂದಿನ ದಿನದ ಚಪಾತಿ :
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಹಿಂದಿನ ದಿನದ ಚಪಾತಿಯನ್ನು ಸೇವಿಸಬಹುದು.ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿದ್ದು, ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಈ ಆಹಾರಗಳೊಂದಿಗೆ ಮಾವಿನ ಹಣ್ಣಿನ ಸೇವನೆ ಆರೋಗ್ಯಕ್ಕೆ ಹಾನಿಕಾರಕ!
ದೇಹವನ್ನು ತಂಪಾಗಿಟ್ಟುಕೊಳ್ಳಿ :
ಹಿಂದಿನ ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಿಗ್ಗೆ ಹಾಲಿನೊಂದಿಗೆ ಬೆರೆಸಿ ತಿನ್ನುವುದರಿಂದ ಹೊಟ್ಟೆ ತಂಪಾಗುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ.ಇದು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿರುತ್ತದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ :
ಹಿಂದಿನ ದಿನ ಮಾಡಿಟ್ಟಿರುವ ಚಪಾತಿಯನ್ನು ತಣ್ಣನೆಯ ಹಾಲಿನೊಂದಿಗೆ ಬೆಳಿಗ್ಗೆ ಸೇವಿಸುವುದರಿಂದ ರಕ್ತದೊತ್ತಡದ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.ಇದಕ್ಕಾಗಿ ಚಪಾತಿಯನ್ನು ಹಾಲಿನಲ್ಲಿ 10 ನಿಮಿಷ ಕಾಲ ನೆನೆಸಿಡಬೇಕು.ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಶುಗರ್ ಹೆಚ್ಚಾಗುತ್ತಿದ್ದಂತೆ ಮೈ ಮೇಲೆ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು !ಬ್ಲಡ್ ಟೆಸ್ಟ್ ಇಲ್ಲದೆಯೇ ಗುರುತಿಸಿಕೊಳ್ಳಿ
ಚಪಾತಿಯನ್ನು 15 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿಡುವುದು ಸೂಕ್ತವಲ್ಲ. ಏಕೆಂದರೆ ಅವು ರಬ್ಬರಿನಂತಾಗಿ ಗಟ್ಟಿಯಾಗುತ್ತವೆ. ಹೀಗಾದಾಗ ಸೇವಿಸುವುದು ಕೂಡಾ ಕಷ್ಟವಾಗುತ್ತದೆ.ರಾತ್ರಿ ಮಾಡಿದ ಚಪಾತಿಯನ್ನು ಬೆಳಿಗ್ಗೆ ಸೇವಿಸುವಾಗ ಅದನ್ನು ಎಣ್ಣೆ ಅಥವಾ ತುಪ್ಪ ಹಚ್ಚಿ ಬಿಸಿ ಮಾಡಿಕೊಳ್ಳಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.