Coconutfor weight lose : ದೇಹದ ತೂಕ ಹೆಚ್ಚಾಗುತ್ತಿದ್ದ ಹಾಗೆ ಅನೇಕ ಗಂಭೀರ ಕಾಯಿಲೆಗಳು ಕೂಡಾ ನಮ್ಮನ್ನು ಆವರಿಸಿ ಬಿಡುತ್ತದೆ.ಈ ಸಮಸ್ಯೆಗೆ ನಾವು ಅನುಸರಿಸುತ್ತಿರುವ ಜೀವನಶೈಲಿಯೇ ಕಾರಣ.ಇತ್ತೀಚಿನ ದಿನಗಳಲ್ಲಿ ಜನ ಮೊಬೈಲ್, ವಿಡಿಯೋ ನೋಡಿಕೊಂಡು ಬಹಳ ತಡವಾಗಿ ನಿದ್ದೆಗೆ ಜಾರುತ್ತಾರೆ. ಪರಿಣಾಮ ದೇಹಕ್ಕೆ ಅಗತ್ಯವಾದಷ್ಟು ನಿದ್ದೆ ಸಿಗುವುದಿಲ್ಲ.ಇನ್ನು ಕೆಲಸ ಕೆಲಸ ಎಂದು ಹೇಳುತ್ತಾ ಊಟ ತಿಂಡಿಯ ಕಡೆಗೂ ಸರಿಯಾಗಿ ಗಮನ ಹರಿಸುವುದಿಲ್ಲ. ಪರಿಣಾಮವಾಗಿ ದೇಹ ತೂಕ, ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ. 


COMMERCIAL BREAK
SCROLL TO CONTINUE READING

ತೂಕ ನಷ್ಟಕ್ಕೆ ತೆಂಗಿನಕಾಯಿ: 
ತೆಂಗಿನಕಾಯಿ ಸೇವನೆ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಸರಳ ವಿಧಾನಗಳಲ್ಲಿ ಒಂದಾಗಿದೆ. ಎಳ ನೀರು ಮತ್ತು ತೆಂಗಿನ ಹಾಲು ಎರಡೂ ತೂಕ ಇಳಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಇವೆರಡೂ ಕಡಿಮೆ ಕ್ಯಾಲೋರಿ ಇರುವ ಪಾನೀಯಗಳು.ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರು ಇವುಗಳನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು.


ಇದನ್ನೂ ಓದಿ : ಯಾವ ಔಷಧಿ ಪಥ್ಯ ಇಲ್ಲದೆಯೇ ಈ ಬೀಜ ಬಳಸಿಯೇ ನಿಯಂತ್ರಿಸಬಹುದು ಬ್ಲಡ್ ಶುಗರ್ ! ಒಂದೆರಡು ದಿನಗಳಲ್ಲಿಯೇ ಸಿಗುವುದು ರಿಸಲ್ಟ್


ತೆಂಗಿನಕಾಯಿಯನ್ನು ರುಬ್ಬುವ ಮೂಲಕ ತೆಂಗಿನ ಹಾಲು ತಯಾರಿಸಲಾಗುತ್ತದೆ. ತೆಂಗಿನ ಹಾಲು ಹಲವು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.ತೆಂಗಿನ ಹಾಲು ಮತ್ತು ಎಳ ನೀರು ಎರಡೂ ಆರೋಗ್ಯಕರ.ಇವುಗಳು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಲ್ಲದೆ,ಊಟವನ್ನು ಹೆಚ್ಚು ರುಚಿಕರವಾಗಿಸುತ್ತದೆ.    


ಎಳ ನೀರು :
ತೂಕ ನಷ್ಟಕ್ಕೆ ಎಳ ನೀರನ್ನು ದೈನಂದಿನ ಆಹಾರದಲ್ಲಿ ಸೇರಿಸಬಹುದು. ಏಕೆಂದರೆ ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ.ಇದರೊಂದಿಗೆ, ಇದು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.  


ಇದನ್ನೂ ಓದಿ : ಪೋಷಕಾಂಶ ಕಣಜ ಶುಂಠಿ: ನಿತ್ಯ ಒಂದು ತುಂಡು ತಿಂದರೆ ಸಾಕು ಈ ಎಲ್ಲಾ ಕಾಯಿಲೆಗಳಿಗೆ ಸಿಗುತ್ತೆ ಮುಕ್ತಿ


ತೆಂಗಿನ ಹಾಲು :
ತೆಂಗಿನಕಾಯಿಯನ್ನು ರುಬ್ಬುವ ಮೂಲಕ ತೆಂಗಿನ ಹಾಲು ತೆಗೆಯಲಾಗುತ್ತದೆ. ಇದು ಕೆನೆಯಾಗಿರುವುದರಿಂದ,ಇದು ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ.ತೆಂಗಿನ ಹಾಲು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ.  ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇರಿಸಿಕೊಳ್ಳಬಹುದು.ತೂಕ ನಷ್ಟಕ್ಕೆ,ತೆಂಗಿನ ಹಾಲು ಹೆಚ್ಚು ಪ್ರಯೋಜನಕಾರಿಯಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.