Foods That Are Good For Liver : ಯಕೃತ್ತು ದೇಹದ ಪ್ರಮುಖ ಭಾಗವಾಗಿದೆ. ಪಿತ್ತಜನಕಾಂಗವನ್ನು ಆರೋಗ್ಯವಾಗಿಡುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ಯಕೃತ್ತು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವ ಮೂಲಕ ದೇಹವನ್ನು ಆರೋಗ್ಯಕರವಾಗಿಡುತ್ತದೆ.  ಆದ್ದರಿಂದ, ಯಕೃತ್ತನ್ನು ಆರೋಗ್ಯಕರವಾಗಿಡಬೇಕಾದರೆ ನಾವು ಸೇವಿಸುವ ಆಹಾರ ಬಹಳ ಮುಖ್ಯವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಯಕೃತ್ತಿನ ಆರೋಗ್ಯವನ್ನು ಕಾಪಾಡುವ ಆಹಾರಗಳು :
ಬೆಳ್ಳುಳ್ಳಿ : ಬೆಳ್ಳುಳ್ಳಿ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದ, ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿದರೆ, ಅದು ನಿಮ್ಮ ಯಕೃತ್ತನ್ನು  ಆರೋಗ್ಯಕರವಾಗಿಡುತ್ತದೆ. ಏಕೆಂದರೆ ಬೆಳ್ಳುಳ್ಳಿ ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ. ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಇನ್ನೂ ಒಳ್ಳೆಯದು. 


ಇದನ್ನೂ ಓದಿ : Diabetics : ಮಧುಮೇಹಿಗಳೇ ತಪ್ಪದೆ ಸೇವಿಸಿ ಈ ಹಣ್ಣುಗಳನ್ನು ; ನಿಯಂತ್ರದಲ್ಲಿರುತ್ತೆ ಶುಗರ್!


ಕ್ಯಾರೆಟ್ : ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್-ಎ, ವಿಟಮಿನ್-ಸಿ ಮತ್ತು ಕಬ್ಬಿಣದಾಂಶ ಸಮೃದ್ಧವಾಗಿದೆ. ಇದಲ್ಲದೆ, ಇದರಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಇದು ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಕ್ಯಾರೆಟ್ ಅನ್ನು ಬೇರೆ ಬೇರೆ ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಸೂಪ್, ಸಲಾಡ್ ಮತ್ತು ಜ್ಯೂಸ್ ರೂಪದಲ್ಲಿ ಕ್ಯಾರೆಟ್ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಮತ್ತೊಂದೆಡೆ, ಕ್ಯಾರೆಟ್ ತಿನ್ನುವುದರಿಂದ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ.


ಕಲ್ಲಂಗಡಿ  : ಕಲ್ಲಂಗಡಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಈ ಹಣ್ಣು ತಿನ್ನಲು ಎಷ್ಟು ರುಚಿಕರವೋ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ. ಕಲ್ಲಂಗಡಿಯಲ್ಲಿ ಸಾಕಷ್ಟು ನೀರಿನ ಅಂಶ ಇರುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ನೀರಿನ ಅಂಶದ ಕೊರತೆಯಾಗುವುದಿಲ್ಲ. ದೇಹದ ವಿಷಗಳು ಹೊರಬರುತ್ತವೆ. ಹಾಗೆಯೇ ಇದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಇದರಿಂದಾಗಿ ದೇಹವು ಆರೋಗ್ಯಕರವಾಗಿರುತ್ತದೆ.


ಇದನ್ನೂ ಓದಿ : Dream Meaning : ನಿಮಗೆ ಈ ರೀತಿಯ ಕನಸುಗಳು ಬಿದ್ದಿವೆಯಾ? ಹಾಗಿದ್ರೆ, ಎಚ್ಚರ..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.