ಬೆಂಗಳೂರು : ಪ್ರಕೃತಿ ಕಾಲ ಕಾಲಕ್ಕೆ ನಮ್ಮ ದೇಹಕ್ಕೆ ಅಗತ್ಯ ಎನಿಸುವಂಥಹ ಹಣ್ಣು, ತರಕಾರಿಗಳನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಚಳಿಗಾಲ ಬಂತೆಂದರೆ ಸಾಕು ಅನೇಕ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಹಣ್ಣುಗಳಲ್ಲಿ ಒಂದು ಪೇರಳೆ. ಪೇರಳೆ ಹಣ್ಣಿನಲ್ಲಿ ಎರಡು ವಿಧ ಒಂದು ಬಿಳಿ ಪೇರಳೆ ಇನ್ನೊಂದು ಕೆಂಪು ಪೇರಳೆ.  ಎರಡೂ ವಿಧದ ಪೇರಳೆ ಹಣ್ಣುಗಳು ಅನೇಕ ಆರೀತಿಯ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ.  ಆದರೂ  ಕೆಂಪು ಪೇರಳೆ ತುಸು ಹೆಚ್ಚೇ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಗಳು ಕೂಡಾ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿರುತ್ತದೆ. 


COMMERCIAL BREAK
SCROLL TO CONTINUE READING

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ರಿಂದ -5 ಪೇರಳೆ ಎಲೆಗಳನ್ನು ಸೇವಿಸಿದರೆ, ಇದು ಮಧುಮೇಹದಂತಹ ಗಂಭೀರ ಸಮಸ್ಯೆಗಳು ಬುಡದಿಂದಲೇ ದೂರವಾಗುತ್ತದೆ. ಇದಲ್ಲದೆ ಮಧುಮೇಹ ಮಾತ್ರವಲ್ಲದೆ ಇನ್ನೂ ಅನೇಕ ಕಾಯಿಲೆಗಳನ್ನು ತೊಡೆದು ಹಾಕಲು ಈ ಎಲೆಗಳು ಸಹಾಯ ಮಾಡುತ್ತವೆ. 


ಇದನ್ನೂ ಓದಿ : ದಿನನಿತ್ಯ ಐದಾರು ಎಸಳು ಪುದೀನಾ ತಿನ್ನಿ… ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು


1. ಮಧುಮೇಹವನ್ನು ನಿಯಂತ್ರಣ : 
ಪೇರಳೆ ಹಣ್ಣಿನಂತೆಯೇ ಅದರ ಎಲೆಗಳಲ್ಲಿಯೂ ನಾರಿನಂಶ ಅಧಿಕ ಪ್ರಮಾನದಲ್ಲಿ ಕಂಡು ಬರುತ್ತವೆ. ಇದು ನಮ್ಮ ದೇಹದಲ್ಲಿನ ಸಕ್ಕರೆಯ ಜೀರ್ಣಕ್ರಿಯೆಗೆ ಬಹಳಷ್ಟು ಸಹಾಯ ಮಾಡುತ್ತದೆ. ಪೇರಳೆ ಎಲೆಗಳ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿದೆ. ಇದು ನಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ಸೇವಿಸಬೇಕು. 


2. ಜೀರ್ಣಕ್ರಿಯೆ ಸುಧಾರಿಸುತ್ತದೆ : 
ಪೇರಳೆ ಎಲೆಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಲ್ಲದೆ ಪೇರಳೆ ಎಲೆಯಲ್ಲಿ  ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇದು ಹೊಟ್ಟೆಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಿರ್ಮಾಮ ಮಾಡುತ್ತದೆ. ಇದಲ್ಲದೆ ವಿಷಕಾರಿ ಕಿಣ್ವಗಳ ಹರಡುವಿಕೆಯನ್ನು ತಡೆಯಲು ಪೇರಳೆ ಎಲೆಗಳು ಸಹಕಾರಿಯಾಗಿದೆ. 


ಇದನ್ನೂ ಓದಿ : ಲೇಡಿಫಿಂಗರ್‌ನ ಈ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ!


3. ಅಲ್ಸರ್ ಗೆ ಮದ್ದು : 
ಪೇರಳೆ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇದು ಪೆಪ್ಟಿಕ್ ಅಲ್ಸರ್ ಅನ್ನು ತಡೆಗಟ್ಟುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಪೆಪ್ಟಿಕ್ ಅಲ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿದಿನ 4-5 ಪೇರಳೆ ಎಲೆಗಳನ್ನು ಸೇವಿಸಲು ಪ್ರಾರಂಭಿಸಬೇಕು. ಪೇರಳೆ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು  ತಿನ್ನುವುದರಿಂದ ಹೊಟ್ಟೆಯ ಹುಣ್ಣುಗಳಿಂದ ಮುಕ್ತಿ ಸಿಗುತ್ತದೆ.


4. ತೂಕವನ್ನು ಕಳೆದುಕೊಳ್ಳುವಲ್ಲಿ ಸಹಾಯಕ : 
ನಿತ್ಯ ಮುಂಜಾನೆ ಪೇರಳೆ ಎಲೆಗಳ ಚಹಾವನ್ನು ಕುಡಿಯುತ್ತಾ ಬಂದರೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರ ಹೊರತಾಗಿ, ಪೇರಳೆ ಎಲೆಗಳಲ್ಲಿ ಕ್ಯಾಲೋರಿ  ಅಂಶಗಳಿರುವುದಿಲ್ಲ. ಇದೇ ಕಾರಣದಿಂದ ತೂಕ ನಷ್ಟದಲ್ಲಿ ಪೇರಳೆ ಎಲೆ ಬಹಳ ಪರಿಣಾಮಕಾರಿ ಕೆಲಸ ಮಾಡುತ್ತದೆ. 


ಇದನ್ನೂ ಓದಿ : ಪ್ರತಿದಿನ ಇದನ್ನು ಕುಡಿಯುವುದರಿಂದ ಕಠೋರ ಚಳಿಯಲ್ಲಿಯೂ ಯಾವುದೇ ರೋಗ ನಿಮ್ಮ ಹತ್ತಿರ ಸುಳಿಯುವುದಿಲ್ಲ


5. ಹೃದಯದ ಆರೋಗ್ಯಕ್ಕೆ  : 
ಪೇರಳೆ ಎಲೆಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಇದರೊಂದಿಗೆ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಪೇರಳೆ ಎಲೆಗಳ ಚಹಾವನ್ನು ಪ್ರತಿದಿನ ಸೇವಿಸಿದರೆ, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ಪೇರಳೆ ಎಲೆಗಳನ್ನು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.