ಬೆಂಗಳೂರು : ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಏಕೆಂದರೆ ಅಪಾಯಕಾರಿ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ, ಮಧುಮೇಹ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್  ವೆಸೆಲ್ ಡಿಸೀಸ್ ನಂಥಹ ರೋಗಗಳ ಅಪಾಯವನ್ನು ತಂದೊಡ್ಡುತ್ತದೆ. ಕೆಲವು ಮನೆಮದ್ದುಗಳ ಸಹಾಯದಿಂದ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಟ್ರೈಗ್ಲಿಸರೈಡ್ ಮತ್ತು ಲಿಪೊಪ್ರೋಟೀನ್ ಅನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿರುವ ಕಾರಣ ಶುಂಠಿಯ ಬಳಕೆಯು  ಅಂಥಹ ಮನೆ ಮದ್ದುಗಳಲ್ಲಿ ಒಂದು. 


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಶುಂಠಿಯನ್ನು ಹೇಗೆ ಬಳಸುವುದು :
1. ಹಸಿ ಶುಂಠಿಯನ್ನು ಸೇವಿಸುವುದು :
ಶುಂಠಿಯನ್ನು ಹಾಗೆಯೇ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಾಕಷ್ಟು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಹಸಿ ಶುಂಠಿಯನ್ನು ಹಾಗೆಯೇ ಜಗಿದು ತಿಂದರೆ ಸಹಾಯವಾಗುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ : Mood Swings : ಮೂಡ್ ಸ್ವಿಂಗ್‌ನಿಂದ ಬಳಲುತ್ತಿದ್ದೀರಾ? ಈ ಆಹಾರ ಸೇವಿಸಿ, ಕೆಲವೇ ದಿನದಲ್ಲಿ ಸಮಸ್ಯೆ ದೂರವಾಗುತ್ತೆ
 
2. ಶುಂಠಿಯ ಪುಡಿ ಸೇವಿಸಿ : 
ಶುಂಠಿಯನ್ನು ಕೆಲವು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಈಗೆ ತಯಾರಿಸಿದ  ಪುಡಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನಲ್ಲಿ ಬೆರೆಸಿ ಕುಡಿದರೆ,  ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ


3. ಶುಂಠಿ ನೀರು  :
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಶುಂಠಿ ನೀರು ತುಂಬಾ ಸಹಾಯಕ. ಇದಕ್ಕಾಗಿ, ಒಂದು ಲೋಟ ಬಿಸಿ ನೀರಿನಲ್ಲಿ ಒಂದು ಇಂಚು ಶುಂಠಿಯನ್ನು ಕತ್ತರಿಸಿ ಸುಮಾರು 15 ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಸ್ಟ್ರೈನರ್ ನಿಂದ ಫಿಲ್ಟರ್ ಮಾಡಿ. ಈ ನೀರನ್ನು ಕುಡಿದರೆ ದೇಹಕ್ಕೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. 


ಇದನ್ನೂ ಓದಿ : Male Fertility : ವಿವಾಹಿತ ಪುರುಷರ ಆರೋಗ್ಯಕ್ಕೆ ರಾಮಬಾಣ ಕಲ್ಲಂಗಡಿ ಬೀಜ..! 


4. ಶುಂಠಿ ಮತ್ತು ನಿಂಬೆ ಚಹಾ  :
ಹಾಲು, ಚಹಾ ಪುಡಿ ಮತ್ತು ಸಕ್ಕರೆ ಸೇರಿಸಿ ಚಹಾ ಕುಡಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಆದರೆ ನಿಂಬೆ ಮತ್ತು ಶುಂಠಿಯಿಂದ ಮಾಡಿದ ಚಹಾವನ್ನು ಒಮ್ಮೆ ಪ್ರಯತ್ನಿಸಿ ನೋಡಿ. ವಿಶೇಷವಾಗಿ ನೀವು ಹೆಚ್ಚು ಎಣ್ಣೆ ಮತ್ತು ಮಸಾಲೆಗಳನ್ನು ಸೇವಿಸಿದ್ದರೆ, ನಿಂಬೆ-ಶುಂಠಿ ಚಹಾವು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಅದರ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.