ಈ ಆರೋಗ್ಯ ಸಮಸ್ಯೆಗಳನ್ನು ನಿರ್ನಾಮ ಮಾಡುತ್ತದೆ ದ್ರಾಕ್ಷಿ ಹಣ್ಣು !ಆದರೆ ತಿನ್ನುವ ಸಮಯ ಬಹಳ ಮುಖ್ಯ !
Grapes Benfefits in Summer : ಬೇಸಿಗೆಯಲ್ಲಿ ದ್ರಾಕ್ಷಿ ತಿನ್ನುವುದರಿಂದ ಬಾಯಿ ರುಚಿಯ ಜೊತೆಗೆ ಆರೋಗ್ಯ ವೃದ್ದಿಯೂ ಆಗುವುದು. ಇದರಲ್ಲಿರುವ ಪೋಷಕ ಅಂಶಗಳು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.
Grapes Benfefits in Summer : ಬೇಸಿಗೆ ಬಂತೆಂದರೆ ಮಾರುಕಟ್ಟೆಗೆ ದ್ರಾಕ್ಷಿ ಲಗ್ಗೆ ಇಟ್ಟು ಬಿಡುತ್ತವೆ. ದ್ರಾಕ್ಷಿಗಳು ಎರಡು ಮೂರು ಬಣ್ಣಗಳಲ್ಲಿ ಬರುತ್ತವೆ. ಕಪ್ಪು, ಕೆಂಪು ಮತ್ತು ಹಸಿರು. ಜನರು ಬೇಸಿಗೆಯಲ್ಲಿ ಹೆಚ್ಚಾಗಿ ದ್ರಾಕ್ಷಿಯನ್ನು ತಿನ್ನಲು ಇಷ್ಟಪಡುತ್ತಾರೆ. ಈ ಹಣ್ಣನ್ನು ತಿನ್ನಬೇಕಾದರೆ ಸಿಪ್ಪೆ ತೆಗೆಯುವ ಅಥವಾ ಕತ್ತರಿಸುವ ತೊಂದರೆ ಇರುವುದಿಲ್ಲ. ಮಾರುಕಟ್ಟೆಯಿಂದ ತಂದು ಹಾಗೆಯೇ ತೊಳೆದು ತಿನ್ನಬಹುದು. ಬೇಸಿಗೆಯಲ್ಲಿ ದ್ರಾಕ್ಷಿ ತಿನ್ನುವುದರಿಂದ ಬಾಯಿ ರುಚಿಯ ಜೊತೆಗೆ ಆರೋಗ್ಯ ವೃದ್ದಿಯೂ ಆಗುವುದು. ಈ ಹಣ್ಣಿನ ವಿಶೇಷವೆಂದರೆ ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಫಾಸ್ಫರಸ್ ಫೋಲೇಟ್, ಸೆಲೆನಿಯಂ ಮುಂತಾದ ಪೋಷಕಾಂಶಗಳಿವೆ. ಇದರಲ್ಲಿರುವ ಈ ಎಲ್ಲಾ ಅಂಶಗಳು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.
ಬೇಸಿಗೆಯಲ್ಲಿ ದ್ರಾಕ್ಷಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು :
1. ಅತ್ಯುತ್ತಮ ಉತ್ಕರ್ಷಣ ನಿರೋಧಕ ಹಣ್ಣು :
ದ್ರಾಕ್ಷಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ. ಈ ಫ್ರೀ ರಾಡಿಕಲ್‌ಗಳು ಕ್ಯಾನ್ಸರ್ ಮತ್ತು ಹೃದ್ರೋಗ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ : ಒಣದ್ರಾಕ್ಷಿಗಳಿಂದ ಆಗುವ ಪ್ರಯೋಜನೆಗಳೇನು ಗೊತ್ತಾ?
2. ಹೃದಯದ ಆರೋಗ್ಯ :
ದ್ರಾಕ್ಷಿ ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇವುಗಳಲ್ಲಿ ಪಾಲಿಫಿನಾಲ್ ಗಳು ಅಡಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದ್ರಾಕ್ಷಿಯನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
3. ವಿಟಮಿನ್ ಸಿಯಲ್ಲಿ ಸಮೃದ್ಧ :
ದ್ರಾಕ್ಷಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಬಿಳಿ ರಕ್ತ ಕಣಗಳ ರಚನೆಯನ್ನು ಹೆಚ್ಚಿಸುತ್ತದೆ. ಸೋಂಕುಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತವೆ. ಇದರೊಂದಿಗೆ, ದ್ರಾಕ್ಷಿ ಚರ್ಮದ ಆರೋಗ್ಯಕ್ಕೂ ಸಹಕಾರಿ.
ಇದನ್ನೂ ಓದಿ : ನಿಮ್ಮ ಮಗುವಿನ ಕಣ್ಣಿಗೆ ಕಾಜಲ್ ಹಚ್ಚುವ ಮುನ್ನ, ಅದರಿಂದಾಗುವ ಹಾನಿಯ ಬಗ್ಗೆ ತಿಳಿಯಿರಿ..!
4. ಉರಿಯೂತ ನಿವಾರಕ :
ದ್ರಾಕ್ಷಿಯಲ್ಲಿ ಉರಿಯೂತ ನಿವಾರಕ ರಾಸಾಯನಿಕಗಳಿವೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್, ಆಲ್ಝೈಮರ್ನ ಕಾಯಿಲೆ ಮತ್ತು ಹೃದ್ರೋಗಗಳು ದೀರ್ಘಕಾಲದ ಉರಿಯೂತಕ್ಕೆ ಸಂಬಂಧಿಸಿದ್ದಾಗಿವೆ.
5. ಅಧಿಕ ಫೈಬರ್ :
ದ್ರಾಕ್ಷಿಯಲ್ಲಿ ಫೈಬರ್ ಅಂಶ ಕೂಡಾ ಅಧಿಕವಾಗಿದೆ. ಇದು ಉತ್ತಮ ಜೀರ್ಣಕಾರಿ ಆರೋಗ್ಯಕ್ಕೆ ಅವಶ್ಯಕವಾಗಿದೆ. ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.
ಇದನ್ನೂ ಓದಿ : Health Care Tips: ನಿತ್ಯ ಈ ಬೀಜಗಳ ಸೇವನೆಯಿಂದ ನಿಮ್ಮ ದಿನ ಆರಂಭಿಸಿ, ಬೆಣ್ಣೆಯಂತೆ ಬೊಜ್ಜು!
ಈ ಸಮಯವು ದ್ರಾಕ್ಷಿ ತಿನ್ನಲು ಸೂಕ್ತ :
ಬಹುತೇಕ ಜನರು ದ್ರಾಕ್ಷಿಯನ್ನು ತಿನ್ನುವ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಬೆಳಿಗ್ಗೆ ಅಥವಾ ಮಧ್ಯಾಹ್ನ ದ್ರಾಕ್ಷಿಯನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ. ಆದರೆ ದ್ರಾಕ್ಷಿಯನ್ನು ಬೆಳಿಗ್ಗೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ವಾಸ್ತವವಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿಯನ್ನು ತಿನ್ನುವುದರಿಂದ ಗ್ಯಾಸ್, ಹುಳಿ ತೇಗು ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.