Palm fruit Benefits : ದಿನ ಕಳೆಯುತ್ತಿದ್ದಂತೆಯೇ ಬಿಸಿಲ ಧಗೆ ಏರುತ್ತಿದೆ.  ಋತುಮಾನ ಬದಲಾಗುತ್ತಿದ್ದಂತೆಯೇ ಋತುಮಾನಕ್ಕೆ ಅನುಗುಣವಾಗಿ ಪ್ರಕೃತಿ ಹಣ್ಣು ತರಕಾರಿಗಳನ್ನು ನೀಡುತ್ತದೆ. ಇವುಗಳ ಸೇವನೆ ಮೂಲಕ ಋತುಮಾನ ಕ್ಕೆ ಅನುಗುಣವಾಗಿ ದೇಹಕ್ಕೆ ಸಿಗಬೇಕಾದಂಥಹ ಆರೈಕೆಯನ್ನು ಪ್ರಕೃತಿಯೇ ನೀಡುತ್ತದೆ. ಆದರೆ ಆ ಆಹಾರಗಳನ್ನು ನಾವು ಸೇವಿಸಬೇಕು. ಅಂಥಹ ಹಣ್ಣುಗಳಲ್ಲಿ ಒಂದು ತಾಳೆ ಹಣ್ಣು.  ತಾಳೆ ಹಣ್ಣು ಬೇಸಿಗೆಯಲ್ಲಿ ಯಥೇಚ್ಛವಾಗಿ ದೊರೆಯುತ್ತದೆ. ದೇಹದ ನೀರಿನ ಅಂಶವನ್ನು ಕಾಪಾಡಲು ಮತ್ತು ದೇಹವನ್ನು ತಂಪಾಗಿರಿಸಲು ಇದು ಸಹಾಯ ಮಾಡುತ್ತದೆ.  ತಾಳೆ ಹಣ್ಣಿನಲ್ಲಿ  ವಿಟಮಿನ್ ಬಿ, ಕಬ್ಬಿಣ, ಸತು, ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಇದು ದೇಹಕ್ಕೆ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ತೂಕ ಇಳಿಕೆ :
ತಾಳೆ ಹಣ್ಣು ತಿನ್ನುವುದರಿಂದ ತೂಕ ಇಳಿಕೆಗೆ ಸಹಾಯವಾಗುತ್ತದೆ. ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಅಧಿಕ ನೀರಿನಂಶ ಇರುವುದರಿಂದ ಇದನು ಸೇವಿಸಿದ ಬಳಿಕ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. . ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಇದನ್ನು ಹೆಚ್ಚು ಸೇರಿಸಬಹುದಾಗಿದೆ. ಈ ಹಣ್ಣಿನಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಸರಿಯಾದ ಚಯಾಪಚಯ ಕ್ರಿಯೆ ಕೂಡಾ ಸರಿಯಾಗಿ ಆಗುವಂತೆ ಮಾಡುತ್ತದೆ. 


ಇದನ್ನೂ ಓದಿ : ಈ ಏಳು ಅಂಶಗಳ ಬಗ್ಗೆ ಗಮನ ಹರಿಸಿದರೆ ಸಾಕು ! ಹೊಟ್ಟೆಯ ಕೊಬ್ಬು ಮಂಜಿನಂತೆ ಕರಗುವುದು


ದೇಹದ ಉಷ್ಣತೆಯ ನಿಯಂತ್ರಿಸುತ್ತದೆ :  
ತಾಳೆಹಣ್ಣು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಈ ಕಾರಣದಿಂದಾಗಿ, ತುರಿಕೆ, ಕಜ್ಜಿ ಮುಂತಾದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ತಾಳೆಹಣ್ಣು ಸೇವನೆಯಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. 


ಮಧುಮೇಹಕ್ಕೆ ಪರಿಹಾರ : 
ಈ ಹಣ್ಣಿನಲ್ಲಿರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದಿಂದಾಗಿ, ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಈ ಹಣ್ಣನ್ನು ತಿನ್ನುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.


ಇದನ್ನೂ ಓದಿ : ಕೂದಲನ್ನು ದೃಢವಾಗಿಸಲು ಇಲ್ಲಿವೆ ಉತ್ತಮ ಗಿಡಮೂಲಿಕೆಗಳು..!


ಚರ್ಮದ ತೊಂದರೆಗಳು :
ತಾಳೆಹಣ್ಣು ಚರ್ಮದ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತದೆ.  ಈ ಹಣ್ಣನ್ನು ತಿನ್ನುವುದರಿಂದ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಬೆವರು ಸಾಲೆ, ಚಾರ್ಮ್ ಅದ ದದ್ದು, ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದು ಮುಂತಾದ ಸಮಸ್ಯೆಗಳಿಂದ ಈ ಹಣ್ಣು ಪರಿಹಾರ ನೀಡುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.