Tender Coconut Water For Weight Loss : ತೂಕ ಹೆಚ್ಚಳದಿಂದ ದೇಹ ಸೌಂದರ್ಯ ಹಾಳಾಗುವುದು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದಲ್ಲ.ತೂಕ ಹೆಚ್ಚಳವಾದ ಹಾಗೆ   ಅಧಿಕ ಕೊಲೆಸ್ಟ್ರಾಲ್,ಮಧುಮೇಹ,ಅಧಿಕ ಬಿಪಿ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಸಂಗ್ರಹವಾದಾಗ,ದೇಹದ ಒಟ್ಟಾರೆ ಆಕಾರವು ಹಾಳಾಗುತ್ತದೆ.


COMMERCIAL BREAK
SCROLL TO CONTINUE READING

ತೂಕ ಇಳಿಸಿಕೊಳ್ಳಲು ಈ ನೈಸರ್ಗಿಕ ಪಾನೀಯ ಸೇವಿಸಿ : 
ನಾವಿಲ್ಲಿ ಎಳನೀರಿನ ಬಗ್ಗೆ ಹೇಳುತ್ತಿದ್ದೇವೆ.ಇದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ.ಹಳ್ಳಿಯಿಂದ ದೆಲ್ಲಿಯವರೆಗೆ ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ.  ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದು.


ಇದನ್ನೂ ಓದಿ : ಈ ಒಂದು ಪುಡಿ ಸಾಕು ಹಲ್ಲುಗಳಲ್ಲಿ ಅಂಟಿ ಕುಳಿತಿರುವ ಹಳದಿ ಕಲೆ ತೆಗೆಯಲು !ಬಾಯಿ ದುರ್ವಾಸನೆಯಿಂದಲೂ ಸಿಗುವುದು ಮುಕ್ತಿ


ಎಳನೀರಿನಲ್ಲಿ ಕಂಡುಬರುವ ಪೋಷಕಾಂಶಗಳು :
ಎಳನೀರು ಕುಡಿಯುವ ಅಭ್ಯಾಸವನ್ನು ಮಾಡಿದರೆ,ದೇಹವು ವಿಟಮಿನ್,ಖನಿಜಗಳು ಮತ್ತು ನೈಸರ್ಗಿಕ ಕಿಣ್ವಗಳನ್ನು ಪಡೆಯುತ್ತದೆ.ಇದರಿಂದಾಗಿ ದೇಹವು ತೇವಾಂಶ ಮತ್ತು ತಾಜಾತನವನ್ನು ಅನುಭವಿಸುತ್ತದೆ.


ಎಳನೀರು ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ? :
ಎಳನೀರು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು, ಅಲ್ಪ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಅದರಲ್ಲಿ ಕಂಡುಬರುತ್ತವೆ. ಇದು ಚಯಾಪಚಯವನ್ನು ಹೆಚ್ಚಿಸುವುದರೊಂದಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದನ್ನು ಒಮ್ಮೆ ಕುಡಿದರೆ ಬಹಳ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ.ಹಾಗಾಗಿ ಓವರ್ ಈಟ್ ಮಾಡುವ ಅಪಾಯ ತಪ್ಪುತ್ತದೆ. ಎಳನೀರು ಹೆಚ್ಚು ಖನಿಜಗಳನ್ನು ಹೊಂದಿದ್ದು, ಹಣ್ಣಿನ ರಸಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. 


ಇದನ್ನೂ ಓದಿ : ಮಧುಮೇಹಿಗಳಿಗೆ ಅಮೃತವಿದ್ದಂತೆ ಈ ಚಹಾ..! ಪ್ರತಿನಿತ್ಯ ಸೇವಿಸಿದ್ರೆ ಶುಗರ್‌ ಎಷ್ಟೇ ಇದ್ರು ನಾರ್ಮಲ್‌ ಆಗುತ್ತೆ!!


ಎಳನೀರನ್ನು ಯಾವಾಗ ಕುಡಿಯಬೇಕು? :
ಎಳನೀರನ್ನು ಯಾವ ಸಮಯದಲ್ಲಿ ಬೇಕಾದರೂ ಕುಡಿಯಬಹುದು.ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.ಅಲ್ಲದೆ  ಅದರ ಪರಿಣಾಮ ದಿನವಿಡೀ ಗೋಚರಿಸುತ್ತದೆ.ತಾಜಾ ಮತ್ತು ಚೈತನ್ಯ ಕೂಡಾ ಇದರಿಂದ ಸಿಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ