Calcium Rich Foods : ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗಿರುವುದು ಬಹಳ ಮುಖ್ಯ. ಮೂಳೆಗಳ ಮೇಲೆಯೇ ನಮ್ಮ ಇಡೀ ದೇಹ ನಿಂತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಧಿವಾತ, ಮೊಣಕಾಲು ನೋವಿನಂತಹ ಸಮಸ್ಯೆಗಳು ಎದುರಾಗುತ್ತಿದೆ. ಕಳಪೆ ಆಹಾರ ಸೇವನೆಯಿಂದಲೇ ಈ ಸಮಸ್ಯೆ ಎದುರಾಗುತ್ತದೆ. ಕ್ಯಾಲ್ಸಿಯಂ ಭರಿತ ಆಹಾರಗಳನ್ನು  ಸೇವಿಸಿದರೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು. 


COMMERCIAL BREAK
SCROLL TO CONTINUE READING

ಈ ಕ್ಯಾಲ್ಸಿಯಂ ಆಹಾರಗಳನ್ನು ಸೇವಿಸಿ : 
ಡೈರಿ ಉತ್ಪನ್ನಗಳು : 
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸಬೇಕಾದರೆ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇರಿಸಿಕೊಳ್ಳಬೇಕು. ಕ್ಯಾಲ್ಸಿಯಂ ಅನ್ನು ಮರುಪೂರಣಗೊಳಿಸಲು ಡೈರಿ ಉತ್ಪನ್ನಗಳು ಅತ್ಯುತ್ತಮ ಮೂಲಗಳಾಗಿವೆ. ಮತ್ತೊಂದೆಡೆ, ಮೂಳೆಗಳು  ಸದೃಢವಾಗಿರಬೇಕಾದರೆ ಆಹಾರದಲ್ಲಿ ಚೀಸ್, ಹಾಲು, ಮೊಸರು ಇತ್ಯಾದಿಗಳನ್ನು 
ಸೇರಿಸಿಕೊಳ್ಳಬೇಕು.


ಇದನ್ನೂ ಓದಿ : Weight Loss Tips:ವೇಗವಾಗಿ ತೂಕ ಇಳಿಸಿಕೊಳ್ಳಬೇಕೇ, ಡಿನ್ನರ್ ನಲ್ಲಿರಲಿ ಈ 3 ಪದಾರ್ಥಗಳು


ಮೊಟ್ಟೆ  :
ಮೂಳೆಗಳ ಆರೋಗ್ಯಕ್ಕೆ ಮೊಟ್ಟೆ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು, ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯವಾಗಿರುವ ವಿಟಮಿನ್ ಡಿ ಮೊಟ್ಟೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಬೆಳಗಿನ ಉಪಹಾರಕ್ಕಾಗಿ ಪ್ರತಿದಿನ ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ಮಾಡಿ ತಿನ್ನುತ್ತಾ ಬಂದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ನೀಗುತ್ತದೆ. 


ಸೋಯಾಬೀನ್  : 
ಸೋಯಾಬೀನ್ ಕೂಡ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ವಿಟಮಿನ್ ಬಿ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. 


ಇದನ್ನೂ ಓದಿ : Hair Care : ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ತೆಂಗಿನೆಣ್ಣೆ ಜೊತೆ ಈ 2 ವಸ್ತುಗಳನ್ನು ಸೇರಿಸಿ


ಮೊಳಕೆ ಕಾಳು : 
ಮೊಳಕೆ ಕಾಳು ಕೂಡ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದನ್ನು ಸಲಾಡ್ ನಲ್ಲಿ ಸೇವಿಸಬಹುದು ಅಥವಾ ಪಲ್ಯ ಮಾಡಿ ತಿನ್ನಬಹುದು. ಇನ್ನು ಮೊಳಕೆ ಕಾಳು  ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ.


 



( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.