ಬೆಂಗಳೂರು : ಬೇಸಿಗೆಯಲ್ಲಿ, ಏನನ್ನಾದರೂ ತಿನ್ನುವುದಕ್ಕಿಂತ ಏನನ್ನಾದರೂ  ಕುಡಿಯಬೇಕು ಅನ್ನಿಸುವುದೇ ಹೆಚ್ಚು. ಪದೇ ಪದೇ ತಂಪು ಪಾನೀಯಗಳನ್ನು ಕುಡಿಯುತ್ತಿರಬೇಕು ಅನ್ನಿಸುತ್ತಿರುತ್ತದೆ. ಅತಿಯಾದ ಬೆವರುವಿಕೆಯ ಕಾರಣದಿಂದ ಹೀಗಾಗುತ್ತದೆ. ಇದರಿಂದ ಆಯಾಸ ಕೂಡಾ ಹೆಚ್ಚುತ್ತದೆ.  ಬೇಸಿಗೆಯಲ್ಲಿ ಬಾಯಾರಿಕೆ ಕೂಡಾ ಹೆಚ್ಚು. ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿನ ಅಸಮತೋಲನ ಅಥವಾ ಉತ್ತಮ ಬ್ಯಾಕ್ಟೀರಿಯಾದ ಕೊರತೆಯಿಂದಾಗಿ ಹೀಗಾಗುತ್ತದೆ. ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸಬೇಕಾದರೆ ಬೇಸಿಗೆಯಲ್ಲಿ ಪ್ರತಿದಿನ ಈ ಪಾನೀಯಗಳನ್ನು ಸೇವಿಸಿ. 


COMMERCIAL BREAK
SCROLL TO CONTINUE READING

ಹೊಟ್ಟೆಯಲ್ಲಿನ ಉತ್ತಮ ಬ್ಯಾಕ್ಟೀರಿಯಾಗಳಿಗಾಗಿ ಪ್ರತಿದಿನ ಈ ಪಾನೀಯಗಳನ್ನು ಸೇವಿಸಿ : 
1. ಮಜ್ಜಿಗೆ ಕುಡಿಯಿರಿ : ಬೇಸಿಗೆಯಲ್ಲಿ ಹೊಟ್ಟೆಯನ್ನು ತಂಪಾಗಿರಿಸಲು, ಪ್ರತಿದಿನ ಮಜ್ಜಿಗೆ ಕುಡಿಯಬೇಕು. ಮಜ್ಜಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅದರಲ್ಲೂ ಮಧ್ಯಾಹ್ನದ ಊಟದ ನಂತರ ಒಂದು ಲೋಟ ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ತೂಕ ಇಳಿಕೆಗೆ ಮಾಡಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಒಂದು ಅದ್ಭುತ ಪಾನೀಯ!


2. ಗುಲ್ಕಂಡ್ ಹಾಲು : ಬೇಸಿಗೆಯಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಪಿತ್ತದ ಸಮಸ್ಯೆ ಉಂಟಾಗುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕಾಗಿ ಬೇಸಿಗೆಯಲ್ಲಿ ಗುಲ್ಕಂಡ್ ಹಾಲನ್ನು ಸೇವಿಸಬೇಕು.  ಅದರಲ್ಲೂ ರಾತ್ರಿ ಮಲಗುವ ಮುನ್ನ ಗುಲ್ಕಂಡ್  ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. 


3. ನಿಂಬೆ ಪಾನಕ : ಬೇಸಿಗೆಯಲ್ಲಿ ತಾಪಮಾನದ ಏರಿಕೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಾರೆ. ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಈ ಸಮಸ್ಯೆಯ ನಿವಾರಣೆಗೆ ಪ್ರತಿದಿನ ನಿಂಬೆ ಪಾನಕ ಸೇವಿಸಬಹುದು. ನಿಂಬೆ ಪಾನಕಕ್ಕೆ ಚಿಯಾ ಬೀಜಗಳನ್ನು ಸೇರಿಸುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನದಲ್ಲಿಡುತ್ತದೆ.


4. ಕಬ್ಬಿನ ಜ್ಯೂಸ್ :  ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು, ಪ್ರತಿದಿನ ಕಬ್ಬಿನ ರಸವನ್ನು ಖಂಡಿತವಾಗಿ ಕುಡಿಯಿರಿ. ಇದರ ಬಳಕೆಯು ಅನೇಕ ರೋಗಗಳಿಗೆ ಪ್ರಯೋಜನವನ್ನು ನೀಡುತ್ತದೆ. ಜಾಂಡೀಸ್ ಸಂದರ್ಭದಲ್ಲಿಯೂ ಕಬ್ಬಿನ ರಸವನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಅಲ್ಲದೆ  ಇದು ದೇಹವು ಹೈಡ್ರೇಟ್ ಆಗಿ ಉಳಿಯಲು ಸಹಾಯ ಮಾಡುತ್ತದೆ.  


ಇದನ್ನೂ ಓದಿ : Weight Loss Drink : ದೇಹ ತೂಕ ಇಳಿಕೆಗೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸೋರೆಕಾಯಿ ಜ್ಯೂಸ್!


5. ಎಳ ನೀರು : ಉರಿ ಮೂತ್ರ ಮತ್ತು ಪಿತ್ತರಸದ ಅಸಮತೋಲನದಿಂದ ತೊಂದರೆಗೊಳಗಾಗಿದ್ದರೆ,  ಎಳನೀರು ಪ್ರಯೋಜನಕಾರಿಯಾಗಲಿದೆ.  ಎಳ ನೀರು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನದಲ್ಲಿಡುತ್ತದೆ. ಅಲ್ಲದೆ ದೇಹದ ಉಷ್ಣತೆಯನ್ನು ತಂಪಾಗಿರಿಸುತ್ತದೆ. ಇದಕ್ಕಾಗಿ ಪ್ರತಿದಿನ ಎಳ ನೀರನ್ನು ಖಂಡಿತವಾಗಿ ಸೇವಿಸಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.