ಈ ಆಹಾರ ಸೇವನೆ ಮೂಲಕ ದೂರ ಮಾಡಬಹುದು ವಿಟಮಿನ್ ಬಿ 12 ಕೊರತೆ
Vitamin B12 Deficiency:ಒಂದು ವೇಳೆ ನಿಮ್ಮ ದೇಹದಲ್ಲಿಯೂ ವಿಟಮಿನ್ ಬಿ 12 ಕೊರತೆಯಿದ್ದರೆ ಈ ಕೆಳಗಿನ ಆಹಾರ ವಸ್ತುಗಳನ್ನು ಸೇವಿಸುವ ಮೂಲಕ ಈ ಕೊರತೆಯನ್ನು ಸರಿದೂಗಿಸಬಹುದು.
Vitamin B12 Deficiency : ವಿಟಮಿನ್ ಬಿ 12 ದೇಹಕ್ಕೆ ಬಹಳ ಮುಖ್ಯವಾಗಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 12 ದೇಹದಲ್ಲಿ ತನ್ನಷ್ಟಕ್ಕೆ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ಬಿ 12 ಉತ್ಪತ್ತಿಯಾಗಬೇಕಾದರೆ ಕೆಲವೊಂದು ವಸ್ತುಗಳನ್ನು ಸೇವಿಸಬೇಕು. ಒಂದು ವೇಳೆ ನಿಮ್ಮ ದೇಹದಲ್ಲಿಯೂ ವಿಟಮಿನ್ ಬಿ 12 ಕೊರತೆಯಿದ್ದರೆ ಈ ಕೆಳಗಿನ ಆಹಾರ ವಸ್ತುಗಳನ್ನು ಸೇವಿಸುವ ಮೂಲಕ ಈ ಕೊರತೆಯನ್ನು ಸರಿದೂಗಿಸಬಹುದು.
ವಿಟಮಿನ್ ಬಿ 12 ಕೊರತೆಯನ್ನು ನೀಗಿಸಲು, ಈ ಆಹಾರ ವಸ್ತುಗಳನ್ನು ಸೇವಿಸಿ :
ಮಾಂಸವನ್ನು ಸೇವಿಸಿ :
ಮಾಂಸವು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ. ಪ್ರತಿದಿನ ಮಾಂಸವನ್ನು ಸೇವಿಸಿದರೆ, ದೇಹಕ್ಕೆ ವಿಟಮಿನ್ ಬಿ 12 ಹೇರಳವಾಗಿ ಸಿಗುತ್ತದೆ. ಇದರೊಂದಿಗೆ ನಿಮ್ಮ ದೇಹದಲ್ಲಿನ ಅನೇಕ ವಸ್ತುಗಳ ಕೊರತೆಯೂ ದೂರವಾಗುತ್ತದೆ. ಅದಕ್ಕಾಗಿಯೇ ನೀವು ಪ್ರತಿದಿನ ಮಾಂಸವನ್ನು ಸೇವಿಸಬೇಕು.
ಇದನ್ನೂ ಓದಿ : ದೇಹದಲ್ಲಿ ಈ ವಿಟಮಿನ್ ಕಡಿಮೆಯಾದರೆ ಆಗುವುದು ಕೂದಲು ದೃಷ್ಟಿಗೆ ನಷ್ಟ! ಈ ಆಹಾರ ಸೇವಿಸಿ ಸಮಸ್ಯೆ ಪರಿಹರಿಸಿಕೊಳ್ಳಿ
ಟ್ಯೂನ ಮೀನು :
ಮಾಂಸಾಹಾರಿಗಳಿಗೆ ಟ್ಯೂನ ಮೀನುಗಳ ಬಗ್ಗೆ ತಿಳಿದಿರುತ್ತದೆ. ಈ ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಮೀನಿನಲ್ಲಿ ವಿಟಮಿನ್ ಬಿ 12 ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ. ಆದ್ದರಿಂದ ಇದನ್ನು ಸೇವಿಸುವುದರಿಂದ ದೇಹದಲ್ಲಿನ ವಿಟಮಿನ್ ಬಿ12 ಕೊರತೆ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಈ ಮೀನನ್ನು ವಾರಕ್ಕೆ ಎರಡು ಬಾರಿ ಸೇವಿಸಬಹುದು.
ಹಾಲು ಮತ್ತು ಡೈರಿ ಉತ್ಪನ್ನಗಳು :
ಹಾಲು ಮತ್ತು ಇತರ ಡೈರಿ ಉತ್ಪನ್ನಗಳಾದ ಮೊಸರು, ಚೀಸ್, ಬೆಣ್ಣೆ, ಪನೀರ್ ಇವುಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸೇರಿದಂತೆ ಅನೇಕ ಜೀವಸತ್ವಗಳಿರುತ್ತವೆ. ಆದ್ದರಿಂದ ನಾನ್ ವೆಜ್ ತಿನ್ನದೇ ಇರುವವರು ಪ್ರತಿದಿನ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಇದನ್ನು ಸೇವಿಸುವುದರಿಂದ ವಿಟಮಿನ್ ಬಿ12 ಕೊರತೆ ದೂರವಾಗುತ್ತದೆ.
ಇದನ್ನೂ ಓದಿ : Health Tips: ಸೊಳ್ಳೆಗಳ ಕಾಟ ನಿಮ್ಮ ನಿದ್ದೆಗೆಡಿಸಿದೆಯೇ, ಇಲ್ಲಿದೆ ಸುಲಭ ಪರಿಹಾರ!
ಮೊಟ್ಟೆ :
ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕಾಡುತ್ತಿದ್ದರೆ ಪ್ರತಿದಿನ ಮೊಟ್ಟೆ ಸೇವಿಸಬೇಕು. ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.