ಈ ನಾಲ್ಕು ವಸ್ತುಗಳನ್ನು ಸೇವಿಸಿದರೆ ಸಾಕು ! ಕೇವಲ 15 ದಿನಗಳಲ್ಲಿ Fat Burn ಸಾಧ್ಯ
Fat burning food :ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿರುವ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಅಗತ್ಯ. ಈ ಆಹಾರಗಳು ದೇಹದ ಕೊಬ್ಬನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
Fat burning food : ತೂಕ ಹೆಚ್ಚಾಗುತ್ತಿದೆ ಎಂದರೆ ನಿಧಾನವಾಗಿ ಆತಂಕ ಕೂಡಾ ಹೆಚ್ಚಾಗುತ್ತದೆ. ದೇಹ ತೂಕ ಹೆಚ್ಚಾಗುತ್ತಿದೆ ಎಂದರೆ ದೇಹದಲ್ಲಿ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ ಎನ್ನುವುದನ್ನು ಕೂಡಾ ಅರ್ಥ ಮಾಡಿಕೊಳ್ಳಬೇಕು. ಹೆಚ್ಚಾದ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುವುದು ಅಷ್ಟು ಸುಲಭವಲ್ಲ. ಹಾಗಂತ ಅಸಾಧ್ಯ ಕೂಡಾ ಅಲ್ಲ. ತೂಕವನ್ನು ಕಳೆದುಕೊಳ್ಳಲು, ಆಹಾರದಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿರುವ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಅಗತ್ಯ. ಈ ಆಹಾರಗಳು ದೇಹದ ಕೊಬ್ಬನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಕೊಬ್ಬು ಕರಗಿಸಲು ಸಹಾಯ ಮಾಡುವ ಆಹಾರಗಳು :
ಚಕ್ಕೆ :
ಚಕ್ಕೆ ಸ್ವಲ್ಪ ಕಟುವಾದ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಇದನ್ನು ಉಪ್ಪು ಮಾತ್ರವಲ್ಲದೆ ಸಿಹಿ ಆಹಾರದಲ್ಲಿಯೂ ಬಳಸಲಾಗುತ್ತದೆ. ಮೊಸರು, ಕಾಫಿ ಅಥವಾ ಚಹಾಕ್ಕೆ ಸೇರಿಸುವ ಮೂಲಕ ಚಕ್ಕೆಯನ್ನು ಸೇವಿಸಬಹುದು. ಅಥವಾ ಬರೀ ಚಕ್ಕೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ನಂತರ ಅ ನೀರನ್ನು ಶೋಧಿಸಿ ಕುಡಿಯಬಹುದು. ಹೀಗೆ ನಿತ್ಯ ಮಾ ಡುತ್ತಾ ಬಂದರೆ ದೇಹದಲ್ಲಿ ಅಡಗಿಕೊಂಡಿರುವ ಕೊಬ್ಬು ವೇಗವಾಗಿ ಕರಗುತ್ತದೆ.
ಇದನ್ನೂ ಓದಿ : ಗ್ರೀನ್ ಆಪಲ್ ಆರೋಗ್ಯ ಪ್ರಯೋಜನ ತಿಳಿದರೆ ಶಾಕ್ ಆಗುತ್ತೀರಿ
ಪೇರಳೆ :
ಪೇರಳೆ ಒಂದು ಋತುಮಾನದ ಹಣ್ಣಾಗಿದ್ದು, ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಪೇರಳೆಯಲ್ಲಿ ಉತ್ತಮ ಪ್ರಮಾಣದ ನಾರಿನಂಶವಿರುತ್ತದೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುವಂತೆ ಭಾಸವಾಗುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಗ್ರೀನ್ ಟೀ :
ನೀವು ಪ್ರತಿದಿನ ಗ್ರೀನ್ ಟೀ ಸೇವಿಸುತ್ತಾ ಬಂದರೆ ಅದು ನಿಮ್ಮ ಚಯಾಪಚಯವನ್ನು ಬಲಪಡಿಸುತ್ತದೆ. ಚಯಾಪಚಯ ಸುಧಾರಿಸಿದಾಗ ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ, ಅಲ್ಲಿ ಗ್ರೀನ್ ಟೀಗೆ ಒಂದು ಸ್ಥಾನ ಇರಲೇಬೇಕು.
ಇದನ್ನೂ ಓದಿ : Methi Seeds : ಮೆಂತ್ಯ ಕಾಳುಗಳಿಂದಾಗುವ ಪ್ರಯೋಜನಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಲೆಬೇಕು..!
ಕರಿಮೆಣಸು :
ಕರಿಮೆಣಸು ತುಂಬಾ ಬಹಳ ಖಾರ ಮಸಾಲೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ದೇಹದಲ್ಲಿನ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಕರಿಮೆಣಸನ್ನು ಸೇವಿಸುವುದರಿಂದ ಚಯಾಪಚಯ ಬಲಗೊಳ್ಳುತ್ತದೆ. ಇದರಿಂದ ತೂಕ ಕಳೆದುಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.