ಕಿಡ್ನಿ ಸ್ಟೋನ್ ಇದ್ದವರು ನಿತ್ಯ ಈ ಹಣ್ಣನ್ನು ತಿಂದರೆ ಔಷಧಿಯ ಅಗತ್ಯವೇ ಇರುವುದಿಲ್ಲ
ಕಿಡ್ನಿ ಸ್ಟೋನ್ ಗೆ ಪ್ರಮುಖ ಕಾರಣವೆಂದರೆ ನಾವು ಅನುಸರಿಸುವ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು ಕಾರಣವಾಗುವ ಖನಿಜಗಳು ರಕ್ತದಲ್ಲಿ ಹೆಚ್ಚುತ್ತವೆ.
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವುದು ಸಾಮಾನ್ಯ ಸಮಸ್ಯೆ. ಹೆಚ್ಚಿನ ಜನರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಿಡ್ನಿ ಸ್ಟೋನ್ ಗೆ ಪ್ರಮುಖ ಕಾರಣವೆಂದರೆ ನಾವು ಅನುಸರಿಸುವ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು ಕಾರಣವಾಗುವ ಖನಿಜಗಳು ರಕ್ತದಲ್ಲಿ ಹೆಚ್ಚುತ್ತವೆ. ಅದಕ್ಕಾಗಿಯೇ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಅಥವಾ ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಂದಿರುವ ಈ ಪದಾರ್ಥಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ, ಕೆಲವು ಪದಾರ್ಥಗಳನ್ನು ಸೇವಿಸುವ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿವಾರಿಸಬಹುದು. ಹೌದು, ಕೆಲವು ಹಣ್ಣುಗಳನ್ನು ನಿತ್ಯ ಸೇವಿಸುವ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕಿಡ್ನಿ ಸ್ಟೋನ್ ರೋಗಿಗಳು ಈ ಹಣ್ಣುಗಳನ್ನು ಸೇವಿಸಬೇಕು :
ನೀರಿನಂಶವಿರುವ ಹಣ್ಣುಗಳನ್ನು ತಿನ್ನಬೇಕು :
ಎಳನೀರು, ಕಲ್ಲಂಗಡಿ ಸೇರಿದಂತೆ ನೀರಿನಿಂದ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯಿಂದ ಮೂತ್ರಪಿಂಡದಲ್ಲಿರುವ ಕಲ್ಲನ್ನು ಹೋಗಲಾಡಿಸಬಹುದು. ಇವೆಲ್ಲವೂ ಸ್ಟೋನ್ ಅನ್ನು ಕರಗಿಸುವ ಕೆಲಸ ಮಾಡುತ್ತವೆ. ಈ ಕಾರಣದಿಂದ ನಿಮ್ಮ ಆಹಾರದಲ್ಲಿ ಗರಿಷ್ಠ ನೀರಿನ ಅಂಶವಿರುವ ಹಣ್ಣುಗಳನ್ನು ಸೇರಿಸಬೇಕು.
ಇದನ್ನೂ ಓದಿ : Curry Leaves: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಈ 5 ಕಾಯಿಲೆ ಬರುವುದಿಲ್ಲ
ಸಿಟ್ರಸ್ ಹಣ್ಣುಗಳು :
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿವೆ. ಇದು ಕಲ್ಲುಗಳನ್ನು ಕರಗಿಸುವ ಕೆಲಸ ಮಾಡುತ್ತವೆ. ಸಿಟ್ರಸ್ ಹಣ್ಣುಗಳು ಮತ್ತು ಅದರ ಜ್ಯೂಸ್ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಆದ್ದರಿಂದ ಇದನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಮೋಸಂಬಿ, ಮತ್ತು ದ್ರಾಕ್ಷಿಯನ್ನು ಸೇವಿಸಬೇಕು.
ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಹಣ್ಣುಗಳು :
ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಣ್ಣುಗಳು ಕಲ್ಲುಗಳು ಕರಗಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕಪ್ಪು ದ್ರಾಕ್ಷಿ, ಅಂಜೂರದ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದಲ್ಲದೆ ಸೌತೆಕಾಯಿಯಂಥಹ ನೀರಿನ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಬಹುದು.
ಇದನ್ನೂ ಓದಿ : Tender Coconut : ಎಳೆನೀರು ಕುಡಿದ ಮೇಲೆ ತಪ್ಪದೇ ಗಂಜಿ ತಿನ್ನಿ, ಈ ಕಾಯಿಲೆ ಬುಡಸಮೇತ ತೊಲಗುತ್ತೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.