Herbal Teas That Soothe Digestion After Eating :ಆಹಾರ ಸೇವನೆ ನಂತರ ಜೀರ್ಣಕ್ರಿಯೆಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಆರೋಗ್ಯಕರ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಗಿಡಮೂಲಿಕೆ ಚಹಾ ಸಹಾಯ ಮಾಡುತ್ತದೆ. ಈ ಹರ್ಬಲ್ ಟೀ ವಿವಿಧ ಔಷಧೀಯ ಗುಣಗಳನ್ನು ಹೊಂದಿದ್ದು, ಇದು ಹೊಟ್ಟೆಯ ಸಮಸ್ಯೆಗೆ  ಶೀಘ್ರ  ಉಪಶಮನ ನೀಡಲಿದೆ. ಇದು ಹೊಟ್ಟೆಯ ಗ್ಯಾಸ್, ಅಜೀರ್ಣ, ಮಲಬದ್ಧತೆ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಲ್ಲದೇ ತೂಕವನ್ನು ನಿಯಂತ್ರಣದಲ್ಲಿಡಲು ಕೂಡಾ ಇದು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಜೀರ್ಣಕ್ರಿಯೆ ಸುಧಾರಿಸಲು ಜೀರಿಗೆ ಚಹಾ : 
ನಮ್ಮ ಪ್ರತಿ ಅಡುಗೆಯಲ್ಲಿಯೂ ಜೀರಿಗೆಯನ್ನು ಬಳಸಲಾಗುತ್ತೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಜೀರಿಗೆಯಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು. ಜೀರಿಗೆ ಕಾರ್ಮಿನೇಟಿವ್ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಹೊಟ್ಟೆ ಉಬ್ಬುವುದು, ಅಜೀರ್ಣ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದಕ್ಕಾಗಿ ಜೀರಿಗೆಯನ್ನು ಲಘುವಾಗಿ ಹುರಿದು ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿ ಮತ್ತು ನಿಂಬೆರಸವನ್ನು 1 ಕಪ್ ನೀರಿಗೆ ಸೇರಿಸಿ ಕುಡಿಯಿರಿ. 


ಇದನ್ನೂ ಓದಿ : ಪೀಡಿಯಾಟ್ರಿಕ್ ಕ್ಯಾನ್ಸರ್ ಮಕ್ಕಳಿಗೆ ಅಪಾಯಕಾರಿ,..! ಅದನ್ನು ಕಂಡುಹಿಡಿಯುವುದು ಹೇಗೆ ಗೊತ್ತೇ ?


ಕ್ಯಾಮೊಮೈಲ್ ಚಹಾ : 
ಕ್ಯಾಮೊಮೈಲ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು,  ಉದರದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 1 ಕಪ್ ನೀರಿನಲ್ಲಿ ಕ್ಯಾಮೊಮೈಲ್ ಟೀ ಬ್ಯಾಗ್ ಹಾಕಿ ನಂತರ ಆ ನೀರನ್ನು ಸೇವಿಸಬೇಕು.


ಸೊಂಫಿನ ನೀರು : 
ಊಟದ ನಂತರ ಸೊಂಫಿನ ನೀರು ಸೇವಿಸುವುದರಿಂದ ವಾತ ದೋಷವನ್ನು ನಿವಾರಿಸಬಹುದು. ಇದು ಗ್ಯಾಸ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಕೂಡಾ ಇದು ಸಹಾಯ ಮಾಡುತ್ತದೆ. ಇದಕ್ಕಾಗಿ 1 ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ 1 ಚಮಚ  ಸೊಂಫನ್ನು ಸೇರಿಸಿ ಸುಮಾರು 5 ರಿಂದ 7 ನಿಮಿಷಗಳ ಕಾಲ ಕುದಿಸಿ ಫಿಲ್ಟರ್ ಮಾಡಿ  ಸೇವಿಸಿ. 


ಶುಂಠಿ ಚಹಾ : 
ಶುಂಠಿ ಚಹಾದ ಸಹಾಯದಿಂದ ಇದು ಲಾಲಾರಸ ಗ್ರಂಥಿಗಳು, ಪಿತ್ತರಸ ಉತ್ಪಾದನೆ ಮತ್ತು ಗ್ಯಾಸ್ಟ್ರಿಕ್ ಕಿಣ್ವಗಳನ್ನು ಉತ್ತೇಜಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಈ ಚಹಾವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ತುರಿದ ಶುಂಠಿಯನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಬೇಕು. ನಂತರ ಇದನ್ನು ಫಿಲ್ಟರ್ ಮಾಡಿ ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ಮಿಶ್ರಣ ಮಾಡಿ ಸೇವಿಸಬೇಕು. 


ಇದನ್ನೂ ಓದಿ : Health Tips: ವಾರಕ್ಕೆ 3 ಪೇರಲೆ ಹಣ್ಣು ತಿಂದರೆ ಸಾಕು ಈ ಆರೋಗ್ಯ ಸಮಸ್ಯೆಗಳು ಮತ್ತೆಂದೂ ಬರಲ್ಲ!


ಪುದೀನಾ ಚಹಾ :
ಪುದೀನ ಚಹಾವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಬಹಳ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಅಜೀರ್ಣ, ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದನ್ನೂ ತಯಾರಿಸಲು 1 ಕಪ್ ಬಿಸಿನೀರನ್ನು ತೆಗೆದುಕೊಂಡು ಅದಕ್ಕೆ ಕೆಲವು ಪುದೀನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಸೇವಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.