Benefits Yellow Foods For Heart : ಹೃದಯವು ನಮ್ಮ ದೇಹದ ಬಹಳ ಮುಖ್ಯವಾದ ಅಂಗವಾಗಿದೆ.  ನಮ್ಮ ಕೊನೆಯ ಉಸಿರಿನವರೆಗೂ ಈ ಹೃದಯ ಬಡಿಯುತ್ತಲೇ ಇರುತ್ತದೆ. ಹೃದಯ ಮಿಡಿಯುವುದನ್ನು ನಿಲ್ಲಿಸಿತು ಎಂದರೆ ಅಲ್ಲಿಗೆ ನಮ್ಮ ಉಸಿತು ಕೂಡಾ ನಿಂತು ಹೋಗುತ್ತದೆ. ಹೃದಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳು ಎದುರಾಗುವ ಅಪಾಯವಿದೆ. ಈ  ಹಿನ್ನೆಲೆಯಲ್ಲಿ ನಮ್ಮ ದೈನಂದಿನ ಆಹಾರದಿಂದ ಎಣ್ಣೆಯುಕ್ತ ಆಹಾರವನ್ನು ಹೊರಗಿಡುವುದು, ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸುವುದು ಬಹಳ ಮುಖ್ಯ. ಪ್ರಸಿದ್ಧ ಆಹಾರ ತಜ್ಞ ಆಯುಷಿ ಯಾದವ್ ಪ್ರಕಾರ, ಕೆಲವು ಹಳದಿ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು.


COMMERCIAL BREAK
SCROLL TO CONTINUE READING

ಈ ಹಳದಿ ಆಹಾರಗಳು ಹೃದಯಾಘಾತವನ್ನು ತಡೆಯುತ್ತದೆ :
1. ಮಾವಿನ ಹಣ್ಣು :
ಮಾವಿನ ಹೆಸರು ಕೇಳಿದ ತಕ್ಷಣ ಬಾಯಿಯಲ್ಲಿ ನೀರು ಬರುತ್ತದೆ. ಮಾವಿನ ರುಚಿ ಸವಿಯಬೇಕಾದರೆ ಬೇಸಿಗೆವರೆಗೆ ಕಾಯಬೇಕು. ಮಾವಿನ ಹಣ್ಣು ತಿನ್ನಲು ರುಚಿ ಮಾತ್ರ ಅಲ್ಲ ಇದು ಆರೋಗ್ಯ ಗುಣಗಳನ್ನು ಕೂಡಾ ಹೊಂದಿದೆ. ಮಾವಿನ ಹಣ್ಣು ಹೃದಯದ ಆರೋಗ್ಯಕ್ಕೂ ಒಳ್ಳೆಯದು. 


ಇದನ್ನೂ ಓದಿ : ಪುರುಷರ ವೈವಾಹಿಕ ಜೀವನದ ಸಮಸ್ಯೆಗೆ ಪರಿಹಾರ ಅಡಗಿದೆ ಈ ವಿಶೇಷ ಜೇನಿನಲ್ಲಿ!


2. ನಿಂಬೆಹಣ್ಣು : 
ನಿಂಬೆಹಣ್ಣು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಆಹಾರವಾಗಿದ್ದು, ಇದನ್ನು ಸಲಾಡ್‌ನಿಂದ ಹಿಡಿದು ಪಾನಕದವರೆಗೆ ಬಳಸಲಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ.


3. ಬಾಳೆಹಣ್ಣು : 
ಬಹುಶಃ ನಮ್ಮ ನಡುವೆ ಬಾಳೆಹಣ್ಣು ತಿನ್ನದೇ ಇರುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಬಾಳೆಹಣ್ಣನ್ನು ಮಿತವಾಗಿ ತಿನ್ನುವುದು ತೂಕ ಇಳಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕಕ್ಕೂ ಇದು ಒಳ್ಳೆಯದು. 


4. ಅನಾನಸ್  ಹಣ್ಣು : 
ಅನಾನಸ್ ನ  ತಿನ್ನುವುದರಿಂದ ಹೃದಯಾಘಾತದ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಹಾಗಂತ ಈ ಹಣ್ಣನ್ನು ಮಿತಿ ಮೀರಿ ತಿನ್ನಲೂ ಬಾರದು. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ : ಕೆಟ್ಟ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಡಿವಾಣ ಹಾಕುತ್ತವೆ ಈ ಗಿಡಮೂಲಿಕೆಗಳು!


5. ಹಳದಿ ಕ್ಯಾಪ್ಸಿಕಂ : 
ಫೈಬರ್, ಕಬ್ಬಿಣ ಮತ್ತು ಫೋಲೇಟ್ ಈ ಆಹಾರದಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ಇದು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಮಾತ್ರವಲ್ಲ ದೇಹದಲ್ಲಿ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಹೃದಯವೂ  ಆರೋಗ್ಯಕರವಾಗಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.