ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಎಣ್ಣೆ ಮತ್ತು ಮಸಾಲೆಯುಕ್ತ ಆಹಾರ, ಕಳಪೆ ಜೀವನಶೈಲಿ ಮತ್ತು ಒತ್ತಡದಿಂದಾಗಿ ಆಸಿಡಿಟಿ ಸಮಸ್ಯೆ ಉಂಟಾಗಬಹುದು. ಅಸಿಡಿಟಿಯಿಂದಾಗಿ ಹೊಟ್ಟೆ ಉರಿ, ಹುಳಿ ತೇಗು, ಮತ್ತು ಹೊಟ್ಟೆಯಲ್ಲಿ ಗ್ಯಾಸ್ ನಂತಹ ಸಮಸ್ಯೆಗಳು  ಎದುರಾಗುತ್ತದೆ. ಆಸಿಡಿಟಿ ಇದ್ದಾಗ ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆಸಿಡಿಟಿ ಇದ್ದಾಗ ಸುಲಭವಾಗಿ ಜೀರ್ಣವಾಗುವಂತಹ ಪದಾರ್ಥಗಳನ್ನು ಸೇವಿಸಬೇಕು. ಬೇಳೆಕಾಳುಗಳನ್ನು ತಿಂದ ನಂತರ ಅನೇಕ ಜನರು ಅಸಿಡಿಟಿ ಸಮಸ್ಯೆ  ಎದುರಿಸಲು ಪ್ರಾರಂಭಿಸುತ್ತಾರೆ. ಆದರೆ ಅಸಿಡಿಟಿ ಸಮಸ್ಯೆ ಇದ್ದರೂ ತಿನ್ನಬಹುದಾದ ಹಲವಾರು ಕಾಳುಗಳಿವೆ. 


COMMERCIAL BREAK
SCROLL TO CONTINUE READING

ಆಸಿಡಿಟಿಯ ಲಕ್ಷಣಗಳು : 
ಎದೆಯುರಿ, ಹೊಟ್ಟೆ ನೋವು, ವಾಕರಿಕೆ, ಮಲಬದ್ಧತೆ, ಹುಳಿ ತೇಗು, ಬಾಯಿಯ ದುರ್ವಾಸನೆ, ಗಂಟಲು ನೋವು, ನುಂಗಲು ತೊಂದರೆ ಅಥವಾ ಗಂಟಲಿನಲ್ಲಿ ಆಹಾರ ಸಿಕ್ಕಿಹಾಕಿಕೊಂಡ ಅನುಭವ, ತಿಂದ ನಂತರ ಹೊಟ್ಟೆ ಭಾರವಾದಂತೆ ಭಾಸವಾಗುವುದು ಇವುಗಳೆಲ್ಲವೂ ಆಸಿಡಿಟಿಯ ಲಕ್ಷಣಗಳಾಗಿವೆ. 


ಇದನ್ನೂ ಓದಿ :  Health Tips: ಗ್ಯಾಸ್ಟ್ರಿಕ್ ತಲೆನೋವಿಗೆ ಮನೆಯಲ್ಲಿಯೇ ಇದೆ ಮನೆಮದ್ದು..! 


ಹೆಸರುಬೇಳೆ : 
ಅಸಿಡಿಟಿ ಸಮಸ್ಯೆ ಇದ್ದರೆ ಹೆಸರುಬೇಳೆಯನ್ನು ಸೇವಿಸಬಹುದು. ಹೆಸರುಬೇಳೆ  ಸುಲಭವಾಗಿ ಜೀರ್ಣವಾಗುತ್ತದೆ. ಆದ್ದರಿಂದ ಇದನ್ನು ತಿನ್ನುವುದರಿಂದ ಗ್ಯಾಸ್ ಮತ್ತು ಆಸಿಡಿಟಿ ಉಂಟಾಗುವುದಿಲ್ಲ. ಹೆಸರುಬೇಳೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಕಬ್ಬಿಣ, ಸತು, ರಂಜಕ, ಫೈಬರ್, ಪ್ರೋಟೀನ್ ಮುಂತಾದ ಅನೇಕ ಪೋಷಕಾಂಶಗಳು ಇದರಲ್ಲಿವೆ. ಹೆಸರುಬೇಳೆಯಲ್ಲಿರುವ  ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡುತ್ತದೆ. ಇದು ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.  ಹೆಸರುಬೇಳೆ ಮಾಡುವಾಗ ಅದಕ್ಕೆ ತುಪ್ಪ ಮತ್ತು ಇಂಗು ಸೇರಿಸಿದರೆ ಆಸಿಡಿಟಿಯ ಪರಿಣಾಮ ಇನ್ನೂ ಕಡಿಮೆಯಾಗುತ್ತದೆ. 


ಮಸೂರ ಬೇಳೆ :  
ಅಸಿಡಿಟಿಯಿಂದ ಬಳಲುತ್ತಿರುವವರು  ಮಸೂರ ಮತ್ತು ಹೆಸರುಬೇಳೆಯ ಮಿಶ್ರಣವನ್ನು ಸೇವಿಸಬಹುದು. ವಾಸ್ತವವಾಗಿ, ಮಸೂರ ಬೇಳೆ ಶೀತ ಸ್ವಭಾವವನ್ನು ಹೊಂದಿದೆ. ಮಸೂರ ಬೇಳೆ ಬಿಸಿ ಸ್ವಭಾವವನ್ನು ಹೊಂದಿದೆ. ಈ ಎರಡನ್ನೂ ಬೆರೆಸಿ ತಿಂದರೆ ಅದರಿಂದ ಹೆಚ್ಚಿನ ಲಾಭ ಪಡೆಯಬಹುದು. ಆದಾಗ್ಯೂ, ನೀವು ಈ ಎರಡೂ ಕಾಳುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಈ ಎರಡೂ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಕಂಡುಬರುತ್ತದೆ. ಆದ್ದರಿಂದ, ನೀವು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಇದನ್ನೂ ತಿನ್ನಬಾರದು. 


ಇದನ್ನೂ ಓದಿ :  ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಬಾದಾಮಿ


ತೊಗರಿ ಬೇಳೆ : 
ಆಸಿಡಿಟಿ ಇದ್ದಾಗ  ತೊಗರಿ ಬೇಳೆ ಸೇವಿಸಬಹುದು. ಇದು ಹೊಟ್ಟೆಯಲ್ಲಿ ರೂಪುಗೊಂಡ ಅನಿಲವನ್ನು ತೊಡೆದುಹಾಕುತ್ತದೆ. ಇದಲ್ಲದೆ, ಇದು ಮಲಬದ್ಧತೆ ನಿವಾರಣೆಯಲ್ಲಿಯೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್-ಎ, ವಿಟಮಿನ್-ಬಿ12 ಮತ್ತು ಪ್ರೊಟೀನ್ ಕಂಡುಬರುತ್ತದೆ. ದಿನದ ಯಾವುದೇ ಸಮಯದಲ್ಲಿಯಾದರೂ ಈ ಬೇಳೆಯನ್ನು ಸೇವಿಸಬಹುದು.


ಹೆಸರು ಕಾಳು : 
ಅಸಿಡಿಟಿ ಸಮಸ್ಯೆಯಲ್ಲಿ ಹೆಸರು ಕಾಳು ಸೇವನೆಯು ಪ್ರಯೋಜನಕಾರಿಯಾಗಿದೆ. ಇದು ವಿಟಮಿನ್ ಬಿ, ಫೈಬರ್, ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ಪೂರೈಸುತ್ತದೆ. ಇದಲ್ಲದೆ, ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದು ಮಲಬದ್ಧತೆ ಸಮಸ್ಯೆಯಿಂದ ಕೂಡಾ ಮುಕ್ತಿ  ನೀಡುತ್ತದೆ. 


ಇದನ್ನೂ ಓದಿ : Male Fertility: ಈ 5 ಆಹಾರ ಸೇವಿಸುವುದರಿಂದ ವೀರ್ಯದ ಸಂಖ್ಯೆ ಕಡಿಮೆಯಾಗುತ್ತದೆ.!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.