ಬೆಂಗಳೂರು : ಹೆಚ್ಚಿನ ಜನರು ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊವನ್ನು ಸೇವಿಸುತ್ತಾರೆ. ಏಕೆಂದರೆ ಅವುಗಳು ಪೋಷಕಾಂಶಗಳಿಂದ ತುಂಬಿರುತ್ತವೆ. ಇವುಗಳನ್ನು ಸಲಾಡ್ ರೂಪದಲ್ಲಿಯೂ ಸೇವಿಸಲಾಗುತ್ತದೆ.   ಆದರೆ, ನೀವು ಇದನ್ನು ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. ಹಾಗಲಕಾಯಿಯಲ್ಲಿ ಪ್ರೋಟೀನ್, ಫೈಬರ್, ಸೋಡಿಯಂ, ವಿಟಮಿನ್ ಎ ಮುಂತಾದ ಅಂಶಗಳು ಕಂಡುಬರುತ್ತವೆ. ಮತ್ತೊಂದೆಡೆ, ಸೌತೆಕಾಯಿಯು ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ನೀರನ್ನು ಹೊಂದಿರುತ್ತದೆ. 


COMMERCIAL BREAK
SCROLL TO CONTINUE READING

ಹಾಗಲಕಾಯಿ ಸೌತೆಕಾಯಿ ಟೊಮೆಟೊ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು -
ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ :  
ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ರಸವು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ರಸವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಮಧುಮೇಹ ರೋಗಿಗಳಾಗಿದ್ದರೆ, ಪ್ರತಿದಿನ ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ರಸವನ್ನು ಕುಡಿಯಬಹುದು.


ಇದನ್ನೂ ಓದಿ : ಹುಟ್ಟು ಹೃದ್ರೋಗಿಗೆ ಅನಸ್ತೇಷಿಯಾ ನೀಡದೆ ನಡೆಸಿದ ಕಿಡ್ನಿ ಕಲ್ಲು ಶಸ್ತ್ರಚಿಕಿತ್ಸೆ ಯಶಸ್ವಿ


ಮಲಬದ್ಧತೆಗೆ ಪರಿಹಾರ : 
ಮಲಬದ್ಧತೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪ್ರತಿದಿನ ಹಾಗಲಕಾಯಿ, ಸೌತೆಕಾಯಿ ಟೊಮೆಟೊ ರಸವನ್ನು ಕುಡಿಯಬಹುದು. ಏಕೆಂದರೆ ಹಾಗಲಕಾಯಿ ಮತ್ತು ಸೌತೆಕಾಯಿಯಲ್ಲಿ ನಾರಿನಂಶವಿದ್ದು ಆಹಾರದ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. 


ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : 
ಚಳಿಗಾಲದಲ್ಲಿ ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ರಸವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.  ವಿಟಮಿನ್ ಸಿ ಟೊಮೆಟೊಗಳಲ್ಲಿ ಕಂಡುಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಪದೇ ಪದೇ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ರಸವನ್ನು ಕುಡಿಯಬಹುದು.


ಇದನ್ನೂ ಓದಿ : Velvet Beans For Diabetic: ಈ ಕಾಳುಗಳ ಸೇವನೆಯಿಂದ ಶೀಘ್ರವಾಗಿ ನಿಯಂತ್ರಣಕ್ಕೆ ಬರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ!


ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ರಸ ಮಾಡುವ ವಿಧಾನ  :-
ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ರಸವನ್ನು ತಯಾರಿಸಲು ಹಾಗಲಕಾಯಿಯನ್ನು ತೆಗೆದುಕೊಂಡು ಸಿಪ್ಪೆ ತೆಗೆಯಿರಿ. ಈಗ ಮಿಕ್ಸರ್‌ಗೆ ಹಾಗಲಕಾಯಿ, ಸೌತೆಕಾಯಿ ಮತ್ತು ಟೊಮೆಟೊ ಹಾಕಿ. ಇದರ ನಂತರ ಅರ್ಧ ಗ್ಲಾಸ್ ನೀರು ಸೇರಿಸಿ ರುಬ್ಬಿಕೊಳ್ಳಿ. ನಂತರ ಫಿಲ್ಟರ್ ಮಾಡಿ ಕುಡಿಯಿರಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.