ಬೆಂಗಳೂರು : ದೇಹದಲ್ಲಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡದಿದ್ದರೆ, ಅದು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಮುಖ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಸಮಸ್ಯೆಗಳ ಅಪಾಯ ಹೆಚ್ಚು. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬೇಕಾದರೆ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಬೇಕು. ಈ ಆಹಾರಗಳ ಸಹಾಯದಿಂದ ದೇಹದಲ್ಲಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಬಹುದು. ಕೆಂಪು ತರಕಾರಿಗಳಿಂದ ತಯಾರಿಸಿದ ಜ್ಯೂಸ್ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಟೊಮೆಟೊ ರಸ: 
ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಟೊಮೆಟೊ ರಸವನ್ನು ಕುಡಿಯಬೇಕು. ಟೊಮೆಟೊ ರಸದಲ್ಲಿರುವ ಗುಣಲಕ್ಷಣಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವ ವಿಟಮಿನ್ ಸಿ, ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ ಗಳು, ಪೊಟ್ಯಾಸಿಯಮ್, ರಂಜಕ ಮುಂತಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. 


ಇದನ್ನೂ ಓದಿ :Health Tips: ನಿಮ್ಮನ್ನು ಕಾಡುವ ಕೆಮ್ಮಿಗೆ ಇಲ್ಲಿವೆ ಸೂಪರ್‌ ಮನೆಮದ್ದುಗಳು


ಈ ಎಲ್ಲಾ ಪೋಷಕಾಂಶಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಪ್ರತಿದಿನ 240 ಮಿಲಿ ಟೊಮೆಟೊ ರಸವನ್ನು ನಿಯಮಿತವಾಗಿ ಸೇವಿಸಿದರೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಸುಮಾರು 10 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎನ್ನುವುದು ಸಂಶೋಧನೆಗಳಲ್ಲಿ ಸಾಬೀತಾಗಿದೆ.


ಮನೆಯಲ್ಲಿ ಟೊಮೆಟೊ ರಸವನ್ನು ಹೇಗೆ ತಯಾರಿಸುವುದು ?
ಟೊಮೆಟೊ ಜ್ಯೂಸ್ ತಯಾರಿಸಲು ಅಗತ್ಯ ಪದಾರ್ಥಗಳು


ಟೊಮೆಟೊ - 1 ರಿಂದ 2 ತಾಜಾ
ಕಪ್ಪು ಉಪ್ಪು - 1 ಟೀಸ್ಪೂನ್


ವಿಧಾನ :
ಟೊಮೆಟೊವನ್ನು ಚೆನ್ನಾಗಿ ತೊಳೆದು ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಈ ರಸವನ್ನು ಸೇವಿಸಿ.ಈ ಜ್ಯೂಸ್ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.


ಟೊಮೆಟೊ ರಸವು ಸಿಟ್ರಿಕ್ ಜ್ಯೂಸ್ ಆಗಿರುವುದರಿಂದ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಮ್ಲೀಯತೆ, ಹೊಟ್ಟೆ ಉಬ್ಬುವುದು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು. ಇದನ್ನು ಊಟದ ನಂತರ ಅಥವಾ ಉಪಹಾರದ ನಂತರವೇ ಸೇವಿಸಬೇಕು. 


ಇದನ್ನೂ ಓದಿ :ಬೆಳಿಗ್ಗೆ ಈ ಎಲೆಯನ್ನು ಕುದಿಸಿದ ನೀರು ಕುಡಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !


ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬೀಟ್ರೂಟ್ ರಸ : 
ಬೀಟ್ರೂಟ್ ರಸವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಬ್ಬಿಣದ ಜೊತೆಗೆ, ಇದು ಜೀವಸತ್ವಗಳು, ಖನಿಜಗಳು ಮತ್ತು ಮುಖ್ಯವಾಗಿ ಫೈಬರ್ ಅನ್ನು ಹೊಂದಿರುತ್ತದೆ, ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.


ಬೀಟ್ರೂಟ್ ರಸ ತಯಾರಿಸಲು ಅಗತ್ಯ ಪದಾರ್ಥಗಳು :


ಬೀಟ್ರೂಟ್ - 1 ರಿಂದ 2
ಕಪ್ಪು ಉಪ್ಪು - 1 ಪಿಂಚ್
ನಿಂಬೆ ರಸ - 1 ಟೀಸ್ಪೂನ್


ಜ್ಯೂಸ್ ತಯಾರಿಸುವ ವಿಧಾನ  :
ಬೀಟ್ರೂಟ್ ಜ್ಯೂಸ್ ಮಾಡಲು, ಮೊದಲು 1 ರಿಂದ 2 ಬೀಟ್ರೂಟ್ ಅನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ನಂತರ ಇದನ್ನೂ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಬ್ಲಾಕ್ ಸಾಲ್ಟ್ ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸೇವಿಸುವುದರಿಂದ ಸಾಕಷ್ಟು ಅನುಕೂಲವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.