Watermelon Benefits : ಬೇಸಿಗೆಯ ಸುಡುವ ಶಾಖದಿಂದ ರಕ್ಷಿಸಿಕೊಳ್ಳಲು,  ಆಹಾರದಲ್ಲಿ ಆರೋಗ್ಯಕರ ಆಹಾರ ಸೇರಿಸಿಕೊಳ್ಳುವುದು ಬಹಳ ಮುಖ್ಯ. ಈ ಋತುವಿನಲ್ಲಿ ದೇಹದಲ್ಲಿ ಗರಿಷ್ಠ ನೀರಿನ ಕೊರತೆ ಎದುರಾಗುತ್ತದೆ. ನೀರಿನ ಕೊರತೆಯು ನಿರ್ಜಲೀಕರಣದಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ದೇಹದಲ್ಲಿ ಎದುರಾಗುವ ನೀರಿನ ಕೊರತೆಯನ್ನು ತಪ್ಪಿಸಲು ಆಹಾರದಲ್ಲಿ ನೀರು ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಬೇಕು.ಹೌದು,ನಾವಿಲ್ಲಿ ಹೇಳುತ್ತಿರುವುದು ಸುಮಾರು 90 ಪ್ರತಿಶತದಷ್ಟು ನೀರು ಕಂಡುಬರುವ ಒಂದು  ಹಣ್ಣಿನ ಬಗ್ಗೆ. 


COMMERCIAL BREAK
SCROLL TO CONTINUE READING

ನಾವು ಕಲ್ಲಂಗಡಿ ಹಣ್ಣಿನ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಒಳಗಿನಿಂದ ಕೆಂಪು ಮತ್ತು ಹೊರಗಿನಿಂದ ಹಸಿರು ಬಣ್ಣದ್ದಾಗಿದ್ದು, ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಈ ಹಣ್ಣು ಅಗತ್ಯ ಪೋಷಕಾಂಶಗಳಿಂದ ತುಂಬಿದೆ.ಫೈಬರ್,ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಎ,ವಿಟಮಿನ್ ಸಿ ಮುಂತಾದ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ. ಅಷ್ಟೇ ಅಲ್ಲ, ಲೈಕೋಪೀನ್ ಎಂಬ ಅಂಶವೂ ಇದರಲ್ಲಿ ಕಂಡುಬರುತ್ತದೆ. ಹಾಗಾದರೆ ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವುದರಿಂದ ಆಗುವ ಪ್ರಯೋಜನಗಳು ಯಾವುವು ನೋಡೋಣ. 


ಇದನ್ನೂ ಓದಿ : ಪುಟ್ಟ ಪುಟ್ಟ ಏಲಕ್ಕಿ… ದೊಡ್ಡ ದೊಡ್ಡ ಪ್ರಯೋಜನ: ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭಗಳು


ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು :
1.ನಿರ್ಜಲೀಕರಣ :

ಬೇಸಿಗೆಯಲ್ಲಿ ನಿರ್ಜಲೀಕರಣ ಮಲಬದ್ಧತೆ,ದೌರ್ಬಲ್ಯ, ತಲೆಸುತ್ತುವುದು,  ತಲೆನೋವು, ಒಣ ಬಾಯಿ,ವಾಯು ಮತ್ತು ಕಡಿಮೆ ರಕ್ತದೊತ್ತಡ ಮುಂತಾದ ಅನೇಕ ದೈಹಿಕ ಸಮಸ್ಯೆಗಳು ಎದುರಾಗುತ್ತದೆ. ಕಲ್ಲಂಗಡಿ ನೀರಿನಲ್ಲಿ ಸಮೃದ್ಧವಾಗಿರುವ ಹಣ್ಣು. ಆದ್ದರಿಂದ ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.


2.ಬೊಜ್ಜು :
ಕಲ್ಲಂಗಡಿ ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿರುವ ಹಣ್ಣು. ಇದರಲ್ಲಿ  ಫೈಬರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಸ್ಥೂಲಕಾಯತೆಯನ್ನು ಕಡಿಮೆ ಮಾಡಲು,ನಿಮ್ಮ ಆಹಾರದಲ್ಲಿ ಕಲ್ಲಂಗಡಿಯನ್ನು ಸೇರಿಸಿಕೊಳ್ಳಬಹುದು.


3.ದೃಷ್ಟಿ :
ಕಲ್ಲಂಗಡಿ ವಿಟಮಿನ್ ಎ ಯ ಉತ್ತಮ ಮೂಲವಾಗಿದೆ. ಇದು ಕಣ್ಣಿನ ರೆಟಿನಾದಲ್ಲಿ ವರ್ಣದ್ರವ್ಯಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.ಕಲ್ಲಂಗಡಿ ಸೇವನೆಯಿಂದ ಕಣ್ಣಿನ ದೃಷ್ಟಿ ಸುಧಾರಿಸಬಹುದು.


ಇದನ್ನೂ ಓದಿ : ಯಾವ ಪಥ್ಯವೂ ಬೇಕಿಲ್ಲ!ಮೊಸರಿಗೆ ಈ ಸೊಪ್ಪು ಸೇರಿಸಿ ತಿಂದರೆ ಸಾಕು ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್ !


4.ಜೀರ್ಣಕ್ರಿಯೆ  :
ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವುದರ ಜೊತೆಗೆ, ಕಲ್ಲಂಗಡಿ ಮಲಬದ್ಧತೆ, ಅತಿಸಾರ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳಿಂದಲೂ  ಪರಿಹಾರವನ್ನು ನೀಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ