Drinks for Period Cramps: ಸಾಮಾನ್ಯವಾಗಿ ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆನೋವು ಇದ್ದೇ ಇರುತ್ತದೆ. ಆ ದಿನಗಳಲ್ಲಿ ದೈನಂದಿನ ಕೆಲಸ ಮಾಡುವುದು ಸಹ ತುಂಬಾ ಕಷ್ಟಕರ. ನೋವು, ಕಿರಿಕಿರಿ, ಕೋಪ ಎಲ್ಲವೂ ಸುತ್ತ ಸುತ್ತುವ ಸಮಯವದು. ಹೊಟ್ಟೆ, ಬೆನ್ನು ಮತ್ತು ಕಾಲುಗಳಲ್ಲಿನ ಸೆಳೆತಗಳು ತುಂಬಾ ಕಾಡುವ ಸಮಯ. ಈ ನೋವು 1 ದಿನದಿಂದ 5 ದಿನಗಳವರೆಗೆ ಇರುತ್ತದೆ.


COMMERCIAL BREAK
SCROLL TO CONTINUE READING

ಪಿರಿಯಡ್ಸ್ ಸೆಳೆತವನ್ನು ಕಡಿಮೆ ಮಾಡಲು ಆಹಾರದ ಪದ್ಧತಿ ಬಹಳ ಮುಖ್ಯ. ಇದು ನಿಮಗೆ ನೋವಿನಿಂದ ಪರಿಹಾರವನ್ನು ನೀಡುವುದು ಮಾತ್ರವಲ್ಲದೆ ದೇಹದಲ್ಲಿನ ನಿರ್ಜಲೀಕರಣದಂತಹ ಸಮಸ್ಯೆಗಳನ್ನು ತಡೆಯುತ್ತದೆ. ದೇಹವು ಸರಿಯಾದ ಆಹಾರ ಮತ್ತು ಪಾನೀಯಗಳನ್ನು ಪಡೆದರೆ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.


ಇದನ್ನೂ ಓದಿ: ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?


ಮದರ್‌ ಹುಡ್ ಆಸ್ಪತ್ರೆಯ ಆಹಾರ ತಜ್ಞರು ಮತ್ತು ಪೌಷ್ಟಿಕತಜ್ಞ ಡಾ.ಹರಿ ಲಕ್ಷ್ಮಿ ಅವರು, ಪಿರಿಯಡ್ ನೋವಿಗೆ ಕೆಲ ಮನೆಮದ್ದನ್ನು ಹೇಳಿದ್ದಾರೆ. ಜೊತೆಗೆ ಈ ಒಂದು ಪಾನೀಯ ತಕ್ಷಣ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.


ಅತ್ಯಂತ ಮುಖ್ಯವಾದ ದ್ರವವೆಂದರೆ ನೀರು. ಮುಟ್ಟಿನ ಸಮಯದಲ್ಲಿ ಉಗುರುಬೆಚ್ಚಗಿನ ನೀರನ್ನು ಕುಡಿಯಬೇಕು. ಫ್ರಿಡ್ಜ್ ನೀರು ಒಳ್ಳೆಯದಲ್ಲ. ಇದು ಪಿರಿಯಡ್ಸ್ ಸೆಳೆತದಿಂದ ಸಾಕಷ್ಟು ಪರಿಹಾರವನ್ನು ನೀಡುತ್ತದೆ.


ಇನ್ನು ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ನಿಮಗೆ ಸೂಪರ್ ಫುಡ್ ಆಗಿ ಕಾರ್ಯನಿರ್ವಹಿಸುತ್ತದೆ. ನೋವಿನ ಸೆಳೆತಕ್ಕೆ ಶುಂಠಿ ನೀರು ತುಂಬಾ ಸಹಾಯಕ.


ಒಂದು ಲೋಟ ನೀರಿನಲ್ಲಿ 1 ಚಮಚ ತುರಿದ ಶುಂಠಿ ಸೇರಿಸಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಈ ಪಾನೀಯವನ್ನು ಉಗುರುಬೆಚ್ಚಗೆ ಸೇವಿಸಿದರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ: 10ನೇ ಕ್ಲಾಸ್’ನಲ್ಲಿ 3 ಬಾರಿ ಫೇಲ್… ಸರ್ಕಾರಿ ಕೆಲಸ ಬಿಟ್ಟು ಕ್ರಿಕೆಟ್’ಗೆ ಬಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಈತ ಜೂ.ಧೋನಿ ಎಂದೇ ಫೇಮಸ್


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.