ನಿರಂತರವಾಗಿ ಬರುತ್ತಿರುವ ಕೆಮ್ಮು ಈ ರೋಗಗಳ ಲಕ್ಷಣವೂ ಆಗಿರಬಹುದು .!
ಒಂದು ಅಥವಾ ಎರಡು ವಾರದ ನಂತರವೂ ಕೆಮ್ಮು ಗುಣವಾಗದಿದ್ದರೆ, ಅದು ಬೇರೆ ಯಾವುದಾದರೂ ಕಾಯಿಲೆಯ ಸಂಕೇತವಾಗಿರಬಹುದು.
ಬೆಂಗಳೂರು : ಚಳಿಗಾಲವು ಸಮೀಪಿಸುತ್ತಿದ್ದಂತೆಯೇ ನಾನಾ ರೀತಿಯ ಸೋಂಕಿನ ಅಪಾಯ ಕೂಡಾ ಕಾಡುತ್ತದೆ. ಇದರಿಂದಾಗಿ ಪದೇ ಪದೇ ಕೆಮ್ಮು ಬರುವುದು ಸಾಮಾನ್ಯವಾಗುತ್ತದೆ. ಮನೆಮದ್ದುಗಳು ಮತ್ತು ಔಷಧಿಗಳ ಮೂಲಕ ಕೆಮ್ಮಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಆದರೆ ಒಂದು ಅಥವಾ ಎರಡು ವಾರದ ನಂತರವೂ ಕೆಮ್ಮು ಗುಣವಾಗದಿದ್ದರೆ, ಅದು ಬೇರೆ ಯಾವುದಾದರೂ ಕಾಯಿಲೆಯ ಸಂಕೇತವಾಗಿರಬಹುದು. ಬಹಳ ಸಮಯದವರೆಗೆ ನಿರಂತರವಾಗಿ ಕೆಮ್ಮಿನ ಸಮಸ್ಯೆ ಕಾಡುತ್ತಿದ್ದರೆ, ಅದು ಕೆಲವು ಕಾಯಿಲೆಯ ಸಂಕೇತವಾಗಿರಬಹುದು.
ನಿರಂತರ ಕೆಮ್ಮು ಈ ರೋಗಗಳ ಸಂಕೇತವೇ? :
1. ಸೋಂಕು :
ಕೆಮ್ಮಿಗೆ ಮುಖ್ಯ ಕಾರಣವೆಂದರೆ ಸೋಂಕು. ಆದರೆ ಕೆಲವು ವಾರಗಳ ನಂತರವೂ ಕೆಮ್ಮು ನಿಲ್ಲದಿದ್ದರೆ, ಸೋಂಕು ಅಪಾಯಕಾರಿ ಮಟ್ಟವನ್ನು ತಲುಪಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇದು ಜ್ವರ ಮತ್ತು ನ್ಯುಮೋನಿಯಾದಂತಹ ಕಾಯಿಲೆಗಳ ಸಂಕೇತವೂ ಆಗಿರಬಹುದು.
ಇದನ್ನೂ ಓದಿ : Stress Relief: ಕೇವಲ 5 ನಿಮಿಷದಲ್ಲಿ ಒತ್ತಡದಿಂದ ವಿಮುಕ್ತಿ ಪಡೆಯಲು ಇಲ್ಲಿದೆ ಸುಲಭ ಪರಿಹಾರ
2. ಪೋಸ್ಟ್ ನೇಸಲ್ ಡ್ರಿಪ್ :
ಕೆಲವೊಮ್ಮೆ ಗಂಟಲಿನ ಹಿಂಭಾಗದಲ್ಲಿ ಕಫವು ಶೇಖರಗೊಳ್ಳಲು ಪ್ರಾರಂಭಿಸುತ್ತದೆ. ನಂತರ ಪದೇ ಪದೇ ಕಫ ಹೊರ ಬರುವಂತೆ ಅನ್ನಿಸುತ್ತಿರುತ್ತದೆ. ಇದನ್ನು ಪೋಸ್ಟ್ ನಾಸಲ್ ಡ್ರಿಪ್ ಎಂದು ಕರೆಯಲಾಗುತ್ತದೆ. ಮೂಗಿನಲ್ಲಿ ಸಂಗ್ರಹವಾಗುವ ಕಫ ಗಂಟಲಿಗೆ ಬಂದು, ನಿರಂತರ ಕೆಮ್ಮಿನ ಸಮಸ್ಯೆ ಉಂಟು ಮಾಡುತ್ತದೆ.
3. ಅಸ್ತಮಾ :
ಅಸ್ತಮಾ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಈ ಕಾರಣದಿಂದಾಗಿ, ಗಾಳಿ ಪೈಪ್ ಕುಗ್ಗುತ್ತದೆ ಅಥವಾ ಊದಿಕೊಳ್ಳುತ್ತದೆ. ನಿರಂತರ ಕೆಮ್ಮು ಅಸ್ತಮಾದ ಲಕ್ಷಣವಾಗಿರಬಹುದು. ಇದು ಹವಾಮಾನ ಬದಲಾವಣೆ ಮತ್ತು ವಾಯು ಮಾಲಿನ್ಯದಿಂದ ಸಮಸ್ಯೆ ಹೆಚ್ಚು ಗಂಭೀರವಾಗಬಹುದು.
ಇದನ್ನೂ ಓದಿ : Immunity Booster Drink: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಹರ್ಬಲ್ ಟೀ ಕುಡಿದು ನೋಡಿ...
4. ಜೀರ್ಣಕಾರಿ ಸಮಸ್ಯೆಗಳು :
ಸಾಮಾನ್ಯವಾಗಿ ಜೀರ್ಣಕಾರಿ ಸಮಸ್ಯೆಗಳು ಕೆಮ್ಮನ್ನು ಉಂಟುಮಾಡುವುದಿಲ್ಲ. ಆದರೆ ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಅಥವಾ ಆಸಿಡ್ ರಿಫ್ಲಕ್ಸ್ ಹೊಂದಿದ್ದರೆ, ಇದು ಆಹಾರದ ಪೈಪ್‌ಗೆ ಕೆಲವು ಆಹಾರವನ್ನು ಹಿಂತಿರುಗಿಸಲು ಕಾರಣವಾಗಬಹುದು. ಇದು ಪದೇ ಪದೇ ಕೆಮ್ಮು ಬರಲು ಕಾರಣವಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.