ರಕ್ತದೊತ್ತಡ ನಿಯಂತ್ರಣಕ್ಕೆ ಇಂಗು ರಾಮಬಾಣ ಉಪಾಯ, ಈ ರೀತಿ ಬಳಸಿ!
Controlling High BP: ಇತ್ತೀಚಿನ ದಿನಗಳಲ್ಲಿ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಇಂಗು ನಿಮಗೆ ತುಂಬಾ ಸಹಕಾರಿ ಸಾಬೀತಾಗಲಿದೆ. ಬನ್ನಿ ನೋಡೋಣ. (Health News In Kannada)
Controlling High BP: ಸಾಮಾನ್ಯವಾಗಿ ಇಂಗನ್ನು ಪ್ರತಿಯೊಂದು ಮನೆಯಲ್ಲಿಯೂ ಕೂಡ ಬಳಸಲಾಗುತ್ತದೆ. ಆದರೆ ಅನಾದಿ ಕಾಲದಿಂದಲೂ ಇಂಗನ್ನು ಅನೇಕ ರೀತಿಯ ಮನೆಮದ್ದುಗಳಲ್ಲಿ ಬಳಸಲಾಗುತ್ತಿದೆ. ವಿಶೇಷವಾಗಿ ಹೊಟ್ಟೆಯ ಸಮಸ್ಯೆಗಳಿಗೆ ಇದೊಂದು ರಾಮಬಾಣ ಉಪಾಯ ಎಂದು ಪರಿಗಣಿಸಲಾಗುತ್ತದೆ. ಇದೇ ವೇಳೆ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೀವು ಇಂಗನ್ನು ಬಳಸಬಹುದು. ಅಧಿಕ ರಕ್ತದೊತ್ತಡವು ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.ಇಂದು, ಪ್ರತಿಯೊಬ್ಬ ವ್ಯಕ್ತಿಯು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಇಂಗು ನಿಮಗೆ ಸಹಾಯ ಮಾಡುತ್ತದೆ. ಹೌದು, ಅಧಿಕ ರಕ್ತದೊತ್ತಡ ರೋಗಿಗಳಿಗೆ ಇಂಗು ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Health News In Kannada)
ರಕ್ತದೊತ್ತಡ ರೋಗಿಗಳು ಇಂಗನ್ನು ಈ ರೀತಿ ಬಳಸಿ
ಆಹಾರದಲ್ಲಿ ಇಂಗು ಬಳಸಿ- ಇಂಗು ಬಳಸುವ ಅತ್ಯುತ್ತಮ ಮತ್ತು ಸರಳವಾದ ವಿಧಾನವೆಂದರೆ ಅದನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು. ಇದಕ್ಕಾಗಿ ಮನೆಯಲ್ಲಿ ತಯಾರಿಸಿದ ಬೇಳೆಕಾಳುಗಳಿಂದ ಹಿಡಿದು ತರಕಾರಿಗಳಲ್ಲಿ ಇಂಗನ್ನು ಬಳಸಿ. ಇದರಿಂದ ನಿಮ್ಮ ಆಹಾರದ ರುಚಿಯೂ ಹೆಚ್ಚುತ್ತದೆ ಮತ್ತು ನಿಮ್ಮ ಬಿಪಿ ಕೂಡ ನಿಯಂತ್ರಣದಲ್ಲಿರುತ್ತದೆ.
ಜೇನುತುಪ್ಪ ಮತ್ತು ಒಣ ಶುಂಠಿಯೊಂದಿಗೆ ಇಂಗು- ರಕ್ತದೊತ್ತಡ ರೋಗಿಗಳು ಇಂಗನ್ನು ಜೇನುತುಪ್ಪ ಮತ್ತು ಒಣ ಶುಂಠಿಯ ಪುಡಿಯೊಂದಿಗೆ ಸೇವಿಸಬಹುದು. ಇದು ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ ಮತ್ತು ನಿಮ್ಮ ಬಿಪಿ ಸಹ ನಿಯಂತ್ರಣದಲ್ಲಿರುತ್ತದೆ.
ಅಜ್ವೈನ್ ಹಾಗೂ ಸೈಂಧವ ಲವಣದ ಜೊತೆಗೆ ಇಂಗಿನ ಬಳಕೆ- ನೀವು ಇಂಗುವನ್ನು ಚೂರ್ಣದ ರೂಪದಲ್ಲಿ ಕೂಡ ಬಳಸಬಹುದು. ಇದಕ್ಕಾಗಿ ನೀವು ಆಹಾರ ಸೇವಿಸಿದ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಅಜ್ವೈನ್ ತೆಗೆದುಕೊಂಡು ಅದಕ್ಕೆ ಚಿಟಿಕೆ ಸೈಂಧವ ಲವಣ ಹಾಗೂ ಚಿಟಿಕೆ ಇಂಗನ್ನು ಬೆರೆಸಿ ಸೇವಿಸಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ, ಗ್ಯಾಸ್, ಅಧಿಕ ಬಿಪಿ ಸಮಸ್ಯೆ ನಿವಾರಣೆಯಾಗುವುದಲ್ಲದೆ, ಹೊಟ್ಟೆನೋವು ಶಮನವಾಗುತ್ತದೆ.
ಇದನ್ನೂ ಓದಿ-ದೇಹವನ್ನು ನಿರ್ವಿಷಗೊಳಿಸಿ, ರಕ್ತವನ್ನು ಶುದ್ಧೀಕರಿಸುತ್ತವೆ ಈ ಪದಾರ್ಥಗಳು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.