Avoid These Refined Oils : ಹೃದಯಾಘಾತ ಮತ್ತು ಹೃದ್ರೋಗದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ  ದಿನೇ ದಿನೇ ಹೆಚ್ಚುತ್ತಿದೆ.  ಹೃದಯಾಘಾತಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಕೊಲೆಸ್ಟ್ರಾಲ್ ಹೆಚ್ಚಾಗುವುದು ಕೂಡಾ ಹೃದ್ರೋಗ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.  ಇನ್ನು ಉತ್ತಮ ಆರೋಗ್ಯಕ್ಕಾಗಿ ನಾವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು. ಮುಖ್ಯವಾಗಿ ನಾವು ಬಳಸುವ ಎಣ್ಣೆ ಬಗ್ಗೆ. ನಾವು ಅಡುಗೆಗೆ ಬಳಸುವ ಎಣ್ಣೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ  ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳದ ಕಾಯಿಲೆಯ ಅಪಾಯ ಕೂಡ ಹೆಚ್ಚಾಗುತ್ತದೆ. 


COMMERCIAL BREAK
SCROLL TO CONTINUE READING

ತಜ್ಞರು ಏನು ಹೇಳುತ್ತಾರೆ ? : 
ರಿಫೈನ್ಡ್ ಎಣ್ಣೆಯನ್ನು ಸೇವಿಸುವ ಅಪಾಯದ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಈ ಎಣ್ಣೆಗಳು ಕಡಿಮೆ ಬೆಲೆಗೆ ಸಿಗುತ್ತವೆ ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ಬಹುತೇಕ ಅಡುಗೆ ಮನೆಯಲ್ಲಿ ಈ ಎಣ್ಣೆಯನ್ನು ಬಳಸಲಾಗುತ್ತದೆ.  ಈ ಎಣ್ಣೆ ಅಗ್ಗದ ಬೆಲೆಗೆ ಸಿಗಬಹುದು. ಆದರೆ ಆರೋಗ್ಯದ ಮೇಲೆ ದುಬಾರಿಯಾಗಿ ಪರಿಣಮಿಸುತ್ತದೆ. 


ಇದನ್ನೂ ಓದಿ : Ayurveda Tips : ನೀರು ಕುಳಿತಲೇ, ಹಾಲು ನಿಂತಲ್ಲೇ ಕುಡಿಯಬೇಕು : ಯಾಕೆ ಗೊತ್ತಾ?


ಈ ಅಡುಗೆ ಎಣ್ಣೆಗಳನ್ನು ಬಳಕೆ ತಕ್ಷಣ ನಿಲ್ಲಿಸಿ : 


- ರೈಸ್ ಬ್ರಾನ್ ಆಯಿಲ್ 
- ಕಡಲೆಕಾಯಿ ಎಣ್ಣೆ 
- ಸೂರ್ಯಕಾಂತಿ ಎಣ್ಣೆ -
- ಕ್ಯಾನೋಲ ಆಯಿಲ್ 
- ಸೋಯಾಬೀನ್ ಎಣ್ಣೆ
- ಕಾರ್ನ್ ಎಣ್ಣೆ


ಸಂಸ್ಕರಿಸಿದ ಎಣ್ಣೆಯ ಬದಲಿಗೆ ಈ ಎಣ್ಣೆಗಳನ್ನು ಬಳಸಿ :
-ದೇಸಿ ತುಪ್ಪ
- ತೆಂಗಿನ ಎಣ್ಣೆ 
-ಸಾಸಿವೆ ಎಣ್ಣೆ, 
-ಎಳ್ಳೆಣ್ಣೆ 


ಇದನ್ನೂ ಓದಿ : Ragi Roti : ಚಳಿಗಾಲದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದು ರಾಗಿ ರೊಟ್ಟಿ!


 ಹಾಗಿದ್ದರೆ ಎಣ್ಣೆ ಬಳಕೆ ನಿಲ್ಲಿಸಬೇಕೆ? : 
ಉತ್ತಮ ಆರೋಗ್ಯ ಕಾಪಾಡುವ ಸಲುವಾಗಿ ಮತ್ತು ಸ್ಥೂಲಕಾಯತೆಯನ್ನು ತಪ್ಪಿಸುವ ಸಲುವಾಗಿ ಕಡಿಮೆ ಎಣ್ಣೆ ಸೇವಿಸಬೇಕು ನಿಜ. ಹಾಗೆಂದ ಮಾತ್ರಕ್ಕೆ ಎಣ್ಣೆಯನ್ನು ಬಳಸದೆಯೇ ಅಡುಗೆ ಮಾಡಬೇಕು. ಎಣ್ಣೆ ಇಲ್ಲದ ಆಹಾರ ತಿನ್ನಬೇಕು ಎಂದಲ್ಲ. ದೇಹದಲ್ಲಿ ಒಮೆಗಾ 3 ಕೊಬ್ಬಿನಾಂಶ ಇದ್ದರೆ ಮಾತ್ರ ಮೆದುಳಿನ ಬೆಳವಣಿಗೆ, ಹಾರ್ಮೋನ್ ಸ್ರವಿಸುವಿಕೆ ಮತ್ತು ರೋಗನಿರೋಧಕ ಶಕ್ತಿ ಉತ್ತಮವಾಗಿರುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.