Corn Silk: ಮೆಕ್ಕೆ ಜೋಳದ ಜುಟ್ಟಿನಲ್ಲಡಗಿದೆ ಆರೋಗ್ಯದ ಗುಟ್ಟು
Maize Silk Benefits: ಸಾಮಾನ್ಯವಾಗಿ ನಾವು ಮೆಕ್ಕೆಜೋಳವನ್ನು ಬೇಯಿಸುವಾಗ ಅದರ ಮೇಲಿರುವ ಸಿಪ್ಪೆ ಹಾಗೂ ಜುಟ್ಟನ್ನು ತೆಗೆದು ಡಸ್ಟ್ ಬಿನ್ ಗೆ ಹಾಕುತ್ತೇವೆ. ಆದರೆ, ಇನ್ಮುಂದೆ ಹಾಗೆ ಮಾಡಬೇಡಿ.
Benefits Of Corn Silk: ಮೆಕ್ಕೆ ಜೋಳದ ತೆನೆ ಒಂದು ಸ್ಥಳೀಯ ಆಹಾರವಾಗಿದ್ದು, ಸಾಕಷ್ಟು ಜನರನ್ನು ಅದು ತನ್ನತ್ತ ಆಕರ್ಷಿಸುತ್ತದೆ. ಭಾರತದಲ್ಲಿ ಬಹುತೇಕ ಜನರು ಇದನ್ನು ಬೆಂಕಿಯಲ್ಲಿ ಸುಟ್ಟು ಅಥವಾ ಉಪ್ಪಿನ ನೀರಿನಲ್ಲಿ ಕುದಿಸಿ ತಿನ್ನುತ್ತಾರೆ. ಮೆಕ್ಕೆ ಜೋಳದ ಕಾಳುಗಳಲ್ಲಿ ಫೈಬರ್, ವಿಟಮಿನ್ ಸಿ, ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಗಳು ಹೇರಳ ಪ್ರಮಾಣದಲ್ಲಿರುತ್ತವೆ. ಇದೆ. ಕಾರಣದಿಂದ ಇದನ್ನು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಸಾಮಾನ್ಯವಾಗಿ ಮೆಕ್ಕೆ ತೆನೆಯನ್ನು ಸೇವಿಸುವಾಗ ನಾವು ಅದರ ಮೇಲಿರುವ ಸಿಪ್ಪೆ ಸುಲಿದು ಅದರ ಜುಟ್ಟನ್ನು ಕಸದ ತೊಟ್ಟಿಗೆ ಹಾಕುತ್ತವೆ. ಆದರೆ, ಮೆಕ್ಕೆ ಜುಟ್ಟಿನ ಆರೋಗ್ಯಕರ ಲಾಭಗಳನ್ನು ನೀವು ತಿಳಿದರೆ, ನೀವು ನಿಮ್ಮ ತಪ್ಪು ಪುನರಾವರ್ತಿಸುವುದಿಲ್ಲ. ಮೆಕ್ಕೆ ಜೋಳದ ಜುಟ್ಟಿನಿಂದ ನಾವು ಯಾವ ಯಾವ ಲಾಭಗಳನ್ನು ಪಡೆಯಬಹುದು ಎಂಬುದರ ಕುರಿತು ದೇಶದ ನ್ಯೂಟ್ರಿಶನ್ ತಜ್ಞ ನಿಖಿಲ್ ವತ್ಸ್ ಹೇಳಿದ್ದಾರೆ.
ಮೆಕ್ಕೆಜೋಳದ ಜುಟ್ಟಿನ ಲಾಭಗಳು
1. ಕೊಲೆಸ್ಟ್ರಾಲ್ ನಿಯಂತ್ರಣ
ಕೆಟ್ಟ ಕೊಲೆಸ್ಟ್ರಾಲ್ ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ, ಅದನ್ನು ಸಮಯಕ್ಕೆ ನಿಯಂತ್ರಿಸುವುದು ಅವಶ್ಯಕ, ಇಲ್ಲದಿದ್ದರೆ ಹೃದಯ ಕಾಯಿಲೆಗಳ ಅಪಾಯವಿದೆ. ಇಂತಹ ಪರಿಸ್ಥಿತಿಯಲ್ಲಿ, ಕಾರ್ನ್ ಸಿಲ್ಕ್ ಸೇವನೆಯಿಂದ ರಕ್ತನಾಳಗಳಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.
2. ಮಧುಮೇಹ ನಿಯಂತ್ರಿಸುತ್ತದೆ
ಮೆಕ್ಕೆ ಜುಟ್ಟು ಮಧುಮೇಹದಿಂದ ಬಳಲುತ್ತಿರುವವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಮೆಕ್ಕೆ ಜೋಳದ ಜುಟ್ಟು ಮಧುಮೇಹವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
3. ಇಮ್ಯೂನಿಟಿ ಹೆಚ್ಚಳ
ಕೊರಾನಾ ಕಾಲದಿಂದಲೂ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಇದರಿಂದ ಸೋಂಕನ್ನು ತಪ್ಪಿಸಬಹುದು. ವಿಟಮಿನ್ ಸಿ ಕಾರ್ನ್ ಫೈಬರ್ನಲ್ಲಿ ನಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುವುದರಿಂದ, ಅದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
4. ಜೀರ್ಣಕ್ರಿಯೆಗೆ ಸಹಾಯಕಾರಿ
ಉದರ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವವರಿಗೆ, ಮೆಕ್ಕೆ ಜುಟ್ಟು ಸೇವಿಸುವುದು ಅವಶ್ಯಕವಾಗಿದೆ, ಏಕೆಂದರೆ ಈ ಈ ಜುಟ್ಟು ಹೇರಳ ಪ್ರಮಾಣದಲ್ಲಿ ನಾರಿನಂಶ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಹಾಯಕವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ-Taming Thyroid: ಈ ಚಹಾ ಸೇವನೆಯಿಂದ ಥೈರಾಯಿಡ್ ಸಮಸ್ಯೆ ನಿವಾರಣೆಯ ಜೊತೆಗೆ ಈ ಕಾಯಿಲೆಗಳನ್ನು ಕೂಡ ಗುಣಪಡಿಸಬಹುದು
5. ಗರ್ಭಧಾರಣೆಯಲ್ಲಿ ಪ್ರಯೋಜನಕಾರಿ
ಗರ್ಭಿಣಿಯರು ಕಾರ್ನ್ ಫೈಬರ್ ಅನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಕಂಡುಬರುತ್ತದೆ, ಇದು ನಿರೀಕ್ಷಿತ ತಾಯಿ ಮತ್ತು ಹೊಟ್ಟೆಯಲ್ಲಿರುವ ಮಗುವಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಇದನ್ನೂ ಓದಿ-Super Food : ಸೊಂಟ ನೋವಿನಿಂದ ಹಿಡಿದು ಡಯಾಬಿಟಿಸ್ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ರಾಮಬಾಣ ಈ ಹಸಿರು ತರಕಾರಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.